

ಹಿಂಸಾತ್ಮಕ ರಾಜಕೀಯದ ವಕ್ತಾರನಿಂದ SDPI ಗೆ ರಾಜಕೀಯದ ನೈತಿಕತೆಯ ಪಾಠ ಕಲಿಯಬೇಕಿಲ್ಲ
ಮುನೀರ್ ಕಾಟಿಪಳ್ಳ ಹೇಳಿಕೆಗೆ SDPI ತಿರುಗೇಟು
ಮಂಗಳೂರು ಅ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಬಗ್ಗೆ ಕಮ್ಯುನಿಸ್ಟ್ ಪಕ್ಷದ ಸ್ವಯಂಘೋಷಿತ ಮುಖಂಡ ಮುನೀರ್ ಕಾಟಿಪಳ್ಳ ತನ್ನ ಪುಕ್ಕಟೆ ಪ್ರಚಾರಕ್ಕಾಗಿ SDPI ಹೆಸರನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾ ಘಟನೆಗಳಿಗೆ SDPI ಕಾರಣ ಎಂಬ ಅವಿವೇಕಿ ಹೇಳಿಕೆಯನ್ನು ಮನೀರ್ ರವರು ನೀಡುತ್ತಿರುವುದು ತನ್ನ ರಾಜಕೀಯ ಮೈಲೇಜ್ ಗೊಸ್ಕರವಾಗಿದೆ. ಜಿಲ್ಲೆಯ ರಾಜಕೀಯದಲ್ಲಿ ಚಲಾವಣೆಯಿಲ್ಲದ ಸವಕಲು ನಾಣ್ಯವಾದ ಮುನೀರ್ ರವರು ತನ್ನ ಇರುವಿಕೆಯನ್ನು ವ್ಯಕ್ತಪಡಿಸಲು , ತಾನೊಬ್ಬ ಮಾಸ್ ಲೀಡರ್ ಎಂದು ಸಮಾಜಕ್ಕೆ ತೋರಿಸುವ ಸಲುವಾಗಿ ಇಂತಹ ಹೇಳಿಕೆಯನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆಂದು SDPI ಜಿಲ್ಲಾ ಸಮಿತಿ ಸದಸ್ಯ ಝಾಕಿರ್ ಉಳ್ಳಾಲ ಗಂಭೀರ ಆರೋಪ ಮಾಡಿದ್ದಾರೆ
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಝಾಕಿರ್ ಉಳ್ಳಾಲ ರವರು
ಕೇರಳ, ಪಶ್ಚಿಮ ಬಂಗಾಳ, ತ್ರೀಪುರ ರಾಜ್ಯಗಳಲ್ಲಿ ಹಿಂಸಾಚಾರ ಮತ್ತು ರಕ್ತಪಾತದ ಮೂಲಕ ಅಧಿಕಾರಕ್ಕೇರಿದವರು ಯಾರು ಎಂಬುದು ನಾಡಿನ ಜನತೆಗೆ ಗೊತ್ತಿದೆ. ಮಾತು ಮಾತಿಗೂ ನಾವು ಅಲ್ಪಸಂಖ್ಯಾತರ, ದಲಿತರ, ಕಾರ್ಮಿಕರ ಪರ ಎಂದು ಬೊಗಳೆ ಬಿಡುತ್ತಿರುವ ಎಡಪಂತೀಯರು ಅಡಳಿತ ನಡೆಸಿದ ಕಡೆಗಳಲ್ಲಿ ನಿಮ್ಮ ರಾಜಕೀಯದ ಬಲಿಪಶುಗಳು ಅಲ್ಪಸಂಖ್ಯಾತ ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳು ಎಂಬುದು ನೆನಪಿರಲಿ. ನಿಮ್ಮ ಡಬಲ್ ಗೇಮ್ ರಾಜಕೀಯದಿಂದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳ ಮತದಾರರು ನಿಮ್ಮನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಸತ್ಯವನ್ನು ಮನೀರ್ ಕಾಟಿಪಳ್ಳ ಅರ್ಥ ಮಾಡಿಕೊಳ್ಳಬೇಕು ಎಂದು ಝಾಕಿರ್ ಉಳ್ಳಾಲ ಕಿವಿಮಾತು ಹೇಳಿದರು.
ಬೆರಳೆಣಿಕೆಯ ಹಿಂಬಾಲಕರನ್ನು ಇಟ್ಟುಕೊಂಡು ಡಿವೈಎಫ್ಐ ರಾಜ್ಯಾಧ್ಯಕ್ಷ ಎಂದು ತನ್ನನ್ನು ತಾನು ಸ್ವಯಂ ಕರೆಸಿಕೊಳ್ಳುವ ಈ ವೋಚರ್ ಹೋರಾಟಗಾರ ಕರ್ನಾಟಕ ರಾಜ್ಯದ ಅದ್ಯಕ್ಷರೋ ಅಥವಾ ಕಾಟಿಪಳ್ಳ ರಾಜ್ಯದ ಅಧ್ಯಕ್ಷರೋ ಎಂದು ಝಾಕಿರ್ ವ್ಯಂಗ್ಯವಾಡಿದ್ದಾರೆ. ಕೆಲವೊಂದು ಮಾಧ್ಯಮಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ,ಅಂತಹ ಮಾಧ್ಯಮಗಳಿಗೆ ಹೇಳಿಕೆ ಕೊಡಲು ,ಕಾಲಿ ಕುರ್ಚಿಗಳ ಮುಂದೆ ವೀರಾವೇಶದಿಂದ ಬಾಷಣ ಮಾಡುವ ನೀವು ತಾಕತ್ತಿದ್ದರೆ ಕನಿಷ್ಟ ಪಕ್ಷ ಯಾವುದಾದರೂ ಗ್ರಾಮ ಪಂಚಾಯತ್ ಅಥವಾ ಮುನ್ಸಿಪಾಲಿಟಿ ಚುನಾವಣೆಯಲ್ಲಿ ನಿಂತು ಜಯಗಳಿಸಿ ತೋರಿಸಿ ಎಂದು SDPI ಸವಾಲು ಹಾಕುತ್ತಿದೆ.ಇಡೀ ಜಿಲ್ಲೆಯಲ್ಲಿ ಎರಡಂಕಿ ದಾಟದ ಕಾರ್ಯಕರ್ತರನ್ನು ಇಟ್ಟುಕೊಂಡು ಒನ್ಮಾನ್ ಶೋ ಮಾಡುವ ನಿಮ್ಮಂತಹ ನಕಲಿ ಹೋರಾಟಗಾರನ ಪ್ರಮಾಣ ಪತ್ರ SDPI ಪಕ್ಷಕ್ಕೆ ಅಗತ್ಯವಿಲ್ಲ. SDPI ಪಕ್ಷ ಶಿಸ್ತು ಬದ್ದವಾಗಿ ಕ್ಯಾಡರ್ ಬೇಸ್ ರಾಜಕೀಯದ ಪಕ್ಷ . ನಮಗೆ ಸ್ಪಷ್ಟವಾದ ನಿಲುವುಗಳು ,ಸಿದ್ದಾಂತಗಳು ಇವೆ,ಹಿಂಸಾತ್ಮಕ ರಾಜಕೀಯದಲ್ಲಿ ನಮಗೆ ವಿಶ್ವಾಸವಿಲ್ಲ, ನಮ್ಮ ನಿಲುವುಗಳಿಗೆ ,ಹೋರಾಟಗಳಿಗೆ ಇಲ್ಲಿನ ಮತದಾರರ ಆಶೀರ್ವಾದ ಇದೆ . ಜನರ ದಿಕ್ಕು ತಪ್ಪಿಸುವಂತಹ ಪೇಮೆಂಟ್ ಹೋರಾಟಗಾರರ ಬೋದನೆ ನಮಗೆ ಅಗತ್ಯವಿಲ್ಲ. ಅದ್ದರಿಂದ SDPI ಪಕ್ಷದ ಮೇಲೆ ಅನಗತ್ಯ ಅರೋಪ ಹೊರಿಸುವಾಗ ನಾಲಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಝಾಕಿರ್ ಉಳ್ಳಾಲ ಎಚ್ಚರಿಸಿದ್ದಾರೆ
