

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagowda Patil Yatnal) ಯಾವ ಪಕ್ಷದ ನಾಯಕರು? ಎಂದು ಬಿಜೆಪಿ ನಾಯಕರಿಗೆ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ (Karnataka Congress) ಪ್ರಶ್ನೆ ಕೇಳಿದೆ. ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ (BJP Leader Arun Singh) ಹೇಳಿದ್ದಾರೆ. ಹಾಗಾದ್ರೆ ಯತ್ನಾಳ್ ಯಾವ ಪಕ್ಷದ ನಾಯಕರು? ಯತ್ನಾಳರನ್ನು ಉಚ್ಛಾಟನೆ (Expell) ಮಾಡುವಿರಾ? ಅವರು ಶಾಸಕರು ಅಷ್ಟೇ ಎಂದಿದ್ದಾರೆ ಅರುಣ್ ಸಿಂಗ್. ಹಾಗಿದ್ರೆ ಬಿಜೆಪಿಗೆ ಶಾಸಕರೆಂದರೆ (MLAs) ಕೇವಲವೇ? ಯತ್ನಾಳರನ್ನು ನಿಯಂತ್ರಿಸಲಾಗದಷ್ಟು ರಾಜ್ಯ ಬಿಜೆಪಿ (Karnataka BJP) ಅಸಹಾಯಕವಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಪೇ ಸಿಎಂ ಅಭಿಯಾನದ ಬಳಿಕ ಮತ್ತೊಮ್ಮೆ ಸೇ ಸಿಎಂ ಎಂದು ಅಭಿಯಾನ ಮಾಡಲು ತಯಾರಿ ಮಾಡಿಕೊಂಡಿದೆ. ಈಗಾಗಲೇ ಬಿಜೆಪಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಸರ್ಕಾರಕ್ಕೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಿದೆ.
ಈ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ, ಸೇ ಸಿಎಂ ಅಭಿಯಾನ ಮಾಡುವುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರದ್ದು 90% ವಚನ ವಂಚನೆ, 40% ಕಮಿಷನ್ ಲೂಟಿ 100% ನೈತಿಕ ಅದಃಪತನ. ಅಂಗೈಯಲ್ಲಿ ಆಕಾಶ ತೋರಿಸುವ ಭರವಸೆಗಳನ್ನು ನೀಡಿ, ಅದರಲ್ಲಿ 90% ಕೂಡ ಈಡೇರಿಸದ ಸರ್ಕಾರ ಈಗ ತಮ್ಮದೇ ಪ್ರಣಾಳಿಕೆ ಬಗ್ಗೆ ಮೌನವಾಗಿದೆ. ದಮ್ಮು, ತಾಕತ್ತಿದ್ದರೆ ಪ್ರಣಾಳಿಕೆಯ ಚರ್ಚೆಗೆ ಸಿದ್ದವೇ ಸಿಎಂ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಲಾಲ್‌ಬಾಗ್ ಸಿದ್ಧಾಪುರದ ಜಮೀನುಗಳ ಕುರಿತ ಸುಳ್ಳಿನ ಕಂತೆಗಳ ಮೂಲಕ ನನ್ನ ಚಾರಿತ್ರ್ಯಹನನ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯ ಮರಿನಾಯಕನ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. ಭೂ ಹಗರಣಗಳನ್ನು ಬಯಲಿಗೆಳೆಯುವ ಪ್ರಾಮಾಣಿಕವಾದ ಉದ್ದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಹೊಂದಿದ್ದರೆ 2008 ರಿಂದ ಇದುವರೆಗೆ ಬೆಂಗಳೂರು ಮತ್ತು ರಾಜ್ಯದ ಬೇರೆ ನಗರಗಳಲ್ಲಿನ ಜಮೀನು ಉಪಯೋಗ ಬದಲಾವಣೆಯ ಪ್ರತಿ ಪ್ರಕರಣದ ಮಾಹಿತಿಯನ್ನೂ ಬಿಡುಗಡೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.