

ಚಿಕ್ಕೋಡಿ: ಯು.ಟಿ ಖಾದರ್ (U.T Khader) ಅವರೇ ನಮ್ಮ ಬಳಿ ಬಂದು ಎಸ್‍ಡಿಪಿಐ (SDPI), ಪಿಎಫ್‍ಐ (PFI) ಸಂಘಟನೆಯನ್ನು ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿ ಆಧಾರಗಳಿವೆ ಎಂದು ಎಲ್ಲಾ ಸಂಘಟನೆಗಳು ಬ್ಯಾನ್ ಅಗಬೇಕು ಎಂಬ ಯು.ಟಿ ಖಾದರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalinkumar Kateel) ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಸಂಘಟನೆಯ ಹೆಸರಲ್ಲಿ ನಾವು ಯಾರನ್ನೂ ವಿರೋಧ ಮಾಡಿಲ್ಲ. ಕಳೆದ 8 ವರ್ಷಗಳ ಅಧ್ಯಯನದ ನಂತರ ಈ ಕ್ರಮ ಕೈಗೊಂಡಿದ್ದೇವೆ. ಪ್ರವೀಣ್ ಹತ್ಯೆ, ಪ್ರಶಾಂತ್ ಹತ್ಯೆ, ಮೈಸೂರಿನ ಹತ್ಯೆಗಳು, ಚೂರಿ ಇರಿತ, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣಗಳು ಎಲ್ಲಾ ರೀತಿಯಲ್ಲಿ ತನಿಖೆ ಮಾಡಲಾಗಿದೆ. ತನಿಖಾ ಸಂಸ್ಥೆಗಳು ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.