

ಬೀದರ್: ದಸರಾ (Dasara) ಮೆರವಣಿಗೆ ವೇಳೆ ಹಿಂದೂ (Hindu) ಸಮುದಾಯದ ಗುಂಪೊಂದು ಮದರಸಾಗೆ (Madrasa) ನುಗ್ಗಿ ಪೂಜೆ ಮಾಡಿರುವ ಘಟನೆ ಬೀದರ್ (Bidar) ನಗರದ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕಾ ಮೊಹಮ್ಮದ್ ಗವಾನ್ ಮದರಸಾದಲ್ಲಿ ನಡೆದಿದೆ.
ನವರಾತ್ರಿಯ ಮೆರವಣಿಗೆ ವೇಳೆ ಮೊಹಮ್ಮದ್ ಗವಾನ್ ಮದರಸಾದ ಒಳಗೆ ನೇರವಾಗಿ ಮದರಸಾಕ್ಕೆ ನುಗ್ಗಿ, ಜೈ ಭವಾನಿ, ವಂದೇ ಮಾತರಂ, ಹಿಂದೂ ಧರ್ಮಕೀ ಜೈ ಎಂದು ಘೋಷಣೆ ಕೂಗಿ ಪೂಜೆ ಮಾಡಿದ್ದಾರೆ. ಅಕ್ರಮವಾಗಿ ನುಗ್ಗಿ ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ.

ಘಟನೆಯ ಬಗ್ಗೆ ಮೊಹಮ್ಮದ್ ಶಫಿಯುದ್ದೀನ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದರಸಾದ ಬೀಗ ಮುರಿದು, ಸೆಕ್ಯೂರಿಟಿ ಮೇಲೆ ಹಲ್ಲೆಗೆ ಯತ್ನ ಮಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.