

ರಾಮನಗರ: ಇಂದು ಬೆಳಗ್ಗೆ ಕೇಂದ್ರ ಸರ್ಕಾರ ಪಿಎಫ್ಐ ಬ್ಯಾನ್ (PFI Ban) ಮಾಡಿದೆ. ಸಂಘಟನೆ ನಿಷೇಧಿಸಿದ್ರೆ ಸಮಾಜ ಘಾತುಕ ಕೆಲಸಗಳು ನಿಲ್ಲಲ್ಲ. ಸಮಾಜ ಘಾತುಕ ಕೆಲಸಗಳು ನಿಲ್ಲುತ್ತವೆ ಅನ್ನೋದು ಸುಳ್ಳು ಎಂದು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ರಾಜ್ಯದಲ್ಲಿ 150ಕ್ಕೂ ಹೆಚ್ಚು PFI ಕಾರ್ಯಕರ್ತರ ಬಂಧನ ಮಾಡಲಾಗಿದೆ. ಬಂಧಿತರ ಹಿನ್ನೆಲೆ, ಸಮಾಜ ವಿರೋಧಿ ಕೃತ್ಯದ ಬಗ್ಗೆ ತಿಳಿಸಿ. ಕಾನೂನು ಬಾಹಿರ ಚಟುವಟಿಕೆ ಜನರ ಮುಂದೆ ಇಡಬೇಕು. ಜನರ ಮುಂದೆ ನೀವು ಇಡಲಿಲ್ಲ ಅಂದರೆ ಸರ್ಕಾರದ ಮೇಲೆ ಅಪನಂಬಿಕೆ ಬರುತ್ತದೆ. ಯಾವುದೇ ಸಂಘ ಸಂಸ್ಥೆಗಳು ಈ ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ಬ್ಯಾನ್ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಜವಾಬ್ದಾರಿ. ಪಿಎಫ್ಐನ ಕಾರ್ಯಕರ್ತರ ಬಂಧನ ಏನಿದೆ. ಅವರ ಬ್ಯಾಗ್ ಗ್ರೌಂಡ್, ಆಂಟಿ ಸೋಷಿಯಲ್ ಆಕ್ಟಿವಿಟಿ ಏನಿದೆ ಎಂಬುದನ್ನ ಜನರ ಮುಂದೆ ಇಡಬೇಕು. ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಗಳನ್ನು 5 ವರ್ಷ ಬ್ಯಾನ್ ಮಾಡಿದ್ದೀವಿ ಅಂತಾ ಸರ್ಕಾರ ಹೇಳಬಹುದು. ಸಮಾಜ ಘಾತುಕ ಶಕ್ತಿಗಳ ಹಿನ್ನೆಲೆ ಏನಿದೆ ಅಲ್ವಾ ಎಂದು ಪ್ರಶ್ನಿಸಿದರು. ಈ ರೀತಿಯ ವಾತಾವರಣ ನಿರ್ಮಾಣ ಆಗೋಕೆ ಕಾರಣ ಏನಿದೆ ಎಂಬುದನ್ನು ತಿಳಿಯಬೇಕು. ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಈ ರಾಜ್ಯದಲ್ಲಿ ಯಾವುದೇ ರೀತಿಯ ಸಂಘರ್ಷಗಳು ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲರ ವಿಶ್ವಾಸಗಳಿಸಿ ಎಲ್ಲರ ಪರವಾಗಿ ನಾವು ಇದ್ದೇವೆ ಎಂಬ ಸಂದೇಶ ಸಾರಬೇಕು.