ಮೈಸೂರಿನಲ್ಲಿ ಬಾಲಕಿ ಅತ್ಯಾ*ರ ಕೊಲೆ ಪ್ರಕರಣ, ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ ನಡೆಸಲಾಗಿದೆ. ಅಲೆಮಾರಿ ಬಾಲಕಿ ಮೇಲಿನ ಪೈಶಾಚಿಕ ಕೃತ್ಯದ ಬೆನ್ನಲ್ಲೇ ಆರೋಪಿ ಪತ್ತೆ ಹಚ್ಚಿದ ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಮೈಸೂರು (ಅ.09 ಮೈಸೂರು ದಸರಾ ಸಂಭ್ರಮದ ನಡುವೆ ನಡೆದ ಪೈಶಾಚಿಕ ಘಟನೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕುಟುಂಬದ ಜೊತೆ ಮೈಸೂರು ದಸರಾ ಹಬ್ಬದ ವೇಳೆ ಬಲೂನು ಮಾರಾಟ ಮಾಡಲು ಬಂದಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾ*ರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿ ಕಾರ್ತಿಕ್ನ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ
ಆರೋಪಿ ಕಾಲಿಗೆ ಬಿದ್ದ ಗುಂಡು
ಕೃತ್ಯ ಎಸಗಿ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಮೇಟಗಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿದ್ದರೆ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ತಕ್ಷಣವೇ ಆರೋಪಿಯನ್ನು ಬಂಧಿಸಿದ ಪೊಲೀಸರು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ
ಬಾಲಕಿ ಹತ್ಯೆ ಪ್ರಕರಣದ ಆರೋಪಿ ಕಾರ್ತಿಕ್ ಅರೆಸ್ಟ್ ಆಗುತ್ತಿದ್ದಂತೆ ಹಲವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಹಲವರು ಎನ್ಕೌಂಟರ್ ನಡೆಸುವಂತೆ ಆಗ್ರಹಿಸಿದ್ದಾರೆ. ಇತ್ತ ಮೈಸೂರು ಪೊಲೀಸರ ಕಾರ್ಯಾಚರಣೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.



ಮೈಸೂರು ದಸರಾ ಸಂಭ್ರಮದಲ್ಲಿ ನರಳಿದ್ದ ಬಾಲಕಿ
ಗುಲ್ಬರ್ಗದ ಅಲೆಮಾರಿ ಕುಟುಂಬ ಮೈಸೂರು ದಸರಾದಲ್ಲಿ ಬಲೂನು ಸೇರಿದಂತೆ ಇತರ ವಸ್ತುಗಳ ಮಾರಾಟ ಮಾಡುತ್ತಿತ್ತು. ಬೇರೆ ಬೇರೆ ಊರುಗಲ್ಲಿ ನಡೆಯುವ ಜಾತ್ರೆಗೆ ತೆರಳಿ ಟೆಂಟ್ ಹಾಕಿ ಜಾತ್ರೆಯಲ್ಲಿ ಬಲೂನು ಸೇರಿದಂತೆ ವಸ್ತುಗಳ ಮಾರಾಟ ಮಾಡುವ ಕುಟುಂಬ, ಮೈಸೂರಿಗೂ ಆಗಮಿಸಿತ್ತು. ಆದರೆ ಮೈಸೂರಿನಲ್ಲಿ ಈ ಕುಟುಂಬ ಮಗಳನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದೆ. ಬಲೂನು ಮಾರಾಟ ಮಾಡಿ ತಡ ರಾತ್ರಿ ಟೆಂಟ್ನಲ್ಲಿ ಮಲಗಿದ್ದ ಈ ಕಟುಂಬ ಮಳೆ ಕಾರಣದಿಂದ ಮುಂಜಾನೆ ಎದ್ದು ನೋಡಿದರೆ 9 ವರ್ಷದ ಮಗಳು ನಾಪತ್ತೆಯಾಗಿದ್ದಳು. ಎಲ್ಲಾ ಕಡೆ ಹುಡುಕಾಡಿದರೂ ಮಗಳ ಪತ್ತೆ ಇರಲಿಲ್ಲ. ಗಾಬರಿಗೊಂಡ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪೊಲೀಸರು ತಂಡ ಹುಡುಕಾಟ ಆರಂಭಿಸಿತ್ತು. ಒಂದು ತಂಡ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಆರಂಭಿಸಿದ್ದರೆ, ಮತ್ತೊಂದು ಕಂಡ ಟೆಂಟ್, ದಸರಾ ಸುತ್ತ ಮುತ್ತ ಹುಡುಕಾಟ ಆರಂಭಿಸಿತ್ತು. ಟೆಂಟ್ ಕೆಲವೇ ದೂರದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಅತ್ಯಾ*ರ ಎಸಗಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆ ಹಚ್ಚಿದ ಪೊಲೀಸರು ಬಂಧನಕ್ಕಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಕೊಳ್ಳೇಗಾಲದ ಕಡೆ ಹೊರಟ ಆರೋಪಿಗಾಗಿ ಮೈಸೂರು ಪೊಲೀಸರು ಕೊಳ್ಳೇಗಾಲಕ್ಕೆ ತೆರಳಿದ್ದಳು. ಕಾರ್ಯಾಚರಣೆ ವೇಳೆ ಮೇಟಗಳ್ಳಿ ಬಳಿ ಆರೋಪಿ ಕಾರ್ತಿಕ್ ಸುಳಿವು ಪತ್ತೆಯಾಗಿತ್ತು. ಇದೇ ವೇಳೆ ದಾಳಿ ನಡೆಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ.