

ನಾಲ್ಕೂವರೆ ವರ್ಷದ ಚಿಗುರು ಮುರುಘಾ ಸ್ವಾಮಿ ಅವರಿಗೆ ಜನಿಸಿದ ಮಾಹಿತಿಯಿದ್ದು, ರಸ್ತೆ ಬದಿಯಲ್ಲಿ ಮಗವಿಟ್ಟು ತೆಗೆದುಕೊಳ್ಳುವ ಡ್ರಾಮಾ ನಡೆದಿರಬಹುದು. ಇದೇ ರೀತಿ ಹತ್ತಾರು ಮಕ್ಕಳನ್ನು ಅನಧಿಕೃತವಾಗಿ ಇರಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ಮುರುಘಾ ಮಠದಲ್ಲಿ (Muruga Mutt) ಹೆಣ್ಣು ಮಗು ಪತ್ತೆ ಆಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ನಾಲ್ಕುವರೆ ವರ್ಷದ ಚಿಗುರು ಎಂಬ ಹೆಣ್ಣು ಮಗು ಮುರುಘಾ ಮಠದ ಆವರಣದಲ್ಲಿ ಪತ್ತೆಯಾಗಿದೆ. ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ. ಸದ್ಯ ಚಿಗುರು ಹೆಸರಿನ ನಾಲ್ಕೂವರೆ ವರ್ಷದ ಮಗುವಿನ DNA ಟೆಸ್ಟ್ ಆಗಲಿ ಎಂದು ಸಾಮಾಜಿಕ ಕಾರ್ಯಕರ್ತ (Social Activist ) ಮಧುಕುಮಾರ್ (Madhu Kumar) ಪ್ರತಿಕ್ರಿಯೆ ಹೇಳಿದ್ದಾಲು. ಮಡಿಲು ಯೋಜನೆಗೆ ಮಾಹಿತಿ ನೀಡದೆ ಮುರುಘಾ ಮಠದಲ್ಲಿ ಅನಧಿಕೃತವಾಗಿ ಮಗು ಇರಿಸಿಕೊಂಡಿದ್ದರು. ನಾಲ್ಕೂವರೆ ವರ್ಷದ ಚಿಗುರು ಮುರುಘಾ ಸ್ವಾಮಿ ಅವರಿಗೆ ಜನಿಸಿದ ಮಾಹಿತಿಯಿದ್ದು, ರಸ್ತೆ ಬದಿ ಮಗವಿಟ್ಟು ತೆಗೆದುಕೊಳ್ಳುವ ಡ್ರಾಮಾ ನಡೆದಿರಬಹುದು. ಇದೇ ರೀತಿ ಹತ್ತಾರು ಮಕ್ಕಳನ್ನು ಅನಧಿಕೃತವಾಗಿ ಇರಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ಮಗು ಯಾರದ್ದು ಎಂದು ಸಂಶಯ ಇದೆ
ಚಿತ್ರದುರ್ಗದಲ್ಲಿ ಮಾತಾಡಿದ ಸಾಮಾಜಿಕ ಕಾರ್ಯಕರ್ತ ಡಾ.ಮಧುಕುಮಾರ್, ಈ ಸಂಬಂಧ ಡಿಸಿ, CWC, ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದೆ. ಮಗುವಿನ ರಕ್ಷಣೆ & ಪೋಷಕರ ಪತ್ತೆ ಮಾಡಿ ಎಂದು ತಿಳಿಸಿದ್ದೆ. ಸಾರ್ವಜನಿಕ ಅಭಿಪ್ರಾಯದಂತೆ DNA ಪರೀಕ್ಷೆ ನಡೆಯಲಿ ಮಗು ಯಾರದ್ದು ಎಂದು ಸಂಶಯ ಇದೆ. ಮಠದ ಟೀ ಸ್ಟಾಲ್ ಮುಂದೆ ಮಗು ಪತ್ತೆಯಾಗಿದೆ.
ಇದೆಲ್ಲಾ ನಾಟಕೀಯದಂತೆ ಕಾಣ್ತಿದೆ
ಆಗ ಮಗು ಪತ್ತೆಯಾಗಿ 10 ನಿಮಿಷದಲ್ಲಿ ಮುರುಘಾ ಶ್ರೀಗಳ ಗಮನಕ್ಕೆ ಬರುತ್ತೆ. ಅಂದರೆ ಮಠ ಕೋಟೆ ಇದ್ದಾಗೆ ಇದೆ. ಆ ಮಗು ಪತ್ತೆಯಾದ ಕೆಲವೇ ಕ್ಷಣದಲ್ಲಿ ಹೀಗೆ ಗೊತ್ತಾಯ್ತು? ಇದು ನಾಟಕೀಯವಾಗಿ ಕಾಣುತ್ತಿದೆ. ಈ ಬಗ್ಗೆ ಅನುಮಾನ ಮೂಡಿದೆ. ಪತ್ತೆಯಾದ ಬಳಿಕ ನೋಂದಣಿಯಾಗಿ, ಮಕ್ಕಳು ಇಲ್ಲದವರ ಮಡಿಲು ಸೇರಬೇಕಿತ್ತು ಎಂದು ಹೇಳಿದ್ದಾರೆ.
ಡಿಎನ್ಎ ಪರೀಕ್ಷೆ ಆಗಬೇಕು
ಈ ಮಗು ಶಿವಮೂರ್ತಿ ಸ್ವಾಮಿಗಳದ್ದೇ ಎಂದು ಹೇಳಲಾಗ್ತಿದೆ. ಹೀಗಾಗಿ ಡಿಎನ್ಎ ಪರೀಕ್ಷೆ ಆಗಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಇವೆಲ್ಲಾ ಅನುಮಾನಗಳು ಕಾನೂನು ರೀತಿಯಲ್ಲಿ ಬಗೆಹರಿಯಬೇಕು. 15-20 ವರ್ಷದಲ್ಲಿ ಹತ್ತಾರು ಮಕ್ಕಳು ಮಠದ ಬಳಿ ಪತ್ತೆಯಾಗಿವೆ. ಈ ಬಗ್ಗೆ CBI ತನಿಖೆಯಾಗಬೇಕು, ನ್ಯಾಯಾಲಯದ ಮೂಲಕ ಆಗಬೇಕು. ಎಂದು ಸಾಮಾಜಿಕ ಕಾರ್ಯಕರ್ತ ಹೇಳಿದ್ದಾರೆ.
ಮುಂದಿನ ವಾರ ಕೋರ್ಟ್ ಗೆ ಮೊರೆ ಹೋಗುತ್ತಿದ್ದೇವೆ. ನಿರ್ಭಯ ಏಳು ಎಂದು ದೂರು ನೀಡಿದ್ದೇ, ಇದನ್ನು ಕೂಡಾ ಗಮನಕ್ಕೆ ತರುವೆ. ಅಲ್ಲದೇ ಹೈಕೋರ್ಟ್ ನಲ್ಲಿ PIL ಹಾಕಲು ಕೂಡಾ ಸಿದ್ದತೆ ಮಾಡಿದ್ದೇವೆ. ಇದೇ ರೀತಿಯಲ್ಲಿ ಎಷ್ಟು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತನಿಖೆ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಹೇಳಿದ್ದಾರೆ.
ಆ ಮಗು ಸ್ವಾಮೀಜಿಯದ್ದೇ – ಮಧುಕುಮಾರ್
ನಮ್ಮ ತನಿಖಾಧಿಕಾರಿಗಳು ಸಂಪೂರ್ಣ ಪೇಲ್ ಆಗಿದ್ದಾರೆ. ಜಿಲ್ಲಾಡಳಿತ, ಮಕ್ಕಳ ರಕ್ಷಣಾ ಘಟಕ ಪೇಲ್ ಆಗಿದೆ. DNA ಪರೀಕ್ಷೆ ನಡೆದ ಬಳಿಕ ಪೊಷಕರು ಯಾರು ಎಂದು ತಿಳಿಯುತ್ತದೆ. ಸಾರ್ವಜನಿಕ ವಲಯದಲ್ಲಿ ಮುರುಘಾ ಶ್ರೀ ಕಳೆದ ಹತ್ತಾರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಕೇಳಿ ಬಂದಿದೆ. ಈ ಮಗು ಸ್ವಾಮೀಜಿ ಅವರದ್ದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಾಮಾಜಿಕ ಕಾರ್ಯಕರ್ತ ಮಧುಕುಮಾರ್ ಹೇಳಿದ್ದಾರೆ.