

ಸುರತ್ಕಲ್ : ಟೋಲ್ ಗೇಟ್ ಹೋರಾಟ ಸಮಿತಿಯಿಂದ ಅ.18ರಂದು ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟಕ್ಕೂ ಮುನ್ನ ಪೊಲೀಸ್ ಬಲ ಪ್ರಯೋಗ ನಡೆದಿದೆ ಎನ್ನಲಾಗಿದೆ.
ಟೋಲ್ ಹೋರಾಟಗಾರ ಮುಖಂಡರ ಮನೆಗೆ ಪೊಲೀಸರು ರಾತ್ರೋ ರಾತ್ರಿ ತೆರಳಿ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುವಂತೆ ಹಾಗೂ 2 ಲಕ್ಷ ರೂ.ಬಾಂಡ್ ಸಹಿತ ಕೊಡಬೇಕು ಎಂದು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರವಿವಾರ ಮಂಗಳೂರಿನಲ್ಲಿ ಆಯುಕ್ತರ ಕಚೇರಿಗೆ ಹೋರಾಟಗಾರರನ್ನು ಬರುವಂತೆ ತಿಳಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.