ಕ್ಯಾಪ್ಟನ್ ಸೂರ್ಯಕುಮಾರ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ್ದ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಪಡೆಯಲಿಲ್ಲ. ಗಿಲ್ 5 ರನ್ಗೆ ಕ್ಲೀನ್ ಬೋಲ್ಡ್ ಆದರು.
20 Sep 2025 07:11
/newsfirstlive-kannada/media/media_files/2025/09/20/ind_oman-2025-09-20-07-08-40.jpg)
ಒಮಾನ್ ವಿರುದ್ಧ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಹರಸಾಹಸ ಪಟ್ಟು ಕೊನೆಗೆ 21 ರನ್ಗಳಿಂದ ಗೆದ್ದು ಬೀಗಿದೆ. ಕೈಜಾರುತ್ತಿದ್ದ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಸೂರ್ಯಕುಮಾರ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ್ದ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಪಡೆಯಲಿಲ್ಲ. ಗಿಲ್ 5 ರನ್ಗೆ ಕ್ಲೀನ್ ಬೋಲ್ಡ್ ಆಗಿ ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರು.
/filters:format(webp)/newsfirstlive-kannada/media/media_files/2025/09/19/abhishek_sharma_bat-2025-09-19-22-02-13.jpg)
ಗಿಲ್ ಬಳಿಕ ಕ್ರೀಸ್ಗೆ ಸಂಜು ಸ್ಯಾಮ್ಸನ್ ಆಗಮಿಸಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇನ್ನೊಂದೆಡೆ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ 5 ಬೌಂಡರಿ, 2 ಸಿಕ್ಸರ್ಗಳಿಂದ 38 ರನ್ ಗಳಿಸಿ ಆಡುವಾಗ ಕ್ಯಾಚ್ ಕೊಟ್ಟರು. ಹಾರ್ದಿಕ್ ಪಾಂಡ್ಯ ಕೇವಲ 1 ರನ್ಗೆ ರನೌಟ್ ಆದರು. ಆಲ್ರೌಂಡರ್ ಅಕ್ಷರ್ ಪಟೇಲ್ 26 ರನ್ ಗಳಿಸಿದರೆ ಶಿವಂ ದುಬೆ 5 ರನ್ಗೆ ಔಟ್ ಆದರು. ತಿಲಕ್ ವರ್ಮಾ 2 ಸಿಕ್ಸರ್ಗಳಿಂದ 29, ಆರ್ಷ್ದೀಪ್ ಸಿಂಗ್ ರನೌಟ್ ಆದರು.
ಆದರೆ ಕ್ರೀಸ್ ಕಾಯ್ದುಕೊಂಡಿದ್ದ ಸಂಜು ಸ್ಯಾಮ್ಸನ್, ಒಮಾನ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಮಾನ ಕಾಪಾಡಿದರು. 41 ಬಾಲ್ಗಳಲ್ಲಿ 3 ಬೌಂಡರಿ, 3 ಭರ್ಜರಿ ಸಿಕ್ಸರ್ಗಳಿಂದ ಅರ್ಧಶತಕ ಸಿಡಿಸಿದರು. ಇದೇ ವೇಳೆ 56 ರನ್ ಗಳಿಸಿ ಆಡುವಾಗ ಸಂಜು ಔಟ್ ಆದರು. ಹೀಗಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 189 ರನ್ಗಳ ಗುರಿಯನ್ನು ಒಮಾನ್ಗೆ ನೀಡಿತ್ತು.
/filters:format(webp)/newsfirstlive-kannada/media/media_files/2025/09/19/sanju_samson-3-2025-09-19-21-42-14.jpg)
ಈ ಟಾರ್ಗೆಟ್ ಬೆನ್ನು ಬಿದ್ದ ಒಮಾನ್ ಉತ್ತಮ ಪೈಪೋಟಿಯನ್ನೇ ಕೊಟ್ಟಿತು. ಒಂದು ರೀತಿಯಲ್ಲಿ ಸೂರ್ಯಕುಮಾರ್ ಪಡೆಗೆ ನೀರುಕುಡಿಸುವ ಮಟ್ಟಕ್ಕೆ ಕೊನೆವರೆಗೆ ಪಂದ್ಯ ತಂದು ಸೋಲುಂಡಿತು. ಭರ್ಜರಿ ಬ್ಯಾಟಿಂಗ್ ಮಾಡಿದ ಒಮಾನ್ ಪರ ಓಪನರ್ಸ್ ನಾಯಕ ಜತೀಂದರ್ ಸಿಂಗ್ 32 ಬಾರಿಸಿ ಔಟ್ ಆದರು. ಆದರೆ ಇನ್ನೊಬ್ಬ ಆರಂಭಿಕ ಬ್ಯಾಟ್ಸ್ಮನ್ ಅಮೀರ್ ಕಲೀಮ್ 2 ಸಿಕ್ಸ್, 7 ಅಮೋಘವಾದ ಬೌಂಡರಿಗಳಿಂದ 64 ರನ್ ಚಚ್ಚಿದರು.
ಇನ್ನು 3ನೇ ಬ್ಯಾಟರ್ ಆಗಿ ಕ್ರೀಸ್ಗೆ ಬಂದಿದ್ದ ಹಮ್ಮದ್ ಮಿರ್ಜಾ ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್ಗಳಿಂದ ಅರ್ಧಶತಕ ಸಿಡಿಸಿದರು. ವಿನಾಯಕ ಶುಕ್ಲಾ 1 ರನ್, ಜಿಕ್ರಿಯಾ ಇಸ್ಲಾಂ ಹಾಗೂ ಜಿತೇನ್ ರಾಮನಂದಿ ಕ್ರೀಸ್ನಲ್ಲಿರುವಾಗ ಓವರ್ ಮುಗಿದಿದ್ದರಿಂದ ಒಮಾನ್ ಗುರಿ ತಲುಪಲು ಆಗಲಿಲ್ಲ. ಹೀಗಾಗಿ ಟೀಮ್ ಇಂಡಿಯಾ 21 ರನ್ಗಳಿಂದ ಪಂದ್ಯವನ್ನು ವಶಪಡಿಸಿಕೊಂಡಿತು. ಕೊನೆಗೆ ಮಾತನಾಡುವಾಗ ಕ್ಯಾಪ್ಟನ್ ಸೂರ್ಯಕುಮಾರ್ ಅವರು ಒಮಾನ್ ತಂಡದ ಬ್ಯಾಟಿಂಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.