

ಮಂಗಳೂರು :ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಅಡ್ಡೂರು ಘಟಕ ಇದರ ಅಧೀನ ಸಂಸ್ಥೆಯಾದ ಆಯಿಷಾ ಸಿದ್ದಿಖಾ ಮದರಸದಲ್ಲಿ ಮದರಸ ಪ್ರಾರಂಭದ ದಿನವಾದ ಇಂದು ಪ್ರಾರಂಬೊತ್ಸವ ಕಾರ್ಯಕ್ರಮ ನಡೆಯಿತು. ಮದರಸದ ಮೌಲವಿ ಅಬ್ಬಾಸ್ ಉಸ್ತಾದ್ ಅಬೆಟ್ಟು ಇವರ ನೇತೃತ್ವ ದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಸತೆಯನ್ನು ಆಯಿಷಾ ಮಸ್ಜಿದ್ ಇದರ ಅಧ್ಯಕ್ಷರಾದ ಶಾಫಿ ಕೊಯ್ಯಾರ್ ರವರು ವಹಿಸಿದರು.
ಅಬ್ಬಾಸ್ ಮೌಲವಿ ಉಸ್ತಾದ್ ರವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ವಿದ್ಯಾರ್ಥಿಗಳು ಶಿಸ್ತು, ಸಂಯಮ ಪಾಲಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕೆಂದು ಹೇಳಿದರು. ಕಾರ್ಯಕ್ರಮ ದಲ್ಲಿ ಆಯಿಷಾ ಮಸ್ಜಿದ್ ಇದರ ಆಡಳಿತ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

