Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಮಂಗಳೂರು: ಕಾರಿನಲ್ಲಿ ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

    Mangaluru: ದುಬೈಗೆ ತೆರಳಬೇಕಿದ್ದ ಏರ್​​ ಇಂಡಿಯಾ ವಿಮಾನದ ಹಾರಾಟ ರದ್ದು; ಅಷ್ಟಕ್ಕೂ ಆಗಿದ್ದೇನು?

    Mangaluru: ದುಬೈಗೆ ತೆರಳಬೇಕಿದ್ದ ಏರ್​​ ಇಂಡಿಯಾ ವಿಮಾನದ ಹಾರಾಟ ರದ್ದು; ಅಷ್ಟಕ್ಕೂ ಆಗಿದ್ದೇನು?

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ

ಮತಗಳ್ಳತನ ಆರೋಪ; ಮೋದಿಗೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ, ರಾಜೀನಾಮೆ ಕೊಡಬೇಕು; CM ಸಿದ್ದರಾಮಯ್ಯ

editor tv by editor tv
August 8, 2025
in ಸುದ್ದಿ
0
1.9k
VIEWS
Share on FacebookShare on TwitterShare on Whatsapp

ಸಂವಿಧಾನ ಜಾರಿ ಆದ ಮೇಲೆ ಯಾರೇ ಆಗಿರಲಿ, ಒಬ್ಬ ವ್ಯಕ್ತಿಗೆ ಒಂದೇ ವೋಟ್​. ಚುನಾವಣಾ ಆಯೋಗ ಸಂವಿಧಾನದ ರೀತಿಯಲ್ಲಿ ನಡೆದುಕೊಳ್ಳಬೇಕು. ನ್ಯಾಯ ಸಮ್ಮತವಾದಂತಹ ಚುನಾವಣೆಗಳನ್ನು ಮಾಡಿ,

08 Aug 2025 14:06 I

CM_SIDDARAMAIAH_CONG

ಬೆಂಗಳೂರು: ಲೋಕಸಭೆ ಎಲೆಕ್ಷನ್​ನಲ್ಲಿ ಬಿಜೆಪಿ, ಎನ್​ಡಿಎ ಬಹುಮತ ಗಳಿಸಿಲ್ಲ. 80 ಕ್ಷೇತ್ರಗಳಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮೋದಿಗೆ ಅಧಿಕಾರದಲ್ಲಿ ಇರಲು ನೈತಿಕತೆ ಇಲ್ಲ. ಕೂಡಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಮತಗಳ್ಳತನ ಸಮರ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ನಾವು ನಮ್ಮ ಸಮಾಜಕ್ಕೆ ಬೇಕಾದಂತಹ ಸಂವಿಧಾನವನ್ನು ರಚನೆ ಮಾಡಿಕೊಂಡಿದ್ದೇವೆ. ಸಂವಿಧಾನ ಜಾರಿ ಆದ ಮೇಲೆ ಯಾರೇ ಆಗಿರಲಿ, ಒಬ್ಬ ವ್ಯಕ್ತಿಗೆ ಒಂದೇ ವೋಟ್​. ಚುನಾವಣಾ ಆಯೋಗ ಸಂವಿಧಾನದ ರೀತಿಯಲ್ಲಿ ನಡೆದುಕೊಳ್ಳಬೇಕು. ನ್ಯಾಯ ಸಮ್ಮತವಾದಂತಹ ಚುನಾವಣೆಗಳನ್ನು ಮಾಡಿ, ಯಾರು ಬಹುಮತ ಗಳಿಸುತ್ತಾರೋ ಅವರಿಗೆ ಅಧಿಕಾರ ಸಿಗುವುದು ಪ್ರಜಾಪ್ರಭುತ್ವವದ ಮೂಲ ತತ್ವ ಆಗಿದೆ. ಮತದಾನವನ್ನು ಸಂವಿಧಾನ ಕೊಟ್ಟಿರುವುದು. ಇದು ಮೂಲಭೂತವಾದ ಹಕ್ಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

CM_SIDDARAMAIAH

ನಾವು ಬಹಳ ಎಚ್ಚರಿಕೆಯಿಂದ ಚುನಾವಣೆಗಳನ್ನು ಮಾಡಬೇಕು. ಈ ಮನುವಾದಿಗಳು ಬಿಜೆಪಿಯವರಿಗೆ ನಮ್ಮ ಸಂವಿಧಾನದ ಮೇಲೆ ಗೌರವವಾಗಲಿ, ಅದರಂತೆ ನಡೆದುಕೊಳ್ಳುವುದಾಗಲಿ ಇಲ್ಲ. ಮತಹಕ್ಕು ಅನ್ನು ಯಾರು ಕಸಿದುಕೊಳ್ಳುವುದಕ್ಕೆ ಆಗಲ್ಲ. ಆದರೆ ಮನುವಾದಿಗಳು ಈ ವೋಟಿಂಗ್ ಪ್ಯಾಟ್ರನ್ ಅನ್ನು, ಮೂಲಭೂತ ಹಕ್ಕು ಅನ್ನು (ಮತದಾನ ಮಾದರಿ) ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಗೆ ಯಾವಾಗಲೂ ಬಹುಮತ ಸಿಕ್ಕಿಲ್ಲ

ಬೆಂಗಳೂರಿನ ಸೆಂಟ್ರಲ್ ಕ್ಷೇತ್ರವಾದ ಮಹದೇವಪುರ ಕ್ಷೇತ್ರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಈ ಮಾಹಿತಿ ಹೇಳಲಾಗಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದೇವು. ಆದರೆ ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷ ಮತಗಳಿಂದ ಕಡಿಮೆ ಆಗುತ್ತೇವೆ. ಅವರು ಹೆಚ್ಚು ಗಳಿಸುತ್ತಾರೆ. ಇಡೀ ದೇಶದಲ್ಲಿ ಹೀಗೆ ಮಾಡಿದ್ದಾರೆ. ಕರ್ನಾಟಕವನ್ನ ಉದಾಹರಣೆ ತೆಗೆದುಕೊಂಡರೇ ಬಿಜೆಪಿ ಯಾವಗಲೂ ಬಹುಮತ ಪಡೆಯಲು ಆಗಿಲ್ಲ. ಬಿಜೆಪಿ ಹಿಂಬಾಗಿಲಿನಿಂದ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ್ರು. ಲೋಕಸಭೆಯಲ್ಲಿ ಮತ ಕದಿಯಲು ಪ್ರಯತ್ನ ಮಾಡಿದರು ಎಂದು ಹೇಳಿದ್ದಾರೆ.

ನಮಗೆ ಇಂಟ್ರನಲ್ ಸರ್ವೇ ಪ್ರಕಾರ 2024ರಲ್ಲಿ 16 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಬರೀ 9 ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಯಿತು. ಇದಕ್ಕೆ ಕಾರಣ 7 ಸ್ಥಾನಗಳಲ್ಲಿ ಮತಗಳನ್ನು ಕದ್ದಿದ್ದಾರೆ. ದೇಶದಲ್ಲಿ ಮೋದಿ ಪ್ರಧಾನಿ ಆದ ಮೇಲೆ, ಇವಿಎಂಗಳನ್ನು ಜಾರಿಗೆ ತಂದ ಮೇಲೆ, ಅದನ್ನು ದುರುಪಯೋಗ ಮಾಡಿದರು. ಮತಕಳ್ಳತನ ಮಾಡತಕ್ಕಂತದ್ದು, ಆಪರೇಷನ್ ಕಮಲ ಮಾಡತಕ್ಕಂತದ್ದು. ಇದು ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಿಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ. 

80 ಕ್ಷೇತ್ರಗಳಲ್ಲಿ ಈ ರೀತಿ ಮೋಸ ಆಗಿದೆ

ಕಳೆದ ಲೋಕಸಭೆ ಎಲೆಕ್ಷನ್​ನಲ್ಲಿ ನರೇಂದ್ರ ಮೋದಿ ಅವರು ಬಹುಮತ ಗಳಿಸಿಲ್ಲ. ಎನ್​ಡಿಎ ಕೂಡ ಬಹುಮತ ಗಳಿಸಿಲ್ಲ. 80 ಕ್ಷೇತ್ರಗಳಲ್ಲಿ ಈ ರೀತಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮೋದಿ ಅವರಿಗೆ ಅಧಿಕಾರದಲ್ಲಿ ಇರಲು ನೈತಿಕತೆ ಇಲ್ಲ. ಮೋದಿ ಅವರು ಕೂಡಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮತ್ತೆ ಚುನಾವಣೆಯನ್ನು ಎದುರಿಸಿ ಯಾವುದೇ ಮೋಸ, ತಂತ್ರಗಾರಿಕೆ ಮಾಡದೇ ಗೆದ್ದು ಬಂದರೆ ಅವರಿಗೆ ಅಧಿಕಾರದಲ್ಲಿ ಇರಲು ಸಾಧ್ಯ ಆಗುತ್ತದೆ ಎಂದಿದ್ದಾರೆ. 

ಚುನಾವಣಾ ಆಯೋಗ ಇದೆಯಲ್ಲ ಅದು ಬಿಜೆಪಿಯ ಬ್ರ್ಯಾಂಚ್ ಆಫೀಸ್ ಆಗಿದೆ. ಅಲ್ಲಿ ಇರುವವರು ಎಲ್ಲ ಬಿಜೆಪಿ ಏನು ಹೇಳುತ್ತದೆಯೋ ಅದನ್ನೇ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ, ರಾಜ್ಯದ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಬಿಜೆಪಿಯವರು ಹಿಂದುಳಿದವರಿಗೆ, ಅಲ್ಪಸಂಖ್ಯಾಂತರಿಗೆ, ದಲಿತರಿಗೆ ಹೆದರಿಸಿ, ಬೆದರಿಸಿ ಅವರ ನಾಯಕತ್ವ ನಾಶ ಮಾಡಿ ಇವತ್ತು ಅಧಿಕಾರದಲ್ಲಿ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Previous Post

ʼಡೆತ್‌ನೋಟ್‌ʼ ನೋಡಿ ಡೆತ್‌ನೋಟ್‌ ಬರೆದು 14ರ ಬಾಲಕ ಆತ್ಮಹತ್ಯೆ!

Next Post

ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್: ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!

Next Post
ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್: ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!

ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್: ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.