

ಚಾಮರಾಜನಗರ: ಬಿಜೆಪಿ, ಆರ್ಎಸ್ಎಸ್ (RSS) ಸಿದ್ಧಾಂತದ ವಿರುದ್ಧ ಈ ಯಾತ್ರೆ ಮಾಡಲಾಗುತ್ತಿದೆ. ಸಂವಿಧಾನ ರಕ್ಷಣೆ ಮಾಡಲು ಭಾರತ್ ಜೋಡೋ ಮಾಡುತ್ತಿದ್ದೇವೆ ಎಂದು ಗುಂಡ್ಲುಪೇಟೆಯ ಕಾಂಗ್ರೆಸ್ ಭಾರತ್ ಜೋಡೋ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಯಾತ್ರೆ ನಡೆಯುತ್ತೆ. ಬಿಸಿಲು, ಮಳೆ ಲೆಕ್ಕಿಸದೇ ಪಾದಯಾತ್ರೆಯನ್ನ ಮಾಡುತ್ತಿದ್ದೇವೆ. ಈ ಪಾದಯಾತ್ರೆಯಲ್ಲಿ ದ್ವೇಷ, ಹಿಂಸೆ ಎಲ್ಲೂ ಕಾಣುವುದಿಲ್ಲ. ಎಲ್ಲ ಧರ್ಮ, ಜಾತಿಯವರೂ ಭಾಗಿಯಾಗಿದ್ದಾರೆ ಎಂದು ಹೇಳಿದರು. ಭಾರತ್ ಜೋಡೋ ಯಾತ್ರೆಯನ್ನು ಯಾರಿಂದಲೂ, ಯಾವ ಶಕ್ತಿಯಿಂದ ನಿಲ್ಲಿಸಲು ಆಗುವುದಿಲ್ಲ. ಭಾರತ್ ಜೋಡೋ ಉದ್ದೇಶ ಭಾಷಣ ಮಾಡುವುದಕ್ಕೆ ಅಲ್ಲ. ಬಿಜೆಪಿಯವರು ವಿಪಕ್ಷಗಳ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಜತೆ ಇಡೀ ದೇಶದ ಜನರು ಇದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ನಿರುದ್ಯೋಗ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.