ಪ್ರಚೋಧನಕಾರಿ ಭಾಷಣ ಜಿಲ್ಲೆಯಲ್ಲಿ ಕೋಮು ದ್ವೇಷ ದ ಹತ್ಯೆಗೆ ಕಾರಣ -ಬಿ.ರಮಾನಾಥ ರೈ
ಮಂಗಳೂರು, ಜು.28;ಕೆಲವು ರಾಜಕೀಯ ಮುಖಂಡರ ಕೋಮುದ್ವೇಷ ದ ಪ್ರಚೋಧನಾ ಕಾರಿ ಭಾಷಣಗಳು ಜಿಲ್ಲೆಯಲ್ಲಿಯೂ ಅಶಾಂತಿಯ ವಾತವರಣ ವನ್ನು ಸೃಷ್ಟಿ ಸಿದೆ ಮತ್ತು ಅಮಾಯಕರ ಕೊಲೆಗೂ ಕಾರಣ ವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರ ಮಾನಾಥ ರೈ ಸುದ್ದಿ ಗೋಷ್ಠಿಯಲ್ಲಿಂದು ಆರೋಪಿ ಸಿದ್ದಾರೆ.
ಈ ರೀತಿಯ ಪ್ರಚೋಧನಕಾರಿ ಭಾಷಣ ಮಾಡುವವರು ಗಲಭೆಗಳ ಹಿಂದೆ ಇರುತ್ತಾರೆ. ಆದರೆ ಇಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗ,ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರು,ಕೆಲವು ಅಮಾಯಕರು ಬಲಿಯಾಗುವುದು,ಜೈಲು ಸೇರುವುದು ನಡೆಯುತ್ತಿದೆ.ಸುಳ್ಯ ದಲ್ಲಿ ನಡೆದ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿ ರುವುದು ಕಂಡು ಬರುತ್ತದೆ.ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಲ್ಲಿ ವಿಫಲವಾಗಿದೆ.ಚುನಾವಣೆ ಹತ್ತಿರ ವಾಗುತ್ತಿರುವಂತೆ ಈ ಹತ್ಯೆ ಗಳು ಹಿಂದೆ ಯೂ ನಡೆದಿದೆ.ಹಣ ಅಧಿಕಾರದ ಕಾರಣಕ್ಕಾಗಿ ಈ ರೀತಿಯ ಹತ್ಯೆ ಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈ ಗೊಂಡರೆ ಜಿಲ್ಲೆ ಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ .ದ್ವೇಷ ಕ್ಕೆ ದ್ವೇಷ ,ಹಿಂಸೆ ಗೆ ಹಿಂಸೆ ಉತ್ತರ ವಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸುಳ್ಯ ದಲ್ಲಿ ನಡೆದ ಮಸೂದ್,ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗ ದಲ್ಲಿ ನೀಡಿದಂತೆ ತಾರತಮ್ಯ ಮಾಡದೆ ಎರಡೂ ಕುಟುಂಬ ಗಳಿಗೂ ಕನಿಷ್ಠ ತಲಾ 25ಲಕ್ಷ ರೂ ಪರಿಹಾರ ನೀಡಬೇಕು .ನೈಜ ಆರೋಪಿಗಳ ನ್ನು ಬಂಧಿಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾದ ಶಶಿ ಧರ ಹೆಗ್ಡೆ, ಹರಿನಾಥ್, ಶುಭೋದ ಯ ಆಳ್ವ,ಪ್ರಕಾಶ್ ಸಾಲ್ಯಾನ್,ಪ್ರಚೋಧನಕಾರಿ ಭಾಷಣ ಜಿಲ್ಲೆಯಲ್ಲಿ ಕೋಮು ದ್ವೇಷ ದ ಹತ್ಯೆಗೆ ಕಾರಣ -ಬಿ.ರಮಾನಾಥ ರೈ