Ashraf Kammaje
Published : Aug 10 2025, 12:59 PM ISTUpdated : Aug 10 2025, 01:00 PM IST
ಯೆಮೆನ್ನಲ್ಲಿ ಶಿಕ್ಷೆಗೆ ಒಳಗಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ದಿನಾಂಕ ಪ್ರಕಟಿಸುವಂತೆ ತಲಾಲ್ ಸೋದರ ಅಟಾರ್ನಿ ಜನರಲ್ ಅವರನ್ನು ಭೇಟಿ ಮಾಡಿದ್ದಾರೆ.
ಯಮೆನ್ನಲ್ಲಿ ಶಿಕ್ಷೆಗೆ ಒಳಗಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ದಿನಾಂಕ ಪ್ರಕಟಿಸುವಂತೆ ತಲಾಲ್ ಸೋದರ ಅಟಾರ್ನಿ ಜನರಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯೆಮೆನ್ ಜೈಲಿನಲ್ಲಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆಗೆ ಕಠಿಣ ನಿಲುವು ತೆಗೆದುಕೊಂಡಿರುವ ಮರಣದಂಡನೆಗೆ ಹೊಸ ದಿನಾಂಕಕ್ಕಾಗಿ ತಲಾಲ್ ಸೋದರ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ
ಕೇರಳ ಮೂಲದ ನರ್ಸ್ ನಿಮಿಷ ಪ್ರಿಯ ಅವರ ಮರಣದಂಡನೆಗೆ ಹೊಸ ದಿನಾಂಕವನ್ನು ಕೋರಲು ಅಟಾರ್ನಿ ಜನರಲ್ ಅವರನ್ನು ಭೇಟಿಯಾಗಿದ್ದಾಗಿ ಅಬ್ದುಲ್ ಫತ್ತಾಹ್ ಮೆಹದಿ ಬಹಿರಂಗಪಡಿಸಿದ್ದಾರೆ. ಅಟಾರ್ನಿ ಜನರಲ್ ಅವರನ್ನು ಭೇಟಿಯಾಗಿರುವ ಮಾಹಿತಿಯನ್ನು ಅಬ್ದುಲ್ ಫತ್ತಾಹ್ ಮೆಹದಿ ಫೇಸ್ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Image Credit : our own
ನಿಮಿಷಾ ಪ್ರಿಯಾ ಮರಣದಂಡನೆಯನ್ನು ಮುಂದೂಡಿ ಹಲವು ದಿನಗಳು ಕಳೆದಿವೆ. ಈವರೆಗೂ ಯಾವುದೇ ಹೊಸ ದಿನಾಂಕವನ್ನು ಪ್ರಕಟಿಸಿಲ್ಲ ಎಂದು ಅಬ್ದುಲ್ ಫತ್ತಾಹ್ ಮೆಹದಿ ಪ್ರಾಸಿಕ್ಯೂಟರ್ಗೆ ಪತ್ರ ಬರೆದಿದ್ದರು. ಮರಣದಂಡನೆಗೆ ಹೊಸ ದಿನಾಂಕವನ್ನು ಕೋರಿದ ಪತ್ರದಲ್ಲಿ, ತಾವು ಯಾವುದೇ ಮಧ್ಯಸ್ಥಿಕೆಗೆ ರಾಜಿ ಆಗಿಲ್ಲ. ಎಲ್ಲಾ ಮಾತುಕತೆ ಅಥವಾ ದಿಯಾ ಹಣವನ್ನು ತಿರಸ್ಕರಿಸೋದಾಗಿ ಅಬ್ದುಲ್ ಫತ್ತಾಹ್ ಮೆಹದಿ ಹೇಳಿಕೊಂಡಿದ್ದಾರೆ.
Image Credit : Asianet News
ನಿಮಿಷಾ ಪ್ರಿಯಾ ಮರಣದಂಡನೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಭಾರತ ಸರ್ಕಾರ ಮತ್ತು ಧಾರ್ಮಿಕ ಮುಖಂಡರು ನಿರಂತರವಾಗಿ ಪ್ರಯತ್ನಿಸಿದ್ದರು. ಇದೆಲ್ಲದರ ಪರಿಣಾಮ ದಿನಾಂಕ ಮುಂದೂಡಿಕೆ ಯಾಗಿತ್ತು ತಲಾಲ್ ಸೋದರ ಅಬ್ದುಲ್ ಫತ್ತಾಹ್ ಮೆಹದಿ ಮಾತ್ರ ತಮ್ಮ ಕಠಿಣ ನಿಲುವುಗಳಿಂದ ಹಿಂದೆ ಸರಿಯುತ್ತಿಲ್ಲ.
Image Credit : Asianet News
ಜುಲೈ 25, 2017 ರಂದು, ನಿಮಿಷಾ ಪ್ರಿಯಾ ಯೆಮನ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ಸ್ವಂತ ಕ್ಲಿನಿಕ್ ಪ್ರಾರಂಭಿಸಲು ಯೆಮೆನ್ ಪ್ರಜೆಯಾಗಿರುವ ತಲಾಲ್ ಅಬ್ದುಲ್ ಮೆಹದಿ ಸಹಾಯವನ್ನು ಪಡೆದುಕೊಂಡಿದ್ದರು. ನಂತರ ಇಬ್ಬರ ಮಧ್ಯೆ ಜಗಳ ಏರ್ಪಟ್ಟಿದ್ದರಿಂದ ತಲಾಲ್ ಅಬ್ದುಲ್ ಮೆಹದಿಯ ಉಸಿರನ್ನು ನಿಮಿಷಾ ಪ್ರಿಯಾ ನಿಲ್ಲಿಸಿದ್ದರು. ಅಂದಿನಿಂದ ನಿಮಿಷಾ ಪ್ರಿಯಾ ಯೆಮನ್ ಜೈಲಿನಲ್ಲಿದ್ದಾರೆ