ಚಿಕ್ಕಬಳ್ಳಾಪುರ, (ಸೆಪ್ಟೆಂಬರ್ 17): ಮಹಿಳೆಯೊಬ್ಬರು ಎರಡನೇ ಹೆರಿಗೆಗೆಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ, ತೀವ್ರ ರಕ್ತಸ್ರಾವದಿಂದ ಬಾಣಂತಿ ಮಹಿಳೆ ಏಕಾಏಕಿ ಸಾವನ್ನಪ್ಪಿದ್ದಾಳೆ. ಗೌರಿಬಿದನೂರು ತಾಲೂಕಿನ ಪುಲಗಾನಹಳ್ಳಿ ಗ್ರಾಮದ 35 ವರ್ಷದ ಬಾಗ್ಯಮ್ಮ ಮೃತ ಮಹಿಳೆ. ಸಿಜೇರಿಯನ್ ಹೆರಿಗೆ ಮಾಡಿಸಲು ಅಲ್ಲಿಯ ಸರ್ಕಾರಿ ವೈದ್ಯರು ಹತ್ತು ಸಾವಿರ ರೂಪಾಯಿ ಲಂಚ ಕೇಳಿದ್ರಂತೆ, ಇದ್ರಿಂದ ಆಕೆಯ ಗಂಡ, ಆಟೊವನ್ನು ಒತ್ತೆಯಿಟ್ಟು ವೈದ್ಯರಿಗೆ ಹಣ ತಂದುಕೊಟ್ಟಿದ್ದ. ಆದ್ರೆ, ಹಣವೂ ಹೊಯ್ತು ಇತ್ತ ಹೆಂಡ್ತಿಯೂ ಉಳಿಲಿಲ್ಲ ಎಂದು ಮೃತ ಮಹಿಳೆಯ ಪತಿ ಗೋಳಾಡಿದ್ದಾರೆ.