Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಕ್ರಿಕೆಟ್‌ನಿಂದ ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ, ಕ್ರಿಕೆಟ್ ಗೆದ್ರೆ ಯುದ್ಧವೇ ಗೆದ್ದಂತಾಯ್ತಾ? – ಬಿ.ಕೆ ಹರಿಪ್ರಸಾದ್‌ ಪ್ರಶ್ನೆ

    ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ, ಬಿಜೆಪಿಗರದ್ದು ಇದೇ ಮನಸ್ಥಿತಿ: ಸಿಎಂ ಸಿದ್ದರಾಮಯ್ಯ

    ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ

    ಸಹಾಯ ಕೇಳಿ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ನಗ್ನ ಫೋಟೊ ಮುಂದಿಟ್ಟು ಬ್ಲಾಕ್ಮೇಲ್, ಹಿಂದೂ ಜಾಗರಣ ವೇದಿಕೆ‌ಯ ಮುಖಂಡ ಸಮಿತ್ ರಾಜ್ ವಿರುದ್ಧ ಪ್ರಕರಣ ದಾಖಲು

    ಬೆಂಗಳೂರು ಸೂಪರ್ ಕಾಪ್ಸ್: ಅಡಿಕೆ ವ್ಯಾಪಾರಿಯ ₹1 ಕೋಟಿ ದರೋಡೆ ಮಾಡಿದ ಗ್ಯಾಂಗ್ 15 ನಿಮಿಷದಲ್ಲೇ ಅರೆಸ್ಟ್!

    ಮಂಗಳೂರು: ಕಾರಿನಲ್ಲಿ ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ತಲೆಮರೆಸಿಕೊಂಡಿದ್ದ ಸ್ವಾಮಿ ಚೈತನ್ಯಾನಂದ ಅರೆಸ್ಟ್‌

    ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದ್ದ ಪ್ರಕರಣ: ಕೊನೆಗೂ ಬಯಲಾಯ್ತು ರಹಸ್ಯ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ಧರ್ಮಸ್ಥಳ ಶೋಧಕಾರ್ಯ ವೇಳೆ ಗೊಂದಲ: ಎಸಿ ಸ್ಟೆಲ್ಲಾ ವರ್ಗೀಸ್ ನಡೆಗೆ ಎಸ್ಐಟಿ ಅಸಮಾಧಾನ

editor tv by editor tv
August 5, 2025
in ರಾಜ್ಯ
0
ಧರ್ಮಸ್ಥಳ ಶೋಧಕಾರ್ಯ ವೇಳೆ ಗೊಂದಲ: ಎಸಿ ಸ್ಟೆಲ್ಲಾ ವರ್ಗೀಸ್ ನಡೆಗೆ ಎಸ್ಐಟಿ ಅಸಮಾಧಾನ
1.9k
VIEWS
Share on FacebookShare on TwitterShare on Whatsapp

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಶೋಧ ಕಾರ್ಯ ಹೊಸ ತಿರುವು ಪಡೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಮಹಜರು ನಡೆಸಿದ ಎಸಿ ಸ್ಟೆಲ್ಲಾ ವರ್ಗೀಸ್ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ.

ಬೆಳ್ತಂಗಡಿ: ಬಹುಚರ್ಚಿತ ಧರ್ಮಸ್ಥಳ ಶವಗಳನ್ನು ಹೂತಿಟ್ಟ ಶೋಧಕಾರ್ಯ ಪ್ರಕರಣದಲ್ಲಿ ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ) ನಡುವಿನ ಗೊಂದಲ ಮತ್ತೊಮ್ಮೆ ಬೆಳಕಿಗೆ ಬಂದಿದೆ. ನಿನ್ನೆ ಶೋಧಕಾರ್ಯಕ್ಕಾಗಿ ನಿಗದಿಪಡಿಸಿದ 11ನೇ ಪಾಯಿಂಟ್ ಬಿಟ್ಟು, ಪುತ್ತೂರು ಉಪ ವಿಭಾಗ ಎಸಿ ಸ್ಟೆಲ್ಲಾ ವರ್ಗೀಸ್ ಹೊಸ ಸ್ಥಳದಲ್ಲಿ ಮಹಜರು ನಡೆಸಲು ಸೂಚಿಸಿದ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹೊಸ ಸ್ಥಳದಲ್ಲಿ ಭೂಮಿಯ ಮೇಲ್ಮೈಯಲ್ಲೇ ಒಬ್ಬ ಪುರುಷನ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಫಾರೆನ್ಸಿಕ್ ತಂಡದ ಪ್ರಾಥಮಿಕ ಅಂದಾಜಿನ ಪ್ರಕಾರ, ಮೃತ ವ್ಯಕ್ತಿ ಒಂದೂವರೆ ವರ್ಷಗಳ ಹಿಂದೆ ಸಾವನ್ನಪ್ಪಿರಬಹುದಾಗಿದೆ. ಅಸ್ಥಿಪಂಜರದ ಜೊತೆಗೆ ಪುರುಷನ ಉಡುಪು ಮತ್ತು ಹಗ್ಗ ಪತ್ತೆಯಾಗಿದ್ದು, ಆತ್ಮ1ಹತ್ಯೆಯ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಎಸ್ಐಟಿ, ಇದು ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ‘ಅನಾಮಿಕ ಸಾವು’ (UDR) ಪ್ರಕರಣವಾಗಿದ್ದು,  ಕಾರ್ಯಾಚರಣೆ ನಿಯಮಗಳಡಿ ಬರುವುದಿಲ್ಲ ಎಂಬ ವಾದಿಸಿದೆ. ಭೂಮಿಯ ಮೇಲ್ಭಾಗದಲ್ಲೇ ಪತ್ತೆಯಾದ ಈ ಅಸ್ಥಿಪಂಜರವನ್ನೂ ಸ್ಥಳೀಯ ಪೊಲೀಸ್ ಠಾಣೆಯೇ ಕಾನೂನಿನ ಪ್ರಕಾರ ನಿರ್ವಹಿಸಬೇಕಾಗಿತ್ತು. ಮೃತನ ಗುರುತು ಹಾಗೂ ಸಾವಿನ ಕಾರಣ ಪತ್ತೆಹಚ್ಚಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಜವಾಬ್ದಾರಿ ಧರ್ಮಸ್ಥಳ ಪೊಲೀಸ್ ಠಾಣೆಯದ್ದಾಗಿದೆ.

ಆದರೆ, ಅನಾಮಿಕ ದೂರುದಾರ ಈ ಸ್ಥಳವನ್ನು ತೋರಿಸಿದ್ದರಿಂದ, ಎಸಿ ಸ್ಟೆಲ್ಲಾ ವರ್ಗೀಸ್ ಅವರ ಸೂಚನೆಯ ಮೇರೆಗೆ ಮಹಜರು ನಡೆಸಲಾಯಿತು. ಈ ಕ್ರಮದ ವೇಳೆ ಎಸ್ಐಟಿ ಮತ್ತು ಎಸಿ ಸ್ಟೆಲ್ಲಾ ವರ್ಗೀಸ್ ನಡುವಿನ ಗೊಂದಲ ಕೆಲವು ಕಾಲ ಮುಂದುವರೆಯಿತು. ಅಂತಿಮವಾಗಿ ಎಸಿ ಸ್ಟೆಲ್ಲಾ ವರ್ಗೀಸ್ ಸೂಚನೆಯಂತೆ ಅಸ್ಥಿಪಂಜರವನ್ನು ವಶಕ್ಕೆ ಪಡೆದು ಅಗತ್ಯ ದಾಖಲೆ ಪ್ರಕ್ರಿಯೆಗಳು ಪೂರ್ಣಗೊಳಿಸಲಾಯಿತು.

ಅನಾಮಿಕ ದೂರುದಾರನ ಪ್ರಕಾರ, 1998 ರಿಂದ 2014 ರವರೆಗೆ ಧರ್ಮಸ್ಥಳದ ಕಾಡಿನಲ್ಲಿ ಹೂತಿಟ್ಟ ಶವಗಳ ಶೋಧಕಾರ್ಯ ಕಾರ್ಯ ನಡೆಯುತ್ತಿದೆ. ಆದರೆ, ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಈ ಪುರುಷನ ದೇಹವೂ ಎಸ್ಐಟಿ ವಶಕ್ಕೆ ಬಂದಿದ್ದು, ಅದರೊಂದಿಗೆ ಕೆಲ ಕೊಳೆತ ದೇಹ ಭಾಗಗಳೂ ಪತ್ತೆಯಾಗಿವೆ. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಧರ್ಮಸ್ಥಳ ಪೊಲೀಸರು ಹಾಗೂ ಎಸ್ಐಟಿ ಮುಂದಿನ ಹಂತದ ತನಿಖೆಯನ್ನು ಮುಂದುವರೆಸಲಿದ್ದಾರೆ.

ಕೆಂಪು ಬಣ್ಣದ ಸೀರೆ ಪತ್ತೆ

ಇನ್ನು ಧರ್ಮಸ್ಥಳದಲ್ಲಿ ಆಗಸ್ಟ್ 4 ರಂದು ನಡೆದ ಆರನೇ ದಿನದ ಶೋಧಕಾರ್ಯ ಕಾರ್ಯಾಚರಣೆಯು ಹಲವಾರು ರಹಸ್ಯ ಪತ್ತೆಗಳೊಂದಿಗೆ ಚರ್ಚೆಗೆ ಕಾರಣವಾಯಿತು. ಆತ್ಮ1ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಕೆಂಪು ಬಣ್ಣದ ಸೀರೆ ಒಂದು ಮರದಲ್ಲಿ ಪತ್ತೆಯಾಗಿದೆ.ಇದಲ್ಲದೆ, ಮಣ್ಣಿನೊಳಗೆ ಹೂತು ಹಾಕಲಾಗಿದ್ದ ಗಂಡಸಿನ ಬಟ್ಟೆಗಳು ತುಂಡು-ತುಂಡಾಗಿ ಪತ್ತೆಯಾಗಿವೆ.

ಬುರುಡೆ ಹಾಗೂ ಸಂಪೂರ್ಣ ಬೆನ್ನು ಮೂಳೆ ಪತ್ತೆಯಾಗಿದೆ. ಸ್ಥಳದಿಂದ ಒಟ್ಟು 140 ಕ್ಕೂ ಹೆಚ್ಚು ಕಳೇಬರದ ಅವಶೇಷಗಳನ್ನು ಬಿಡಿಬಿಡಿಯಾಗಿ ಸಂಗ್ರಹಿಸಲಾಗಿದೆ. ಪತ್ತೆಯಾದ ಎಲ್ಲಾ ಮೂಳೆ ಭಾಗಗಳಿಗೆ ಉಪ್ಪು ಹಾಕಿ ಶೇಖರಣೆ ಮಾಡಲಾಗಿದ್ದು, ನಂತರ ಅವನ್ನು ಮಣಿಪಾಲ ಕೆಎಂಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.

ನಿನ್ನೆ ಪತ್ತೆಯಾದ ಸ್ಥಳವನ್ನು ಪಾಯಿಂಟ್ ನಂ. 14 ಎಂದು ಗುರುತಿಸಲಾಗಿದೆ. ಇಂದಿನ ಕಾರ್ಯಾಚರಣೆಗೆ ಎಸ್ಐಟಿ ಪಾಯಿಂಟ್ ನಂ. 11 ರಿಂದ ಪ್ರಾರಂಭಿಸಲು ಯೋಜನೆ ಹಾಕಿಕೊಂಡಿದ್ದರೂ, ಕೊನೆಯ ಕ್ಷಣದಲ್ಲಿ ಸ್ಥಳ ಬದಲಾವಣೆ ನಡೆಯಬಹುದೇ ಎಂಬ ಕುತೂಹಲ ಸೃಷ್ಠಿಯಾಗಿದೆ. ಶೋಧಕಾರ್ಯ ಕಾರ್ಯಾಚರಣೆಯ ಪ್ರತಿದಿನವೂ ಹೊಸ ಬೆಳವಣಿಗೆಗಳು ಹೊರಬರುತ್ತಿರುವುದರಿಂದ, ಮುಂದಿನ ಹಂತದಲ್ಲಿ ಇನ್ನೂ ಎಷ್ಟು ಪ್ರಮುಖ ಪತ್ತೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

Previous Post

ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ಪ್ರಕಟಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ,:ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಕಿಡಿ

Next Post

ಬೆಂಗಳೂರಿನಿಂದ ಮಂಗಳೂರಿಗೆ.. ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ..!

Next Post

ಬೆಂಗಳೂರಿನಿಂದ ಮಂಗಳೂರಿಗೆ.. ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ..!

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.