


ರಾಜ್ಯ ಸರ್ಕಾರ ತನಿಖೆ ಸರಿಯಾಗಿ ಮಾಡಬೇಕಿದೆ. ನೊಂದ ಬಾಲಕಿಯರಿಗೆ ನ್ಯಾಯ ಸಿಗಬೇಕಿದೆ. ಮಠ ಎಂದಾಕ್ಷಣ ಒಂದೊಂದು ಸಮಾಜದ ಕೇಂದ್ರಗಳಾಗಿದೆ. ಓಟಿನ ಕಾರಣಕ್ಕೆ ರಾಜಕೀಯ ಪಕ್ಷಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಪೋಕ್ಸೋ ಕೇಸ್ ವಿಚಾರದಲ್ಲಿ ರಾಜಕೀಯ ಪಕ್ಷಗಳ ವರ್ತನೆ ಖಂಡನೀಯ ಎಂದು ತಿಳಿಸಿದ್ರು.
ಇದೇ ವೇಳೆ ರಾಜ್ಯ ಸರ್ಕಾರ ವಿದ್ಯುತ್ ಶಕ್ತಿಯನ್ನ ಖಾಸಗೀಕರಣಗೊಳಿಸುವ ತೀರ್ಮಾನಕ್ಕೆ ಬಂದಿದೆ. ವಿದ್ಯುತ್ ಖಾಸಗೀಕರಣದಿಂದ ಜನಸಾಮಾನ್ಯರು ಬಳಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗುತ್ತೆ, ಕೃಷಿಯನ್ನು ಖಾಸಗೀಕರಣ ಮಾಡೋದಿಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕಾಯ್ದೆಗಳನ್ನ ಅನುಷ್ಟಾನ ಮಾಡೋದಕ್ಕೆ ದಕ್ಷಿಣ ಭಾರತದ ರಾಜ್ಯವನ್ನ ಪ್ರಯೋಗ ಶಾಲೆಯಾಗಿ ಬಳಕೆ ಮಾಡ್ತಾ ಇದ್ದಾರೆ . ಖಾಸಗೀ ಕರಣ ಹಾಗೂ ಕೃಷಿ ಕಾಯ್ದೆಗಳನ್ನ ಕೈಬಿಡಬೇಕು. ರಾಷ್ಟ್ರೀಯ ವಿಪತ್ತು ಓಬಿರಾಯನ ಕಾಲದ ನಡುವಳಿಗಳು. ಈಗಿನ ಕಾಲಕ್ಕೆ ವೈಜ್ಞಾನಿಕ ಅಳತೆಗೋಲು ಇಟ್ಟುಕೊಂಡು ರೈತರಿಗೆ ಉಂಟಾಗಿರುವ ನಷ್ಟ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.