Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಬೆಂಗಳೂರು ಸೂಪರ್ ಕಾಪ್ಸ್: ಅಡಿಕೆ ವ್ಯಾಪಾರಿಯ ₹1 ಕೋಟಿ ದರೋಡೆ ಮಾಡಿದ ಗ್ಯಾಂಗ್ 15 ನಿಮಿಷದಲ್ಲೇ ಅರೆಸ್ಟ್!

    ಮಂಗಳೂರು: ಕಾರಿನಲ್ಲಿ ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ಉಡುಪಿ | A.K.M.S ಬಸ್ ಮಾಲಕ ಸೈಪುದ್ದೀನ್ ಬರ್ಬರ ಹತ್ಯೆ

    ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ

    ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ಕಲಬುರಗಿಯಲ್ಲಿ ಸಾರಾಯಿ ಚಟ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವನೆಯಿಂದ ನಾಲ್ವರು ಬಲಿ

editor tv by editor tv
August 7, 2025
in ರಾಜ್ಯ
0
ಕಲಬುರಗಿಯಲ್ಲಿ ಸಾರಾಯಿ ಚಟ ಬಿಡಿಸಲು ಕೊಟ್ಟ ನಾಟಿ ಔಷಧಿ ಸೇವನೆಯಿಂದ ನಾಲ್ವರು ಬಲಿ
1.9k
VIEWS
Share on FacebookShare on TwitterShare on Whatsapp

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಸಾರಾಯಿ ಕುಡಿತದ ಚಟ ಬಿಡಿಸಲು ಜನರಿಗೆ ನಾಟಿ ಔಷಧಿ ನೀಡಲಾಗಿದೆ. ಈ ನಾಟಿ ಔಷಧಿ ಸೇವನೆ ಮಾಡಿದ ನಾಲ್ವರು ಸಾವನ್ನಪ್ಪಿದ್ದಾರೆ. ನಾಟಿ ಔಷಧಿ ನೀಡಿ ನಾಲ್ವರ ಸಾವಿಗೆ ಕಾರಣನಾದ ಆರೋಪಿಯನ್ನು ಸೇಡಂ ಪೊಲೀಸರು ಬಂಧಿಸಿದ್ದಾರೆ

07 Aug 2025 16:30 I

KALBURAGI NATI MEDICINES DEATHS

ನಾಟಿ ಔಷಧಿ ಸೇವಿಸಿ ಮೃತಪಟ್ಟ ಗಣೇಶ್, 

  • ಕಲ್ಬುರ್ಗಿ ಜಿಲ್ಲೆಯಲ್ಲಿ ಸಾರಾಯಿ ಚಟ ಬಿಡಿಸಲು ಕೊಟ್ಟ ನಾಟಿ ಔಷಧಿಯೇ ವಿಷವಾಯ್ತು
  • ನಾಟಿ ಔಷಧಿ ಸೇವಿಸಿ ಪ್ರಾಣ ಬಿಟ್ಟ ನಾಲ್ವರು
  • ಆರೋಪಿ ಫಕ್ಕೀರಪ್ಪನನ್ನು ಬಂಧಿಸಿದ ಸೇಡಂ ಪೊಲೀಸರು

ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದರು ಸಹ ಇಂದಿಗೂ ನಮ್ಮ ಜನ ಗ್ರಾಮೀಣ ಪ್ರದೇಶಗಳಲ್ಲಿನ ನಾಟಿ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಇಲ್ಲಿಯೂ ಕೂಡ ಆಗಿದ್ದು ಅದೇ. ನಿತ್ಯವೂ ಕುಡಿದು ಬಂದು ರಂಪಾಟ ಮಾಡ್ತಿದ್ದವರಿಗೆ ಕುಡಿತದ ಚಟ ಬಿಡಿಸಲು ಕುಟುಂಬಸ್ಥರು ಗ್ರಾಮವೊಂದಕ್ಕೆ ಕರೆದೊಯ್ದು ನಾಟಿ ಔಷಧಿ ಕುಡಿಸಿದ್ದಾರೆ. ಇಷ್ಟೇ ನೋಡಿ, ನಾಟಿ ಔಷಧಿ ಕುಡಿದಂತಹ ಐವರ ಪೈಕಿ,  ನಾಲ್ವರು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ.  ನಾಲ್ವರ ಸಾವಿಗೆ ಕಾರಣವಾದ ನಾಟಿ ಔಷಧಿ ನೀಡಿದ್ದ ವ್ಯಕ್ತಿಯನ್ನ ಖಾಕಿ ಪಡೆ ಬಂಧಿಸಿದೆ.

ಕಲಬುರಗಿಯಲ್ಲಿ ನಾಟಿ ಔಷಧಿಗೆ ನಾಲ್ವರು ಬಲಿ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮದಾಪುರ ಗ್ರಾಮದಲ್ಲಿ ಸಾರಾಯಿ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ಸೇವಿಸಿ ನಾಲ್ವರು ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ‌. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮದಾಪುರ ಗ್ರಾಮದಲ್ಲಿ ಘೋರ ದುರಂತ ನಡೆದಿದೆ‌. ಇಮದಾಪುರ ಗ್ರಾಮದಲ್ಲಿ ಫಕೀರಪ್ಪ ಮುತ್ಯಾ ಕಳೆದ ಐದು ವರ್ಷಗಳಿಂದ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ನೀಡುತ್ತಿದ್ದನು. ಅದರಂತೆ ಕಳೆದ ಭಾನುವಾರ ಕೆಲವರು ನಾಟಿ ಔಷಧಿ ಪಡೆಯಲು ಬಂದಿದ್ದಾರೆ.

ಈ ವೇಳೆ ಗಿಡಮೂಲಿಕೆಗಳ ರಸ ಮೂಗಿನಲ್ಲಿ ಹಾಕಿದ್ದಾರೆ. ಬಳಿಕ ಬುಧವಾರ ಬರೋದಕ್ಕೆ  ಹೇಳಿದ್ದಾರೆ. ಅದರಂತೆ ನಿನ್ನೆ ಬುಧವಾರ ಗಿಡಮೂಲಿಕೆಗಳ ಔಷಧಿಯನ್ನ ಮಡಿಕೆಯಲ್ಲಿ ಮೊಸರಿನಲ್ಲಿ ಮಿಶ್ರಣ ಮಾಡಿ ಕುಡಿಯೋಕೆ ಹೇಳಿದ್ದಾರೆ. ಅದರಂತೆ ನಾಟಿ ಔಷಧಿ ಕುಡಿದ ಶಹಾಬಾದ್‌ ಪಟ್ಟಣದ ಗಣೇಶ ರಾಠೋಡ್ (21) ನರಳಿ ನರಳಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಭುರಪಲ್ಲಿ ಗ್ರಾಮದ ಲಕ್ಷ್ಮೀ, ಮದಕಲ್ ಗ್ರಾಮದ ನಾಗೇಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ‌. ಇನ್ನೂ ಭೀಮನಳ್ಳಿ ಗ್ರಾಮದ ಮನೋಹರ್ ಚೌವ್ಹಾಣ್ ತಡರಾತ್ರಿ ಮನೆಯಲ್ಲಿ ಮೃತಪಟ್ಟಿದ್ದಾನೆ‌. ನಿಂಗೇಶ್ ಎಂಬಾತ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

KALBURAGI NATI MEDICINES DEATH ACCUSED PAKKIRAPPA

ಆರೋಪಿ ಫಕ್ಕೀರಪ್ಪ

ಗಿಡಮೂಲಿಕೆಯ ನಾಟಿ ಔಷಧಿ ಕೊಡುವ ಫಕೀರಪ್ಪ ಈ ವಿದ್ಯೆ ಕಲಿತಿದ್ದು ತನ್ನ ಅಜ್ಜ ಸಾಯಪ್ಲ ಅವರಿಂದ. ಅವರ ಸಾವಿನ ನಂತ್ರ ನಾಟಿ ಔಷಧಿ ಕೊಡುವ ಕೆಲಸ ಫಕೀರಪ್ಪ ಶುರುಮಾಡಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಹನುಮಾನ್ ದೇವಸ್ಥಾನದ ಆವರಣದಲ್ಲಿ ಕಳೆದ ಐದು  ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದನು. ಫಸ್ಟ್ ಟೈಂ ಬಂದವರು 200 ರೂಪಾಯಿ ಕೊಟ್ಟು ಟೋಕನ್ ತೆಗೆದುಕೊಳ್ಳಬೇಕಂತೆ‌. ಸಾರಾಯಿ ಚಟ ಬಿಡಿಸುವ ಔಷಧಿ ಹಾಕಲು 2000/- ರೂಪಾಯಿ ಶುಲ್ಕ ಇದೆಯಂತೆ‌. ಸದ್ಯ ಔಷಧಿ ಸೇವಿಸಿದ ಬಳಿಕ ನಾಲ್ವರು ನೆಲಕ್ಕೆ ಬಿದ್ದು ನರಳಾಡುತ್ತಿದ್ದ ವೇಳೆ ಗಣೇಶ ರಾಠೋಡ್ ಗ್ರಾಮದಲ್ಲೇ  ಸಾವನ್ನಪ್ಪಿದ್ದಾನೆ.  ಉಳಿದವರನ್ನ ಆಸ್ಪತ್ರೆಗೆ ದಾಖಲಿಸಿದರೂ,  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಫಕೀರಪ್ಪ ಮುತ್ಯಾ ತಲೆಮರೆಸಿಕೊಂಡಿದ್ದ. ತೆಲಂಗಾಣದ ಗ್ರಾಮವೊಂದರಲ್ಲಿ ತನ್ನ ಸಹೋದರಿ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಫಕೀರಪ್ಪನನ್ನ ತಡರಾತ್ರಿ ಸೇಡಂ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಾಟಿ ಔಷಧಿ ನೀಡಿದ ಫಕೀರಪ್ಪ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕುತ್ತ, ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ‌. ನಾಟಿ ಔಷಧಿ ನೀಡಿ ನಾಲ್ವರ ಸಾವಿಗೆ ಕಾರಣವಾದ ಫಕಿರಪ್ಪನನ್ನ ಸೇಡಂ ಠಾಣೆ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದೇನೇ ಇದ್ದರೂ ಕುಡಿತದ ಚಟ ಬಿಡಿಸುವ ನಾಟಿ ಔಷಧಿ ಕುಡಿದು ನಾಲ್ವರು ಜೀವವನ್ನೇ ಬಿಟ್ಟಿದ್ದು ಘೋರ ದುರಂತವೇ ಸರಿ‌‌.

Previous Post

ಕಾರು ಚಾಲಕ ಬಾಬು ಆತ್ಮಹತ್ಯೆ: ಸಂಸದ ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

Next Post

ಧರ್ಮಸ್ಥಳದಲ್ಲಿ ಯೂಟ್ಯೂಬರ್ ಮೇಲೆ ಹಲ್ಲೆ ಪ್ರಕರಣ, ಓರ್ವ ಆರೋಪಿ ಬಂಧನ

Next Post
ಧರ್ಮಸ್ಥಳದಲ್ಲಿ 15 ವರ್ಷದ ಬಾಲಕಿಯ ಶವ ಹೂತಿಟ್ಟ ಆರೋಪ: ಎಸ್ಐಟಿಗೆ ಬಂತು ಮತ್ತೊಂದು ದೂರು!

ಧರ್ಮಸ್ಥಳದಲ್ಲಿ ಯೂಟ್ಯೂಬರ್ ಮೇಲೆ ಹಲ್ಲೆ ಪ್ರಕರಣ, ಓರ್ವ ಆರೋಪಿ ಬಂಧನ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.