

ಅಮೆರಿಕನ್ ಡಾಲರ್ ವಿರುದ್ಧ ಭಾರತೀಯ ರುಪಾಯಿ 82.38 ರೂ.ಗೆ ಕುಸಿದಿದೆ. ಇದು ಐತಿಹಾಸಿಕ ದಾಖಲೆಯ ಕುಸಿತವಾಗಿದ್ದು, ಭಾರತೀಯ ಕರೆನ್ಸಿ ಮೇಲೇಲುವ ಸ್ಥಿತಿಯ ಬಗ್ಗೆ ಆರ್ಥಿಕ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಈತನ್ಮಧ್ಯೆ, ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಎಲ್ಲಾ ತರ್ಕಬದ್ಧತೆಯ ನಿಯಮಗಳನ್ನು ಗಾಳಿಗೆ ತೂರಿ, “ರುಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ” ಎಂದು ಹೇಳಿದೆ.
ಅಮೆರಿಕದ ವಾಶಿಂಗ್‌ಟನ್ ಡಿಸಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ಒಕ್ಕೂಟ ಸರ್ಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ರೂಪಾಯಿ ಮೌಲ್ಯದಲ್ಲಿ 8% ದಷ್ಟು ಕುಸಿದಿರುವುದನ್ನು ಸಮರ್ಥಿಸಿಕೊಂಡಿದ್ದರು. “ರುಪಾಯಿ ಕುಸಿಯುತ್ತಿಲ್ಲ, ಬದಲಾಗಿ ಅಮೇರಿಕನ್ ಡಾಲರ್ ಬಲಗೊಳ್ಳುತ್ತಿದೆ” ಎಂದು ಅವರು ಹೇಳಿದ್ದರು.
ಸಚಿವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವ್ಯಂಗ್ಯಕ್ಕೆ ಈಡಾಗಿದೆ. ವಿಪಕ್ಷಗಳು ಸಚಿವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದೆ.
ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೂಡ ಸಚಿವರನ್ನು ವ್ಯಂಗ್ಯವಾಡಿದ್ದಾರೆ. “ಶುಭಾಶಯಗಳು, ಜೆಎನ್‌ಯು ವಿಫಲವಾಗಿಲ್ಲ” ಎಂದು ಬರೆದಿರುವ ಅವರು, ‘‘ನಾವು ಪಂದ್ಯ ಸೋತಿಲ್ಲ, ನಮ್ಮ ವಿರುದ್ಧ ಇರುವ ತಂಡ ಗೆದ್ದಿದೆ” ಎಂದು ಬರೆದಿರುವ ಜೊತೆಗೆ ನಿರ್ಮಲಾ ಅವರ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
https://twitter.com/Swamy39/status/1581600794058829826/photo/1?ref_src=twsrc%5Etfw%7Ctwcamp%5Etweetembed%7Ctwterm%5E1581600794058829826%7Ctwgr%5E107669b9bc85b45ffc17c49c60b290720d4977b4%7Ctwcon%5Es1_&ref_url=https%3A%2F%2Fnaanugauri.com%2Fsitharaman-school-of-economics-troll-for-statement-rupee-is-not-depreciating-dollar-is-strengthening%2ಫ್ರೆಂಡ್
ಆಮ್ ಆದ್ಮಿ ಪಕ್ಷ ನಿರ್ಮಲಾ ಅವರನ್ನು ಟೀಕಿಸಿದ್ದು, “ಮೋದಿ ಅವರ ‘ಸ್ಕೂಲ್ ಆಫ್ ಲಾಜಿಕ್’ನ ಹೆಮ್ಮೆಯ ವಿದ್ಯಾರ್ಥಿ” ಎಂದು ವಿಡಿಯೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ, ನಿರ್ಮಲಾ ಅವರ ವೈರಲ್ ಹೇಳಿಕೆ ಮತ್ತು ಪ್ರಧಾನಿ ಮೋದಿ ಅವರು ತಾಪಮಾನ ಹೆಚ್ಚಿರುವ ಕುರಿತು ನೀಡಿರುವ ಹೇಳಿಕೆಯನ್ನು ನೀಡಲಾಗಿದೆ.
ತಾಪಮಾನ ಬದಲಾವಣೆ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಕೇಳಿದಾಗ ಅವರು, “ತಾಪಮಾನ ಬದಲಾಗಿಲ್ಲ, ವಯಸ್ಸು ಹೆಚ್ಚಾದ ಕಾರಣ ಸಹಿಸುವ ಶಕ್ತಿ ಕಡಿಮೆಯಾದಾಗ ತಾಪಮಾನ ಹೆಚ್ಚಾದಂತೆ ಅನಿಸುತ್ತದೆ. ತಾಪಮಾನ ಬದಲಾಗಿಲ್ಲ, ನಾವು ಬದಲಾಗಿದ್ದೇವೆ” ಎಂದು ಮೋದಿ ಹೇಳಿದ್ದರು. ಈ ಹೇಳಕೆ ಕೂಡಾ ವ್ಯಾಪಕ ಟ್ರೋಲ್‌ಗೆ ಒಳಗಾಗಿತ್ತು.
ಡಿಎಂಕೆ ನಾಯಕರಾದ ಇಸೈ ಅವರು, ಸಚಿವರ ಈ ಹೇಳಿಕೆಗೆ ಅವರು ಅರ್ಥಶಾಸ್ತ್ರದ ನೋಬೆಲ್ ಪಡೆಯಬೇಕು ಎಂದು ವ್ಯಂಗ್ಯವಾಗಿದ್ದಾರೆ.
https://twitter.com/satishacharya/status/1581841349036232706/photo/1?ref_src=twsrc%5Etfw%7Ctwcamp%5Etweetembed%7Ctwterm%5E1581841349036232706%7Ctwgr%5E107669b9bc85b45ffc17c49c60b290720d4977b4%7Ctwcon%5Es1_&ref_url=https%3A%2F%2Fnaanugauri.com%2Fsitharaman-school-of-economics-troll-for-statement-rupee-is-not-depreciating-dollar-is-strengthening%2F