

ಮೈಸೂರು: ಗಣಪತಿ (Ganesh Festival) ವಿಸರ್ಜನಾ ಮೆರವಣಿಗೆ ವಾಹನಗಳ ಮೇಲೆ ರಾಷ್ಟ್ರ ನಾಯಕರ ಫ್ಲೆಕ್ಸಗಳ ಜೊತೆ ನೂಪುರ್ ಶರ್ಮಾ (Nupur Sharma) ಫ್ಲೆಕ್ಸ್ ಕಾಣಿಸಿಕೊಂಡಿದೆ. ಇತ್ತೀಚಿಗೆ ವಿವಾದಾತ್ಮ ಹೇಳಿಕೆ ನೀಡಿ ನೂಪುರ್ ಶರ್ಮಾ ಭಾರಿ ಸುದ್ದಿಯಾಗಿದ್ದರು. ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ,ನೂಪುರ್ ಶರ್ಮಾ, ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಸೇರಿ ಹಲವರ ಫ್ಲೆಕ್ಸ್ಗಳನ್ನು ಹಾಕಲಾಗಿದೆ.
ಪ್ರವಾದಿ ನಿಂದನೆ ಮಾಡಿದ ನೂಪುರ್ ಶರ್ಮ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಧಾರ್ಮಿಕ ಕಾರ್ಯಕ್ರಮದಲ್ಲಿ ಈಕೆಯ ಫೋಟೋ ಹಾಕಿ ವಿವಾದ, ಕರ್ನಾಟಕದ ಸೌಹಾರ್ದತೆ ಕೆಡಿಸುವ ಪ್ರಯತ್ನ ಎಂದು ಶಾಂತಿ ಪ್ರಿಯ ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ
ಮೆರವಣಿಗೆಯಲ್ಲಿ ಹತ್ಯೆಯದ ಹಿಂದೂ ಕಾರ್ಯಕರ್ತರಾದ ಕ್ಯಾತಮಾರನಹಳ್ಳಿ ರಾಜು, ಶಿವಮೊಗ್ಗದ ಹರ್ಷ ಭಾವಚಿತ್ರದ ಫ್ಲೆಕ್ಸ್ಗಳು ರಾರಾಜಿಸುತ್ತಿವೆ.
