
ಬೆಂಗಳೂರು: ಪ್ರವೀಣ್ (Praveen Nettar) ಹತ್ಯೆಯ ನಿಜವಾದ ಹಂತಕರ ಬಂಧನದ ಬಗ್ಗೆ ಮಾಹಿತಿ ಇಲ್ಲ. ಆದರೆ ಸರ್ಕಾರ ತಮ್ಮ ಪೊಲೀಸ್ ಪಡೆಯ ಮೇಲಿನ ವಿಶ್ವಾಸ ಕಳೆದುಕೊಂಡಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸದ ಹಾಗೂ ಮಂತ್ರಿಗಳ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು. 23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಸರ್ಕಾರ ಬಂದಿದೆ. ಎಲ್ಲ ಸೌವಲತ್ತು ಸೌವಲಭ್ಯದ ಬಳಿಕ ಹೀಗೆ ಹೇಳುವುದು ಎಷ್ಟು ಸರಿ. ಕಾರ್ಯಕ್ರತರನ್ನ ಸಮಾಧನ ಪಡಿಸುವುದು ಬಿಟ್ಟು ಉಡಾಫೆ ಉತ್ತರ ಸರಿಯಲ್ಲ. ಇನ್ನು ಎಂಟು ತಿಂಗಳಿದೆ ಎಲ್ಲರೂ ಸೇರಿ ಹೋಗೋಣಾ ಅಂತಾ ಪ್ರೀತಿಯಿಂದ ಹೇಳದೆ ಉಡಾಫೆ ಉತ್ತರ ನೀಡುವುದೆ ಆಕ್ರೋಶಕ್ಕೆ ಕಾರಣ. ಪ್ರವೀಣ ನೆಟ್ಟಾರ ಹತ್ಯೆಯಿಂದ ಕಾರ್ಯಕರ್ತರು ಇಷ್ಟು ಬೇಸರವಾಗಿಲ್ಲ.
ಕಳೆದ ಮೂರು ವರ್ಷದಿಂದ ಸರ್ಕಾರದ ಆಡಳಿತದಿಂದ ಬೇಸತ್ತು ಈಗ ಆಕ್ರೋಶ ಕೇಳಿ ಬರುತ್ತಿದೆ. ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಜಾಸ್ತಿ. ನಾಯಕರ ರಾಜೀನಾಮೆ ನೀಡಿದ್ರೆ ನೂರಾರು ಕಾರ್ಯಕರ್ತರು ಆ ಜಾಗ ತುಂಬಲು ಸಮರ್ಥರಿದ್ದಾರೆ. ಆದರೆ ಕಾರ್ಯಕರ್ತನ ಸ್ಥಾನ ತುಂಬಲ ಒಬ್ಬ ಸಮರ್ಥ ನಾಯಕ ಮುಂದೆ ಬರಲ್ಲ ಎಂದು ಕಿಡಿಕಾರಿದರು. ಸಿಎಂ ಬೊಮ್ಮಾಯಿ ಅವರೆ ನೀವು ರಾಜ್ಯವನ್ನ ಉತ್ತರ ಪ್ರದೇಶ ಮಾಡಿದ್ದೀರಾ. ನೀವು ರಾಜ್ಯ ಯುಪಿತರ ಇಲ್ಲ ಅಂತಾ ಹೇಳಿದ್ರಿ.
ಆದರೆ ನೀವು ಕಳೆದ ಒಂದು ವರ್ಷದಲ್ಲಿ ರಾಜ್ಯವನ್ನ ಯುಪಿತರ ಮಾಡಿದ್ದೀರಾ. ಹೀಗಾಗಿ ನೀವು ಇಲ್ಲಿ ಯುಪಿ ಮಾಡಲ್ ತರಬಹುದು. ಯುಪಿಯಲ್ಲಿ ಯೋಗಿ ಬರುವುದಕ್ಕೂ ಮೊದಲು ಹೇಗಿತ್ತೊ ಹಾಗೆ ರಾಜ್ಯ ಮಾಡಿದ್ದೀರಾ. ಹೀಗಾಗಿ ನೀವು ಇಲ್ಲಿ ಯುಪಿ ಮಾಡಲ್ ತರಬಹದು ಎಂದರು.
