
ಇನ್ನು ಒಂಬತ್ತು ಮುಸ್ಲಿಮರ ತಲೆಯನ್ನು ಕಡಿಯಬೇಕು” ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ ಕಾರಣ ಕಾಳಿ ಸ್ವಾಮಿ ಅಲಿಯಾಸ್ ಋಷಿಕುಮಾರ ಸ್ವಾಮೀಜಿ ವಿರುದ್ಧ ತುಮಕೂರಿನಲ್ಲಿ ಇಂದು ಪ್ರಕರಣ ದಾಖಲಾಗಿದೆ.ಎಫ್ ಐ ಆರ್ ದಾಖಲಾದರೂ ಬಂಧನ ಯಾಕಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ
ಅತ್ಯಂತ ಅವಹೇಳನಕಾರಿಯಾಗಿ, ಸಮುದಾಯಗಳ ನಡುವೆ ದ್ವೇಷ ಬಿತ್ತುವಂತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಣಕಿಸುವಂತೆ ಮಾತನಾಡಿರುವ ಕಾಳಿ ಸ್ವಾಮೀ, “ಇನ್ನೂ 9 ಜನ ಮುಸ್ಲಿಮರ ತಲೆ ಕಡಿಯಬೇಕು” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅದಕ್ಕಾಗಿ ಈಗ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಪೊಲೀಸರು ಬಂಧಿಸುತ್ತಾರೋ ನೋಡಬೇಕು.
ಒಂದು ಸಮುದಾಯದ ವಿರುದ್ಧ ಸದಾ ದ್ವೇಷದ ಹೇಳಿಕೆಗಳನ್ನು ನೀಡುವ ಕಾಳಿ ಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಕೊಲೆಗೂ ಪ್ರಚೋದನೆ ನೀಡಿ ಈಗ ಸುದ್ದಿಯಲ್ಲಿದ್ದಾರೆ.
ಕಾವಿ ಧರಿಸಿರುವ ವ್ಯಕ್ತಿಯೊಬ್ಬ ಹೀಗೆ ಅನಾಗರಿಕವಾಗಿ ಮಾತನಾಡುತ್ತಿರುವುದಕ್ಕೆ ಕನ್ನಡ ನಾಡಿನ ಜನತೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಕಾವಿಗೆ ಮಾಡುತ್ತಿರುವ ಅವಮಾನ ಇದೆಂದು ಪದೇ ಪದೇ ಜನಾಕ್ರೋಶ ವ್ಯಕ್ತವಾಗುತ್ತಿದ್ದರೂ ಕಾಳಿ ಸ್ವಾಮಿಯವರು ನಾಲಗೆ ಹರಿಬಿಡುವುದನ್ನು ನಿಲ್ಲಿಸಿಲ್ಲ.
ಕಳೆದ ಕೆಲವು ತಿಂಗಳಿಂದ ಕಾಳಿ ಸ್ವಾಮಿ ಸಾಮಾಜಿಕವಾಗಿ ಉಂಟು ಮಾಡಿರುವ ಕ್ಷೋಭೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕಾವಿ ಧರಿಸಿರುವ ವ್ಯಕ್ತಿಯೊಬ್ಬ ಮಾಡುತ್ತಿರುವ ಅವಾಂತರಗಳನ್ನು ಬೊಮ್ಮಾಯಿ ಸರ್ಕಾರ ಕಣ್ಣುಬಿಟ್ಟು ನೋಡಬೇಕಾದ ತುರ್ತಿದೆ.
ರಾಷ್ಟ್ರಕವಿ ಕುವೆಂಪುವಿಗೆ ಅಗೌರವ ವಿವಾದ
ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕಾಳಿ ಸ್ವಾಮಿಯವರಿಗೆ ಮಸಿ ಬಳಿದ ಘಟನೆ ಮೇ ತಿಂಗಳಲ್ಲಿ ನಡೆದಿತ್ತು.
ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಋಷಿಕುಮಾರ ಸ್ವಾಮಿ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಧಿಕ್ಕಾರ ಕೂಗಿ ಮುಖಕ್ಕೆ ಕಪ್ಪುಮಸಿ ಬಳಿದಿದ್ದರು.
ಆ ನಂತರದಲ್ಲಿ ಸ್ವಲ್ಪ ಬದಿಗೆ ಸರಿದಿದ್ದ ಕಾಳಿ ಸ್ವಾಮಿ ಈಗ ಮತ್ತೆ ಕ್ಷೋಭೆ ಉಂಟು ಮಾಡಲು ಮುಂದಾಗಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಫಾಝಿಲ್ ಎಂಬ ಯುವಕನ ನೆತ್ತರು ಹರಿದಿದೆ. ಇನ್ನೂ ಒಂಬತ್ತು ಮುಸ್ಲಿಮರನ್ನು ಕೊಲ್ಲುತ್ತೇವೆ ಎಂದು ಕಾಳಿ ಸ್ವಾಮಿ ಹೇಳಿಕೆ ನೀಡಿದ್ದಾನೆ.
