

ಬೀಜಿಂಗ್: ನೈಋತ್ಯ ಚೀನಾದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಚುವಾನ್ ಪ್ರಾಂತ್ಯದ ಕಾಂಗ್ಡಿಂಗ್ ನಗರದ ಆಗ್ನೇಯಕ್ಕೆ ಸುಮಾರು 43 ಕಿ.ಮೀ(26 ಮೈಲುಗಳು) ದೂರದಲ್ಲಿ, 10 ಕಿ.ಮೀ ಆಳದಲ್ಲಿ 6.6 ತೀವ್ರತೆಯ ಭೂಕಂಪ ಅಪ್ಪಳಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಇಂದು ಚೀನಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಹಲವು ಮನೆಗಳು ಹಾನಿಯಾಗಿವೆ. ಕೆಲವು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಟ್ಟುನಿಟ್ಟಿನ ಕೋವಿಡ್ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರು ತಮ್ಮ ಮನೆಗಳಿಂದ ಹೊರ ಬರಲಾಗದೇ ಕಷ್ಟ ಎದುರಿಸಿದ್ದಾರೆ ಎನ್ನಲಾಗಿದೆ.

ಸಮೀಪದ ಪ್ರದೇಶಗಳಲ್ಲೂ ಹಲವೆಡೆ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಚೀನಾದಲ್ಲಿ ಭೂಕಂಪ ಸಂಭವಿಸಿದ 1 ಗಂಟೆಯ ಬಳಿಕ ಪೂರ್ವ ಟಿಬೆಟ್‌ನಲ್ಲಿಯೂ 4.6 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.

ಭೂಕಂಪ ಉಂಟಾದ ಪ್ರದೇಶಗಳಿಗೆ ನೂರಾರು ರಕ್ಷಣಾ ಕಾರ್ಯಕರ್ತರನ್ನು ಕಳುಹಿಸಲಾಗಿದೆ. ರಕ್ಷಣಾ ಕಾರ್ಯಕರ್ತರಿಗೆ ಸಹಯ ಮಾಡಲು 1,000 ಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸಲಾಗಿದೆ. ಅಧಿಕಾರಿಗಳು ಸಾವಿರಾರು ಟೆಂಟ್‌ಗಳು, ಹೊದಿಕೆಗಳು ಹಾಗೂ ಹಾಸಿಗೆಗಳನ್ನು ಘಟನಾ ಸ್ಥಳಗಳಿಗೆ ಕಳುಹಿಸಿದ್ದಾರೆ ಎಂದು ಸಿಂಚುವಾನ್ ಭೂಕಂಪ ಪ್ರಾಧಿಕಾರ ತಿಳಿಸಿದೆ.