

ಚಿತ್ರದುರ್ಗ: ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಆವರಣದ ಸುತ್ತಮುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿದೆ, ಹಾವೇರಿ ಬಳಿಯಲ್ಲಿ ಶರಣರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಪೋಕ್ಸ್ ಅಡಿ (POCSO) ಪ್ರಕರಣ ದಾಖಲಾಗಿದ್ದ ಹಿನ್ನೆಲೆ ಇಂದು ಚಿತ್ರದುರ್ಗ ಪೊಲೀಸರು ಮುರುಘಾ ಶ್ರೀಗಳನ್ನು(Murugha Shri) ವಶಕ್ಕೆ ಪಡೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಆವರಣದ ಸುತ್ತಮುತ್ತ ಪೊಲೀಸರ (Police Protection) ಸರ್ಪಗಾವಲು ಹಾಕಲಾಗಿದೆ, ಹಾವೇರಿ ಬಳಿಯಲ್ಲಿ ಶರಣರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಬಾಲಕಿಯರು ಹೇಳಿಕೆ ನೀಡಿದ ಬಳಿಕ ನ್ಯಾಯಾಲಯ ಆರೋಪಿಯ ಬಗ್ಗೆ ಕೇಳಬಹುದು. ಆರೋಪಿ ಬಂಧನ ಆಗಿದ್ದಾರಾ ಅಂತ ತನಿಖಾಧಿಕಾರಿಗೆ ಕೇಳಬಹುದು. ಬಂಧನ ಆಗಿಲ್ಲ ಅಂತ ಹೇಳಿದರೆ. ಯಾಕೆ ಬಂಧಿಸಿಲ್ಲ ಅಂತಾನೂ ಕೋರ್ಟ್ ತನಿಖಾಧಿಕಾರಿಗೆ ಕೇಳಬಹುದು. ಜೊತೆಗೆ ಆರೋಪಿಯ ಬಂಧನ ಮಾಡುವಂತೆ ಕೋರ್ಟ್ ಸೂಚನೆಯೂ ನೀಡಬಹುದು. ಪೋಕ್ಸೋ ಪ್ರಕರಣದಲ್ಲಿ ಕೇಸ್ ದಾಖಲಾದರೆ ಆರೋಪಿಯ ಬಂಧನ ಆಗುತ್ತದೆ. ಆದ್ರೆ ಈ ಪ್ರಕರಣದಲ್ಲಿ ಎರಡೂ ದಿನಗಳಾದರೂ ಆರೋಪಿಯ ಬಂಧನ ಆಗಿಲ್ಲ.