

ಬೆಂಗಳೂರು: ಡಬಲ್ ಎಂಜಿನ್ ಸರ್ಕಾರದ ಡಬಲ್ ಗೇಮ್ ಬುಲ್ಡೋಜರ್ ಅಪರೇಷನ್ ಪಾರ್ಟ್-2ವನ್ನು ಪಬ್ಲಿಕ್ ಟಿವಿ ಬಟಾಬಯಲು ಮಾಡ್ತಿದೆ. ಅಪರೇಷನ್ ಬುಲ್ಡೋಜರ್ ದೊಡ್ಡವರ ಮುಂದೆ ಅದ್ಯಾಗೆ ಘರ್ಜನೆ ಸೌಂಡ್ನ್ನು ಸೈಲೆಂಟ್ ಆಗಿ ಮಾಡುತ್ತೆ ಎನ್ನುವ ಮಗದೊಂದು ಉದಾಹರಣೆ ಇಲ್ಲಿದೆ.
ಹೌದು. ಜೆಸಿಬಿ (JCB) ಗೋಡೆಯನ್ನು ಮಾತ್ರ ಉರುಳಿಸಿ ಸೈಲೆಂಟ್ ಆಗಿ ಸೈಡ್ಗೆ ಹೋಗಿದ್ದು, ಅದಾದ ಬಳಿಕ ಒತ್ತುವರಿ ತೆರವಿನ ಕುರುಹು ಕೂಡ ಇಲ್ಲ. ಈ ರೀತಿ ಕಾಟಚಾರದ ತೆರವು ಮಾಡಿದ್ದು ಕೈ ಪ್ರಭಾವಿ ನಾಯಕ ಕೆ.ಜೆ ಜಾರ್ಜ್ (K J George) ಮಾಲೀಕತ್ವದ ಎಂಬೈಸಿಯ ಖಾಲಿ ಜಾಗದ ಬಳಿ. ಚಲ್ಲಘಟ್ಟದ ಬಳಿ ಕೈ ನಾಯಕನ ಮಾಲೀಕತ್ವದ ಎಂಬೈಸಿ (Embassy) ಜಾಗದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ರಾಜಕಾಲುವೆ ಒತ್ತುವರಿಯ ಬಗ್ಗೆ ಅಬ್ಬರಿಸುವ ಕಾಂಗ್ರೆಸ್ (Congress) ನಾಯಕರೇ ಹಿಟ್ ಲಿಸ್ಟ್ ನಲ್ಲಿದ್ದಾರೆ. ಇವರನ್ನು ಟಚ್ ಮಾಡೋಕೆ ಬಿಬಿಎಂಪಿ (BBMP) ಹಿಂದೇಟು ಹಾಕುತ್ತಿದ್ದು, ಜಸ್ಟ್ ಗೋಡೆಯ ಒಂದು ಭಾಗವನ್ನು ತೆರವು ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಮುಂದೆ ತೆರವು ಕಾರ್ಯಾಚರಣೆಗೆ ಕೈಹಾಕಿಲ್ಲ.

ನಲಪಾಡ್ ಅಕಾಡೆಮಿ (Nalapad Academy) ಯಿಂದ ಒತ್ತುವರಿ ಜಾಗದ ಮುಂದುವರಿದ ಭಾಗವೇ ಜಾರ್ಜ್ ಮಾಲೀಕತ್ವದ ಎಂಬೈಸಿ ಒತ್ತುವರಿ. ಚಲ್ಲಘಟ್ಟ ಕೆರೆಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದು ರಾಜಕಾಲುವೆಯನ್ನು ಮುಚ್ಚಿ ಅದ್ರ ಮೇಲೆ ಗೋಡೆ ನಿರ್ಮಾಣ ಮಾಡಲಾಗಿದೆ. ಈ ಕೆಡವಿರುವ ಗೋಡೆಯನ್ನು ಅದ್ಯಾವ ಕ್ಷಣದಲ್ಲಾದ್ರೂ ವಾಪಸ್ ಕಟ್ಟಬಹುದು ಎನ್ನುವ ರೀತಿಯಲ್ಲಿ ಇದೆ.
ಜನಪ್ರತಿನಿಧಿಗಳು ನೋಡ್ರಪ್ಪ ರಾಜಕಾಲುವೆ ಒತ್ತುವರಿ ಮಾಡಬೇಡಿ, ಬೆಂಗಳೂರನ್ನು ಪ್ರವಾಹ (Flood) ದ ದವಡೆಗೆ ದೂಡಬೇಡಿ ಅಂತಾ ಬುದ್ದಿ ಹೇಳಬೇಕಾಗಿತ್ತು. ಆದ್ರೇ ಅವ್ರೇ ಒತ್ತುವರಿ ಹಿಟ್ ಲಿಸ್ಟ್ ನಲ್ಲಿದ್ದಾರೆ. ಇನ್ನು ಬಿಬಿಎಂಪಿಯಂತೂ ಮುಲಾಜಿಗೆ ಬಿದ್ದು ತೆರವು ಕಾರ್ಯಾಚರಣೆ ನಡೆಸುತ್ತಿರೋದು ದುರಂತ.