ಏಷ್ಯಾ ಕಪ್ ಗೆದ್ದ ಟೀಂ ಇಂಡಿಯಾ ತವರಿಗೆ ಮರಳಿದ್ದು, ಅದ್ದೂರಿ ಸ್ವಾಗತ ನೀಡಲಾಗಿದೆ. ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಮಾತನಾಡಿದ ಕ್ಯಾಪ್ಟನ್ ಸೂರ್ಯ, ನಾವು ಡ್ರೆಸ್ಸಿಂಗ್ ರೂಮ್ನ ಡೋರ್ ಕ್ಲೋಸ್ ಮಾಡಿ ಒಳಗೆ ಕೂತಿರಲಿಲ್ಲ. ಪ್ರೆಸೆಂಟೇಶನ್ ಸಮಾರಂಭಕ್ಕಾಗಿ ಯಾರನ್ನೂ ಕಾಯುವಂತೆ ಮಾಡಲಿಲ್ಲ ಎಂದಿದ್ದಾರೆ.
30 Sep 2025 10:49
/newsfirstlive-kannada/media/media_files/2025/09/30/surya-kumar-yadav-3-2025-09-30-10-44-39.jpg)
ಏಷ್ಯಾ ಕಪ್ ಟ್ರೋಫಿ (Asia cup trophy) ವಿವಾದಕ್ಕೆ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಬಿಗ್ ಟ್ವಿಸ್ಟ್ ನೀಡಿದ್ದಾರೆ. ನಾವು ಯಾವತ್ತೂ ಟ್ರೋಫಿಯನ್ನ ಸ್ವೀಕರಿಸಲ್ಲ ಎಂದು ಹೇಳಿಯೇ ಇಲ್ಲ. ಟ್ರೋಫಿಗಾಗಿ ಒಂದೂವರೆ ಗಂಟೆ ಮೈದಾನದಲ್ಲಿ ಕಾದು ಕೂತಿದ್ದೇವು. ಆದರೆ ಅವರು (ಏಷ್ಯನ್ ಕ್ರಿಕೆಟ್ ಕೌನ್ಸಿಲ್) ಟ್ರೋಫಿಯನ್ನ ತೆಗೆದುಕೊಂಡು ಹೋಗ್ತಿರೋದನ್ನ ನೋಡಿದೇವು ಎಂದಿದ್ದಾರೆ.
ಯಾರೂ ನಮಗೆ ಸೂಚನೆ ಕೊಟ್ಟಿರಲಿಲ್ಲ
ಏಷ್ಯಾ ಕಪ್ ಗೆದ್ದ ಟೀಂ ಇಂಡಿಯಾ ತವರಿಗೆ ಮರಳಿದ್ದು, ಅದ್ದೂರಿ ಸ್ವಾಗತ ನೀಡಲಾಗಿದೆ. ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಮಾತನಾಡಿದ ಕ್ಯಾಪ್ಟನ್ ಸೂರ್ಯ, ನಾವು ಡ್ರೆಸ್ಸಿಂಗ್ ರೂಮ್ನ ಡೋರ್ ಕ್ಲೋಸ್ ಮಾಡಿ ಒಳಗೆ ಕೂತಿರಲಿಲ್ಲ. ಪ್ರೆಸೆಂಟೇಶನ್ ಸಮಾರಂಭಕ್ಕಾಗಿ ಯಾರನ್ನೂ ಕಾಯುವಂತೆ ಮಾಡಲಿಲ್ಲ. ಅವರು ಟ್ರೋಫಿಯೊಂದಿಗೆ ಓಡಿಹೋದರು. ನಾವು ಅದನ್ನು ನೋಡಿದೇವು. ಕೆಲವರು ನಮ್ಮ ವೀಡಿಯೊ ಮಾಡುತ್ತಿದ್ದರು. ನಾವು ಮೈದಾನದಲ್ಲಿ ನಿಂತಿದ್ದೆವು. ನಾವು ಡ್ರೆಸ್ಸಿಂಗ್ ರೂಮ್ನಲ್ಲಿ ಇರಲಿಲ್ಲ ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/09/30/bcci-and-team-india-2025-09-30-08-15-54.jpg)
ಮೈದಾನದಲ್ಲಿ ನಾವು ಮೊಬೈಲ್ ಹಿಡಿದು ಒಂದೂವರೆ ಗಂಟೆಯಿಂದ ಕಾದೆವು. ಶಿವಂ ದುಬೆ, ಕುಲ್ದೀಪ್ ಯಾದವ್, ಅಭಿಷೇಕ್ ಶರ್ಮಾ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಹತ್ತಿರ ಹೋಗಿದ್ದರು. ಪ್ರಶಸ್ತಿ ನೀಡುತ್ತಾರೆ ಎಂದು ಅಲ್ಲಿಗೆ ಹೋಗಿದ್ದರು. ಅದರೆ ಅವರು (ನಖ್ವಿ) ಪ್ರಶಸ್ತಿಯನ್ನು ತೆಗೆದುಕೊಂಡು ಹೋದರು ಎಂದು ಸೂರ್ಯ ಆರೋಪಿಸಿದ್ದಾರೆ.
ಇದೇ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ತೆಗೆದುಕೊಳ್ಳದಂತೆ ಸರ್ಕಾರ ಅಥವಾ ಬಿಸಿಸಿಐ ನಮ್ಮ ಮೇಲೆ ಒತ್ತಡ ಹೇರಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್ ತಂಡದ ನಿಲುವು ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/09/29/tema-india-1-2025-09-29-07-30-01.jpg)
‘ಮೊದಲನೆಯದಾಗಿ, ನಾನು ಸ್ಪಷ್ಟಪಡಿಸುತ್ತೇನೆ. ಯಾರಾದರೂ ಟ್ರೋಫಿ ನೀಡಿದರೆ ನಾವು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಲು ನಮಗೆ ಯಾವುದೇ ಸೂಚನೆ ಬಂದಿರಲಿಲ್ಲ. ಸರ್ಕಾರ ಅಥವಾ ಬಿಸಿಸಿಐನಿಂದ ಯಾರೂ ಕೂಡ ಹೇಳಿರಲಿಲ್ಲ. ನಾವು ಮೈದಾನದಲ್ಲಿ ಆ ನಿರ್ಧಾರವನ್ನು ತೆಗೆದುಕೊಂಡೆವು. ಏಸಿಸಿ ಅಧಿಕಾರಿಗಳು ವೇದಿಕೆಯ ಮೇಲೆ ನಿಂತಿದ್ದರು. ನಾವು ಕೆಳಗೆ ನಿಂತಿದ್ದೆವು. ವೇದಿಕೆಯ ಮೇಲೆ ಮಾತನಾಡುತ್ತಿರುವುದನ್ನು ನೋಡಿದೆ. ಅವರ ಸಂಭಾಷಣೆಯ ವಿವರಗಳು ನನಗೆ ತಿಳಿದಿಲ್ಲ. ಗುಂಪಿನಲ್ಲಿದ್ದ ಕೆಲವರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು. ತದನಂತರ ಅವರ ಪ್ರತಿನಿಧಿಯಾಗಿದ್ದ ಒಬ್ಬರು ಟ್ರೋಫಿಯನ್ನು ತೆಗೆದುಕೊಂಡು ಓಡಿಹೋಗುವುದನ್ನು ನೋಡಿದ್ದೇವು ಎಂದಿದ್ದಾರೆ.