
ಮಕ್ಕಳು ಸಜ್ಜನರಾಗುವು ದಕ್ಕಿಂತ ದೊಡ್ಡ ಆಸ್ತಿ ಹೆತ್ತವರರಿಗೆ ಬೇರೊಂದಿಲ್ಲ. ಹಾಜಿ ಅಶ್ರಫ್ ಫೈಝಿ ಮಿತ್ತಬೈಲ್
ಮಕ್ಕಳು ಕೇಳಿದ್ದನ್ನೆಲ್ಲಾ ತೆಗೆದುಕೊಟ್ಟು ಜಂಬ ಕೊಚ್ಚಿಕೊಳ್ಳುವುದು ಹೆತ್ತವರ ಲಕ್ಷಣವಲ್ಲ, ಸಣ್ಣಪ್ರಾಯದಲ್ಲೇ ಮಕ್ಕಳಿಗೆ ಅಲ್ಲಾಹುವಿನ ಬಗ್ಗೆ ಅರಿವು ಮೂಡಿಸಬೇಕು. ಇಂದು ಕೇವಲ ಸ್ಟೇಟಸ್ ಅಲ್ಲಿ ಮಾತ್ರ ತಂದೆತಾಯಿಯನ್ನು ಪ್ರೀತಿಸುವಂತೆ ಆಗಿದೆಯೇ ನಿಜಜೀವನದಲ್ಲಿ ನೋಡಿದರೆ ಹೆತ್ತವರನ್ನು ಸರಿಯಾಗಿ ನೋಡುವ ಮಕ್ಕಳಿಲ್ಲ.ಪೋಷಕರು ಮಕ್ಕಳೊಂದಿಗೆ ಉತ್ತಮ ಸ್ನೇಹಿತ ರಂತೆ ವರ್ತಿಸಿ, ಅವರ ಮನಸ್ಸಿನ ನೋವು, ನಲಿವು, ಸಂತೋಷಗಳನ್ನು ಮನಗೊಂಡು ಅದಕ್ಕಾನುಸಾರವಾಗಿ ಅವರೊಂದಿಗೆ ಬೆರೆತು ಒಳಿತನ್ನು ಭೋಧನೆ ಮಾಡುವ ಪ್ರಕ್ರಿಯೆ ಪೋಷಕರ ಭಾಗದಿಂದ ನಡೆಯಬೇಕು. ಎಷ್ಟೇ ಉನ್ನತ ವಾದ ಲೌಕಿಕ ವಿದ್ಯಾಭ್ಯಾಸವನ್ನು ನೀಡಿದರು ಅಲ್ಲಾಹುವಿನ ಬಗ್ಗೆ ಅರಿವು ಮೂಡಿಸದಿದ್ದಲ್ಲಿ ಎಲ್ಲಾ ವಿದ್ಯಾಭ್ಯಾಸ ವ್ಯರ್ಥವಾಗಲಿದೆ.ಮಕ್ಕಳು ಕೇಳಿದಷ್ಟು ಹಣವನ್ನು ಕೊಡುವುದಲ್ಲ.ಅದು ಯಾವುದಕ್ಕೆ ಖರ್ಚು ಮಾಡುತ್ತಿಯ ಎಂಬುದು ತಿಳಿಯ ಬೇಕು. ದುಂದು ವೆಚ್ಚ ಮಾಡುವುದು ತಡೆಯಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದುವೇ ನಮಗೆ ಮಾರಕವಾಗುತ್ತದೆ.ಮಕ್ಕಳು ಸಜ್ಜನರಾಗುವುದು ದಕ್ಕಿಂತ ದೊಡ್ಡ ಆಸ್ತಿ ಹೆತ್ತವರರಿಗೆ ಬೇರೊಂದಿಲ್ಲ.ಎಂದು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಖತೀಬರಾದ ಹಾಜಿ ಅಶ್ರಫ್ ಫೈಝಿ ಇಂದು ಜುಮಾ ನಮಾಜ್ ನಂತರ ಮಾತನಾಡುತ್ತಾ ಹೇಳಿದರು.
💥ಹಂಝ ಬಂಟ್ವಾಳ
