

ಕೀವ್: ರಷ್ಯಾದಿಂದ (Russia) ಬಂಧಿತನಾಗಿದ್ದ ತನ್ನ ಸೈನಿಕನ (Soldier) ಆಘಾತಕಾರಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಉಕ್ರೇನ್ (Ukraine) ರಕ್ಷಣಾ ಸಚಿವಾಲಯ ಹಂಚಿಕೊಂಡಿದೆ.
ಹಲವು ತಿಂಗಳಿಂದ ರಷ್ಯಾ ಉಕ್ರೇನ್ ಯುದ್ಧ ನಡೆಯುತ್ತಿದೆ. ಈ ಭೀಕರ ಯುದ್ಧದಲ್ಲಿ ಸೈನಿಕರು, ಜನರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಯುದ್ಧದ ಸಂದರ್ಭದಲ್ಲಿ ಅನೇಕ ರಷ್ಯಾ ಯೋಧರು ಯುಕ್ರೇನ್ ಅವರ ಕೈಯಲ್ಲಿ, ಉಕ್ರೇನ್ ಯೋಧರು ರಷ್ಯಾ ಕೈಯಲ್ಲಿ ಸೆರೆಯಾಗಿದ್ದಾರೆ.
ಇದೀಗ ಉಕ್ರೇನ್ ರಕ್ಷಣಾ ಸಚಿವಾಲಯವು ಇಂತಹದ್ದೇ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಎಂಬಾತನನ್ನು ರಷ್ಯಾ ಸೈನಿಕರಿಗೆ ಸೆರೆಯಾಗಿದ್ದ. ಈತ ಈಗ ಬಿಡುಗಡೆ ಹೊಂದಿದ್ದಾನೆ. ಆದರೆ ಆತ ನೋಡಲು ಪರಿಚಯವೇ ಸಿಗದಷ್ಟು ಬದಲಾವಣೆ ಹೊಂದಿದ್ದಾನೆ.

ಟ್ವೀಟ್ನಲ್ಲಿ ಏನಿದೆ?: ಉಕ್ರೇನ್ ಈಗ ಆತನ ಮೊದಲ ಫೋಟೋ ಹಾಗೂ ಈಗಿನ ಫೋಟೋವನ್ನು ಹಂಚಿಕೊಂಡಿದೆ. ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ರಷ್ಯಾದಿಂದ ಬಂಧಿತರಾಗಿದ್ದರು. ಆದರೆ ರಷ್ಯಾದಿಂದ ಬದುಕುಳಿದವರಲ್ಲಿ ಒಬ್ಬರಾಗಿದ್ದಾರೆ. ನಾಜಿಸಂನ ನಾಚಿಗೇಡಿನ ಪರಂಪರೆಯನ್ನು ರಷ್ಯಾ ಈ ರೀತಿಯಾಗಿ ಮುಂದುವರಿಸುತ್ತಿದೆ ಎಂದು ಟ್ವೀಟ್ನಲ್ಲಿ ಉಕ್ರೇನ್ ತಿಳಿಸಿದೆ.
ಈಗಿನ ಫೋಟೋದಲ್ಲಿ ಮೈಖೈಲೋ ಡಯಾನೋವ್ ನೋಡಲು ತುಂಬಾ ಸಣ್ಣಾಗಾಗಿದ್ದು, ಆತನ ಮುಖ ಹಾಗೂ ಕೈಗೆ ಗಾಯಗಳಾಗಿವೆ. ಈತನ ಸ್ಥಿತಿ ಗಂಭೀರವಾಗಿದ್ದು, ಕೀವ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ