

ನವದೆಹಲಿ: ಜಿಹಾದಿ ಪರಿಕಲ್ಪನೆ ಕೇವಲ ಇಸ್ಲಾಂನಲ್ಲಿ ಮಾತ್ರ ಇಲ್ಲ. ಇಂಥ ಪರಿಕಲ್ಪನೆ ಭಗವದ್ಗೀತೆ ಮತ್ತು ಕ್ರೈಸ್ತರಲ್ಲೂ ಇದೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಗುರುವಾರ ಇಲ್ಲಿ ನಡೆದ ಮಾಜಿ ಕೇಂದ್ರ ಸಚಿವ ಮೊಹ್ಸೀನಾ ಕಿದ್ವಾಯಿ (Mohsina Kidwai) ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್ (Shivraj Patil) ‘ಇಸ್ಲಾಂನಲ್ಲಿನ ಜಿಹಾದ್ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಉತ್ತಮ ಉದ್ದೇಶದಿಂದ, ಉತ್ತಮ ಕೆಲಸಗಳನ್ನು ಮಾಡಿದಾಗಲೂ ಅದನ್ನು ಯಾರು ಅರ್ಥ ಮಾಡಿಕೊಳ್ಳದೇ ಇದ್ದಾಗ ನೀವು ಬಲಪ್ರಯೋಗ ಮಾಡಬಹುದು ಎಂದು ಧರ್ಮದಲ್ಲಿ ಹೇಳಲಾಗುತ್ತದೆ. ಇಂಥ ಪರಿಕಲ್ಪನೆ ಕೇವಲ ಇಸ್ಲಾಂನಲ್ಲಿ (Islam) ಮಾತ್ರವಲ್ಲ. ಮಹಾಭಾರತ, ಭಗವದ್ಗೀತೆಯಲ್ಲೂ ಇದೆ. ಮಹಾಭಾರತದ ಯುದ್ಧದ ವೇಳೆ ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ (ಧರ್ಮಯುದ್ಧ) ಬಗ್ಗೆ ಪಾಠ ಮಾಡುತ್ತಾನೆ. ಇಂಥ ಪರಿಕಲ್ಪನೆ ಕ್ರೈಸ್ತರಲ್ಲೂ ಇದೆ ಎಂದು ಹೇಳಿದ್ದಾರೆ.
ಮಗೆ ಎಲ್ಲವನ್ನೂ ವಿವರಿಸಿದ ಮೇಲೂ, ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದಾದರೆ, ನಿಮ್ಮ ವಿರುದ್ಧ ಶಸ್ತ್ರ ಹಿಡಿದು ಬಂದಾಗ ನೀವು ಓಡಿಹೋಗಲಾರಿರಿ. ಜೊತೆಗೆ ಅದನ್ನು ನೀವು ಜಿಹಾದ್ (Jihad) ಎಂದು ಕೂಡಾ ಹೇಳಲಾಗದು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಪಾಟೀಲ್ ತಮ್ಮ ಹೇಳಿಕೆ ನೀಡಿದ್ದಾರೆ.