
ಉತ್ತರಪ್ರದೇಶ: ಕಲೆವೊಂದು ಸಲ ಜನರು ಅಮಾನವೀಯತೆಯಿಂದ ನಡೆದುಕೊಂಡಿರುವುದನ್ನು ಕಾಣಬಹದು. ಇದೇ ರೀತಿಯಾಗಿ ಉತ್ತರ ಪ್ರದೇಶದ ಕನೌಜ್ನಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದು, ಸಹಾಯಕ್ಕೆ ಅಂಗಲಾಚುತ್ತಿದ್ದಾಳೆ. ಆದರೆ ಈಕೆಯ ಸಹಾಯಕ್ಕೆ ಯಾರು ಕೂಡ ಧಾವಿಸದೆ, ಬಾಲಕಿಯ ನರಳಾಟವನ್ನು ವಿಡಿಯೋ ಮಾಡುತ್ತಾ ನಿಂತಿದ್ದು, ಅಮಾನವಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಕನೌಜ್ನ ದಕ್ ಬಾಂಗ್ಲಾ ಅತಿಥಿ ಗೃಹದ ಹಿಂದೆ ಎಸೆಯಲಾಗಿದ್ದು, ಆಕೆಯ ತಲೆ ಸೇರಿದಂತೆ ದೇಹದ ಹಲವು ಕಡೆ ಗಾಯಗಳಾಗಿವೆ ಎಂದು ಸ್ಥಳಿಯರು ಆರೋಪಿಸಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ.
https://twitter.com/NigarNawab/status/1584450742701928448?ref_src=twsrc%5Etfw%7Ctwcamp%5Etweetembed%7Ctwterm%5E1584450742701928448%7Ctwgr%5Eae1d4447d506c10f72e30b97bf6d4fd1a889ef6b%7Ctwcon%5Es1_c10&ref_url=https%3A%2F%2Ftv9kannada.com%2Fnational%2Futtar-pradesh-teen-girl-lay-bleeding-asking-for-help-but-people-not-helped-her-vkb-au55-460341.ಹತ್ಮಲ್
ವೀಡಿಯೊದಲ್ಲಿ, ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಆಕೆಯ ಸುತ್ತ ನಿಂತ ಪುರುಷರು ಆಕೆಯ ಸಹಾಯಕ್ಕೆ ಬರದೆ ವಿಡಿಯೋ ಮಾಡುತ್ತಾ ನಿಂತಿದ್ದಾರೆ. ವೀಡಿಯೊದಲ್ಲಿ ಓರ್ವ ಪುರುಷ ಪೊಲೀಸರಿಗೆ ಮಾಹಿತಿ ನೀಡಿದ್ದೀರಾ ಎಂದು ಕೇಳುತ್ತಿದ್ದಾನೆ. ಇನ್ನೊಬ್ಬ ಪೊಲೀಸ್ ಮುಖ್ಯಸ್ಥರ ಸಂಖ್ಯೆಯನ್ನು ಕೇಳಿದನು. ಆದರೆ ಬಾಲಕಿಗೆ ಸಹಾಯ ಮಾಡುವ ಯಾವುದೇ ಪ್ರಯತ್ನವಿಲ್ಲದೆ ಚಿತ್ರೀಕರಣ ಮಾಡುತ್ತಾ ನಿಂತಿದ್ದಾರೆ. ಪೊಲೀಸರು ಬರುವವರೆಗೂ ಆಕೆ ಸಹಾಯಕ್ಕಾಗಿ ಯಾರು ಕೂಡ ಮುಂದಾಗಲಿಲ್ಲ ಎಂದು ವರದಿಯಾಗಿದೆ.
ಕೆಲವು ಸಮಯದ ಬಳಿಕ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಗಾಯಗೊಂಡ ಹುಡುಗಿಯನ್ನು ಎತ್ತುಕೊಂಡು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಬಾಲಕಿಯ ಕುಟುಂಬದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಎಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಅವರ ಹೇಳಿಕೆಯನ್ನು ತಳ್ಳಿಹಾಕಿದ್ದು, ಸದ್ಯ ಯಾವುದೇ ತೀರ್ಮಾನಕ್ಕೆ ಬರಲು ಆಗುವುದಿಲ್ಲ ಗುರ್ಸಹೈಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಪಾಂಡೆ ತಿಳಿಸಿದ್ದಾರೆ.