

ತುಂಬೆ ಎಸ್.ಡಿ.ಪಿ.ಐ ನಿಂದ ರಕ್ತದಾನ ಶಿಬಿರ.
ಬಂಟ್ವಾಳ ಅ 01: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಸಮಿತಿ ಹಾಗೂ ಫಾದರ್ ಮುಲ್ಲರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತುಂಬೆ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ನಾಳೆ ಅಕ್ಟೋಬರ್ 02’2022 ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 09:00 ರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಆದುದರಿಂದ ಶಾಂತಿ, ಸಹಬಾಳ್ವೆ, ಐಕ್ಯತೆ ಬಯಸುವ ಎಲ್ಲಾ ಜನರಿಗೆ ಆತ್ಮೀಯವಾಗಿ ಸ್ವಾಗತ ಎಂದು Sdpi ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದೆ