

ಗಾಂಧಿನಗರ: ಸಾರ್ವಜನಿಕ ಸಭೆ ವೇಳೆ ದಲಿತ ಮುಖಂಡ ( Dalit leader) ಮತ್ತು ಗುಜರಾತ್‍ನ ವಡ್ಗಾಮ್(Vadgam) ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ( Jignesh Mevani ) ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಈ ಕುರಿತಂತೆ ಜಿಗ್ನೇಶ್ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ ಅವರ ಬೆಂಬಲಿಗರು, ಈ ದಾಳಿಯನ್ನು ರಾಜ್ಯದ ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರ ಗೂಂಡಾಗಳು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ದಾಳಿ ವೇಳೆ ಅಹಮದಾಬಾದ್‍ನ ವಸ್ತ್ರಾಲ್‍ನಲ್ಲಿರುವ ನರ್ಮದಾ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಮೇವಾನಿ ಮತ್ತು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಹಿತೇಂದ್ರ ಪಿತಾಡಿಯಾ(Hitendra Pithadiya) ಉಪಸ್ಥಿತರಿದ್ದರು