Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಗೋಮಾಂಸ ಸಾಗಾಟ ಆರೋಪ.. ಬೆಳಗಾವಿಯಲ್ಲಿ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ

    ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ!

    ಧರ್ಮಸ್ಥಳ ಪ್ರಕರಣ: ತಿಮರೋಡಿ-ಚಿನ್ನಯ್ಯ ಸಂಭಾಷಣೆಯ 8ನೇ ವಿಡಿಯೋ ಬಿಡುಗಡೆ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    ಗಣೇಶನಿಗೆ ಚಪ್ಪಲಿ ಹಾರ: ಬೇಲೂರಿನಲ್ಲಿ ಕೋಲಾಹಲ ಎಬ್ಬಿಸಿದ್ದ ಮಹಿಳೆ ಲೀಲಮ್ಮ ಬಂಧನ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

    Breaking: ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಭಾಷಣ.. ಬಿಗ್​​ ಅನೌನ್ಸ್​ಮೆಂಟ್​ ನಿರೀಕ್ಷೆ

    ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ – 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    ಧರ್ಮಸ್ಥಳ ಪ್ರಕರಣ: ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

United States ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಟೀಕಿಸುವ ಜಾಹೀರಾತು: ಭಾರತಕ್ಕೆ ಮಸಿ ಬಳಿಯುವ ಯತ್ನ

editor tv by editor tv
October 16, 2022
in ರಾಷ್ಟ್ರೀಯ, ಸುದ್ದಿ
0
United States ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಟೀಕಿಸುವ ಜಾಹೀರಾತು: ಭಾರತಕ್ಕೆ ಮಸಿ ಬಳಿಯುವ ಯತ್ನ
1.9k
VIEWS
Share on FacebookShare on TwitterShare on Whatsapp

ನವದೆಹಲಿ: ಅಮೆರಿಕದ (United States) ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯ (Wall Street Journal News Paper) ಮುಖಪುಟದಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಮತ್ತು ಇತರೆ ಹಲವು ಹಿರಿಯ ಅಧಿಕಾರಿಗಳನ್ನು ಟೀಕಿಸುವ ಮತ್ತು ಅವರ ವಿರುದ್ಧ ನಿರ್ಬಂಧ ಹೇರುವಂತೆ ಕೋರುವ ಜಾಹೀರಾತೊಂದು (Advertisement) ಅಕ್ಟೋಬರ್‌ 13ರಂದು ಪ್ರಕಟವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕ ಭೇಟಿಯ ವೇಳೆಯೇ, ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಮಸಿ ಬಳಿಯುವ ಯತ್ನವನ್ನು ಅಮೆರಿಕ ಮೂಲದ ‘ಫ್ರಂಟಿಯ​ರ್ಸ್‌ ಆಫ್‌ ಫ್ರೀಡಂ’ (Frontiers of Freedom) ಎಂಬ ಸಂಸ್ಥೆ ಜಾಹೀರಾತಿನ ಮೂಲಕ ನಡೆಸಿದೆ. ಈ ಸಂಸ್ಥೆಯ ಹಿಂದೆ ಬೆಂಗಳೂರು ಮೂಲದ ದೇವಾಸ್‌ (Devas) ಸಂಸ್ಥೆಯ ಮಾಜಿ ಸಿಇಒ, ದೇಶಭ್ರಷ್ಟ ಉದ್ಯಮಿ ರಾಮಚಂದ್ರ ವಿಶ್ವನಾಥನ್‌ ಎಂಬಾತನ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಜಾಹೀರಾತಲ್ಲಿ ಏನಿದೆ?:‘ಮೋದಿ ಸರ್ಕಾರದ ಈ ಅಧಿಕಾರಿಗಳು ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ವೈರಿ ಉದ್ಯಮಿಗಳನ್ನು ಮಟ್ಟಹಾಕಲು ನೆಲದ ಕಾನೂನನ್ನು ಅಸ್ತ್ರಗಳಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಹೂಡಿಕೆದಾರರಿಗೆ ಅಸುರಕ್ಷಿತ ಮಾಡಿದ್ದಾರೆ. ಹೀಗಾಗಿ ಇವರೆಲ್ಲರ ವಿರುದ್ಧ ನಿರ್ಬಂಧ ಹೇರಬೇಕು. ಇವರಿಗೆ ವೀಸಾ ನೀಡಿದ್ದರೆ ರದ್ದು ಮಾಡಬೇಕು. ಅಮೆರಿಕದಲ್ಲಿನ ಅವರ ಆಸ್ತಿ ಜಪ್ತಿ ಮಾಡಬೇಕು. ಇದಕ್ಕಾಗಿ ಅಧ್ಯಕ್ಷ ಜೋ ಬೈಡೆನ್‌ ಅವರು ಮ್ಯಾಗ್ನಿಟ್‌ಸ್ಕೈ ಕಾಯ್ದೆ ಬಳಸಬೇಕು (Magnitsky Human Rights Accountability Act)’ ಎಂದು ಹೇಳಲಾಗಿದೆ.

Shameful weaponisation of American media by fraudsters.
This shockingly vile ad targeting #India and its Government appeared in @WSJ .
Do you know who is behind this and similar ads?
This ad campaign is being run by fugitive Ramachandra Vishwanathan, who was the CEO of Devas.
n1 pic.twitter.com/o7EWFmMsSR

— Kanchan Gupta 🇮🇳 (@KanchanGupta) October 15, 2022

ಯಾರ ಹೆಸರು?:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಇಸ್ರೋದ ಅಂಗಸಂಸ್ಥೆ ಆ್ಯಂಟ್ರಿಕ್ಸ್‌ನ ರಾಕೇಶ್‌ ಶಶಿಭೂಷಣ್‌, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಸುಪ್ರೀಂಕೋರ್ಟ್‌ನ ಜಡ್ಜ್‌ಗಳಾದ ನ್ಯಾ.ಹೇಮಂತ್‌ ಗುಪ್ತಾ, ವಿ.ರಾಮಸುಬ್ರಮಣಿಯನ್‌, ಸಿಬಿಐ ಡಿಎಸ್‌ಪಿ ಆಶಿಶ್‌, ಇಡಿ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಸೇರಿದಂತೆ 12 ಜನರ ಹೆಸರು ಪ್ರಸ್ತಾಪಿಸಲಾಗಿದೆ.

ಯಾರ ಕೈವಾಡ?:ಈ ಜಾಹೀರಾತನ್ನು ‘ಫ್ರಂಟಿಯ​ರ್ಸ್‌ ಆಫ್‌ ಫ್ರೀಡಂ’ ಎಂಬ ಸಂಸ್ಥೆ ನೀಡಿದ್ದರೂ ಅದರ ಹಿಂದೆ ಈ ಹಿಂದೆ ಇಸ್ರೋದ ಅಂಗಸಂಸ್ಥೆಯ ಆ್ಯಂಟ್ರಿಕ್ಸ್‌ಗೆ ವಂಚಿಸಿದ ಪ್ರಕರಣದ ಆರೋಪಿ, ಹಾಲಿ ದೇಶಭ್ರಷ್ಟನಾಗಿರುವ ಬೆಂಗಳೂರು ಮೂಲದ ದೇವಾಸ್‌ ಕಂಪನಿಯ ಮಾಜಿ ಸಿಇಒ ರಾಮಚಂದ್ರ ವಿಶ್ವನಾಥನ್‌ ಎಂಬಾತನ ಕೈವಾಡವಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಶಂಕಿಸಿವೆ. ಕಾರಣ, ಈತನ ವಿರುದ್ಧ ತನಿಖೆ ನಡೆಸಿದವರ ಬಹುತೇಕ ಹೆಸರುಗಳೇ ಜಾಹೀರಾತಿನಲ್ಲಿದೆ. ಜೊತೆಗೆ ಈ ಹಿಂದೆ ಈತನ ಈ ಮೇಲ್ಕಂಡವರ ಪೈಕಿ ಹಲವರ ವಿರುದ್ಧ ಇದೇ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ್ದ. ರಾಮಚಂದ್ರ ವಿಶ್ವನಾಥನ್‌ ಹಾಲಿ ಅಮೆರಿಕ ಪ್ರಜೆಯಾಗಿದ್ದಾನೆ.

Previous Post

ಸುರತ್ಕಲ್ : ಟೋಲ್ ಗೇಟ್ ಹೋರಾಟಗಾರರ ಮೇಲೆ ಪೊಲೀಸ್ ಬಲ ಪ್ರಯೋಗ ? 

Next Post

ಸುರತ್ಕಲ್‌ ಟೋಲ್‌ ವಿರೋಧಿ ಹೋರಾಟಗಾರರಿಗೆ ತಡರಾತ್ರಿ ನೋಟಿಸ್‌: ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್‌ ಎಚ್ಚರಿಕೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.