

ಮಂಗಳೂರು ದಕ್ಷಿಣ ಕನ್ನಡ

ಸುಳ್ಯ :ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆಯಲ್ಲಿ
ಹತ್ಯೆಯಾದ ಮಸೂದ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ 30 ಲಕ್ಷ ಪರಿಹಾರದ ಚೆಕ್ಕನ್ನು ಅವರ ನಿವಾಸದಲ್ಲಿ ವಿತರಿಸಲಾಯಿತು. ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮಹಮ್ಮದ್ ಮಸೂದ್ ನೇತೃತ್ವದಲ್ಲಿ ಹತ್ಯೆಗೀಡಾದ ಮಸೂದ್ ಕುಟುಂಬಕ್ಕೆ 30 ಲಕ್ಷ ರೂಪಾಯಿಯ ಚೆಕ್ ವಿತರಿಸಲಾಯಿತು. ಇದೇ ವೇಳೆ ಅಧ್ಯಕ್ಷ ಮಸೂದ್ ಅವರು, ಕುಟುಂಬದ ಹಿನ್ನೆಲೆಯ ಮಾಹಿತಿಯನ್ನು ಪಡೆದ್ರು. ಇದೇ ವೇಳೆ ನಿಯೋಗದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

