ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ರಾವಣನ ದಹನ ಕಾರ್ಯಕ್ರಮ ನಡೆದಿದೆ. ಈ ವೇಳೆ ರಾವಣನ ಪ್ರತಿಕೃತಿ ದಹಿಸುವ ಸಮಯದಲ್ಲಿ ರಾವಣನ ಹತ್ತು ತಲೆಗಳಲ್ಲಿ ಜೆಎನ್ಯುವಿನ ಹಳೆಯ ವಿದ್ಯಾರ್ಥಿಗಳಾಸ ಖಾಲಿದ್, ಶಾರ್ಜೀಲ್ ಫೋಟೊಗಳನ್ನು ಅಂಟಿಸಲಾಗಿತ್ತು. ಇದರಿಂದಾಗಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.ಖಾಲಿದ್ ಮತ್ತು ಇಮಾಮ್ ಇಬ್ಬರೂ ಪ್ರಸ್ತುತ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ದೆಹಲಿ ಗಲಭೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ನವದೆಹಲಿ, ಅಕ್ಟೋಬರ್ 03: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(JNU)ದಲ್ಲಿ ಗುರುವಾರ ರಾವಣ ದಹನ ಕಾರ್ಯಕ್ರಮದ ವೇಳೆ ಘರ್ಷಣೆ ಸಂಭವಿಸಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಎರಡೂ ವಿದ್ಯಾರ್ಥಿ ಗುಂಪುಗಳು ಪರಸ್ಪರ ಚಪ್ಪಲಿಗಳನ್ನು ಎಸೆಯಲು ಪ್ರಾರಂಭಿಸಿದವು. ದುರ್ಗಾ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಎಡಪಂಥೀಯ ವಿದ್ಯಾರ್ಥಿ ಗುಂಪುಗಳು ದಾಳಿ ಮಾಡಿವೆ ಎಂದು ಎಬಿವಿಪಿ ಆರೋಪಿಸಿದೆ.
ಅಲ್ಲಿನ ಮಾಜಿ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಫೋಟೊಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಖಾಲಿದ್ ಮತ್ತು ಇಮಾಮ್ ಇಬ್ಬರೂ ಪ್ರಸ್ತುತ ಸಿಎಎ ವಿರೋಧಿ ಪ್ರತಿಭಟನೆಗಳು ಮತ್ತು ದೆಹಲಿ ಗಲಭೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ರಾವಣ ದಹನ ಕಾರ್ಯಕ್ರಮದ ಮೂಲಕ ಎಬಿವಿಪಿ ರಾಜಕೀಯ ಪ್ರಚಾರಕ್ಕಾಗಿ ಧರ್ಮವನ್ನು ಬಳಸುತ್ತಿದೆ ಎಂದು ಎಡಪಂಥೀಯ ಸಂಘಟನೆಗಳು ಆರೋಪಿಸಿದವು. ಆದಾಗ್ಯೂ, ಈ ವಿಷಯದ ಬಗ್ಗೆ ಜೆಎನ್‌ಯು ಆಡಳಿತದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಎಐಎಸ್ಎ, ಎಸ್‌ಎಫ್‌ಐ ಮತ್ತು ಡಿಎಸ್‌ಎಫ್ ಸೇರಿದಂತೆ ಎಡಪಂಥೀಯ ಗುಂಪುಗಳು ಸಂಜೆ 7 ಗಂಟೆ ಸುಮಾರಿಗೆ ಸಬರಮತಿ ಟಿ-ಪಾಯಿಂಟ್ ಬಳಿ ವಿಸರ್ಜನಾ ಮೆರವಣಿಗೆಯ ಮೇಲೆ ಹಿಂಸಾತ್ಮಕ ದಾಳಿ ನಡೆಸಿದವು ಎಂದು ಎಬಿವಿಪಿ ಆರೋಪ ಮಾಡಿದೆ.
ಕಲ್ಲು ತೂರಾಟ ಮತ್ತು ಮಾತಿನ ಚಕಮಕಿಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಎಬಿವಿಪಿ ಹೇಳಿಕೊಂಡಿದೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮದ ಮೇಲಿನ ದಾಳಿಯಲ್ಲ, ಬದಲಾಗಿ ವಿಶ್ವವಿದ್ಯಾಲಯದ ಹಬ್ಬದ ಸಂಪ್ರದಾಯ ಮತ್ತು ವಿದ್ಯಾರ್ಥಿಗಳ ನಂಬಿಕೆಯ ಮೇಲಿನ ನೇರ ದಾಳಿಯಾಗಿದೆ. ಎಬಿವಿಪಿ ಇಂತಹ ಸಾಂಸ್ಕೃತಿಕ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜೆಎನ್‌ಯು ಎಬಿವಿಪಿ ಅಧ್ಯಕ್ಷ ಮಾಯಾಂಕ್ ಪಾಂಚಲ್ ಹೇಳಿದ್ದಾರೆ.
ರಾವಣನ ಪ್ರತಿಕೃತಿಯ 10 ತಲೆಗಳನ್ನು ಸುಟ್ಟುಹಾಕಲಾಗಿದ್ದು, CAA ಹೋರಾಟ ಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಹಲವರ ಛಾಯಾಚಿತ್ರಗಳನ್ನು ಆ ತಲೆಗಳು ಒಳಗೊಂಡಿತ್ತು. ಇದನ್ನು ನೋಡಿದ ಎಡಪಂಥೀಯ ವಿದ್ಯಾರ್ಥಿಗಳು ಕೋಪಗೊಂಡುವಿರೋಧ ವ್ಯಕ್ತ ಪಡಿಸಿಸಿದರು ಈ ವೇಳೆ ABVP ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿದರು ಎಂದು ಹೇಳಲಾಗುತ್ತಿದೆ. ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಜೆಎನ್‌ಯು ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ವೈಭವ್ ಮೀನಾ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು, ಇದು ಜೆಎನ್‌ಯುನ ಸಾಂಸ್ಕೃತಿಕ ಸಾಮರಸ್ಯ ಮತ್ತು ಸಹೋದರತ್ವದ ಮೇಲಿನ ನೇರ ದಾಳಿ ಎಂದು ಕರೆದರು.