
ಬೆಳ್ಳಾರೆ;ಕೊಲೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಮನೆಗೆ ಸಿಎಂ, ಸಚಿವರ ಹಾದಿಯಾಗಿ ಎಲ್ಲರೂ ಭೇಟಿ ಕೊಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅದೇ ಪರಿಸರದಲ್ಲಿ ಒಂದು ವಾರದ ಹಿಂದೆ ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೊಳಗಾದ ಮಸೂದ್ ತಾಯಿ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಮನೆಯಲ್ಲಿ ಮಗನನ್ನು ಕೊಂದು ಒಂದು ವಾರ ಕಳೆದಿದೆ. ನಮ್ಮ ಮನೆಗೆ ಯಾರೂ ಬಂದಿಲ್ಲ. ನಿನ್ನೆ ಕೊಲೆಯಾದ ಮನೆಗೆ ಎಲ್ಲರೂ ಹೋಗಿದ್ದಾರೆ. ನಮಗೆ ಯಾರೂ ಸಾಂತ್ವಾನ ಹೇಳಿಲ್ಲ, ಸಿಎಂ ಯಾಕೆ ನಮ್ಮ ಮನೆಗೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಾನು ಕೂಡ ತಾಯಿ ಅಲ್ವ? ನನಗೆ ನೋವು ಇಲ್ವ, ನನಗೆ ಯಾಕೆ ಪರಿಹಾರ ಕೊಟ್ಟಿಲ್ಲ, ನಮಗೂ ಪರಿಹಾರ ಕೊಡಿ ಎಂದು ಸಿಎಂಗೆ ಮೃತ ಮಸೂದ್ ತಾಯಿ ಸಾರಮ್ಮ ಆಗ್ರಹಿಸಿದ್ದಾರೆ.
