
ಮಂಗಳೂರು: ನೈಜ ಆರೋಪಿಗಳನ್ನ ಬಂಧನ ಮಾಡಿ ಶಿಕ್ಷೆ ಕೊಡುವ ಕೆಲಸ ಮಾಡಲಿ ಎಂದು ನಗರದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ (UT Khader) ಹೇಳಿಕೆ ನೀಡಿದರು. ಪಕ್ಷಪಾತವಿಲ್ಲದೆ ನ್ಯಾಯ ಕೊಡಿಸುವ ಕೆಲಸವನ್ನ ಸರ್ಕಾರ ಮಾಡಬೇಕಿದೆ. ಮಂಗಳೂರಿನಲ್ಲಿ ಶಾಂತಿ ನಲೆಸುವ ಕೆಲಸ ಮಾಡಬೇಕಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬಂದಾಗಲೇ ಕೊಲೆಯಾಗಿದೆ. ಸರ್ಕಾರದ ಮೇಲೆ ನಮಗೆ ನ್ಯಾಯ ಇಲ್ಲ. ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದಾಗ ಕಾನೂನು ಕೈಗೆತ್ತಿಕೊಳ್ತಾರೆ. ಸಿಎಂ ಬೊಮ್ಮಾಯಿ ಕೊಲೆಯಾದ ಮಸೂದ್ ಮನೆಗೆ ಹೋಗಿಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದರು.
ಮಸೂದ್ ಬರ್ಬರ ಕೊಲೆ ಹಿನ್ನೆಲೆ ಎಸ್‌ಡಿಎಫ್‌ಐ ಜಿಲ್ಲಾಧ್ಯಕ್ಷ ಅಬೂಬಕರ್ ಹೇಳಿಕೆ
ನೀಡಿದ್ದು, ನಿನ್ನೆ ಆರ್‌ಎಸ್‌ಎಸ್ ಹಿನ್ನೆಲೆ ಇರುವ ವ್ಯಕ್ತಿಗಳಿಂದ ಹತ್ಯೆಯಾಗಿದೆ. ಅಮಾಯಕ ವ್ಯಕ್ತಿಯನ್ನ ಸೂರತ್ಕಲ್‌ನಲ್ಲಿ ಕೊಲೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಶವದ ಮೇಲೆ ಆಡಳಿತವನ್ನ ಮಾಡುತ್ತಿದ್ದಾರೆ. ಕೊಲೆಯಿಂದ ರಾಜಕೀಯ ಶಕ್ತಿಗಳ ಕೈವಾಡ ಇದೆ. ಮಂಗಳೂರಿನಲ್ಲಿ ಇದುವರೆಗೆ 3ಜನರ ಕೊಲೆಯಾಗಿದೆ. ಮಸೂದ್ ಕೊಲೆಯಾದ ಸಂದರ್ಭದಲ್ಲಿ ಯಾರು ಧ್ವನಿ ಎತ್ತಲಿಲ್ಲ. ಪ್ರವೀಣ್ ಹತ್ಯೆಯನ್ನ ನಾನು ಖಂಡನೆ ಮಾಡುತ್ತೇನೆ. ನಿನ್ನೆ ಸಿಎಂ ಬೊಮ್ಮಾಯಿ ಬಂದು ಕೇವಲ ಪ್ರವೀಣ್ ಮನೆಗೆ ಭೇಟಿ ನೀಡಿದರು ಎಂದು ಹೇಳಿದರು.
