

ಚಿತ್ರದುರ್ಗ (ಅ.14): ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಮತ್ತಷ್ಟು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಾರಿ ಮಠದಲ್ಲಿ ಕೆಲಸಗಾರರ ಮಕ್ಕಳೇ ದೂರು ಕೊಟ್ಟಿದ್ದು, 7 ಜರ ಮೇಲೆ ಎಫ್‌ಐಆರ್ ದಾಖಲಾಗಿದೆ. ಒಡನಾಡಿ ಸಂಸ್ಥೆಯ ನೆರವು ಅರಸಿ ಬಂದ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ನಜರ್‌ಬಾದ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಸಿದ್ದಾರೆ. ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೈಸೂರಿನಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು, ಶ್ರೀಗಳ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಬೃಹನ್ ಮಠದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕೆಲಸದಾಕೆಯ ಇಬ್ಬರು ಮಕ್ಕಳು ಸೇರಿ ನಾಲ್ಕು ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ದೂರು ನೀಡಲಾಗಿದೆ. ಯುವತಿ ಹಾಗೂ ಆಕೆಯ ತಾಯಿ ಮೈಸೂರಿನ ಒಡನಾಡಿ ಸಂಸ್ಥೆ ಮುಂದೆ ತಮ್ಮ ನೋವು ತೋಡಿಕೊಂಡಿದ್ದು, ನಜರ್‌ಬಾದ್ನಲ್ಲಿರುವ ಮಕ್ಕಳ್ಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ತಮ್ಮ ದೂರು ದಾಖಲಿಸಿದ್ದರು. ಅಧಿಕಾರಿಗಳ ಸಮ್ಮುಖದಲ್ಲಿ ನಜರ್‌ಬಾದ್ ಠಾಣೆಗೆ ಹಾಜರಾದ ಮಗು ಹಾಗೂ ತಾಯಿ 2019 ರಿಂದ ಶ್ರೀಗಳು ನಾಲ್ಕು ಮಕ್ಕಳಿಗರ ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದರು. ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಮೈಸೂರಿನ ನಜರ್‌ಬಾದ್ ಠಾಣೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ, ಪ್ರಕ್ರರಣವನ್ನು ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿದ್ದಾರೆ.
ಇನ್ನು ಮಕ್ಕಳಿಗೆ ರಕ್ಷಣೆ ನೀಡಿರುವ ಒಡನಾಡಿ ಸಂಸ್ಥೆ ಮುಖ್ಯಸ್ಥರು ತನಿಖೆ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಎರಡನೇ ಪ್ರಕರಣ ಕೂಡ ಮೊದಲನೇ ಪ್ರಕರಣದ ರೀತಿ ಇದೆ. ಮಠದಲ್ಲಿದ್ದ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿದ್ರೆ ಇನ್ನಷ್ಟು ಪ್ರಕರಣಗಳು ಹೊರಬರುತ್ತಿತ್ತು. ಮಠದಲ್ಲಿ ಇನ್ನಷ್ಟು ವ್ಯಕ್ತಿಗಳನ್ನ ರಕ್ಷಣೆ ಮಾಡುತ್ತಿದ್ದು, ನ್ಯಾಯಾಲಯ ಅಥವ ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ ಹಾಗೂ ಮಕ್ಕಳು ಮೈಸೂರಿನಲ್ಲೇ ಇರಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಒಟ್ಟಾರೆ ಮುರುಘಾ ಶ್ರೀಗಳ ವಿರುದ್ಧ ಮತ್ತೆ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮತ್ತಿಬ್ಬರಿ ಆರೋಪಿಗಳು ಸೇರಿಕೊಂಡಿಧದಾರೆ. ಸರಿಯಾದ ತನಿಖೆ ಆದರೆ ಮತ್ತಷ್ಟು ಆರೋಪಿಗಳು ಸಿಕ್ಕಿ ಬೀಳುತ್ತಾರೆ ಎನ್ನುವುದು ಸತ್ಯವಾಗಿದೆ.