ಧರ್ಮಸ್ಥಳ ನೇತ್ರಾವತಿ ನದಿ ತಟದ ಈ ಕ್ಷೇತ್ರದಲ್ಲಿ ಆಘಾತಕಾರಿ ಸುದ್ದಿಗಳಿಂದ ಸದ್ದಾಗ್ತಿದೆ. ಮಾಜಿ ಸ್ವಚ್ಛತಾ ಕಾರ್ಮಿಕನೊಬ್ಬ ನೂರಾರು ಮೃತದೇಹಗಳನ್ನ ಹೂತಿರುವ ಬುರುಡೆ ರಹಸ್ಯ ಬಿಚ್ಚಿಟ್ಟ ಬಳಿಕ ಈಗ 13 ಪಾಯಿಂಟ್ಗಳಲ್ಲಿ ಕಾರ್ಯಾಚರಣೆ ನಡೆಸಲಾಗ್ತಿದೆ. ಭೂಮಿ ಅಗೆದು ಬುರುಡೆ ರಹಸ್ಯವನ್ನ ಭೇದಿಸುವ ಕಾರ್ಯ ನಡೀತಿದೆ..
04 Aug 2025
/newsfirstlive-kannada/media/media_files/2025/08/02/dharmasthala-case21-2025-08-02-08-27-04.jpg)
- ಇಂದು ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಮಹಜರು
- 11, 12, 13ರ ಪಾಯಿಂಟ್ನಲ್ಲಿ ತಲಾಷ್ ಪ್ರಕ್ರಿಯೆ ನಡೆಯಲಿದೆ
- 11, 12, 13ರ ಪಾಯಿಂಟ್ನಲ್ಲಿ ಅಡಗಿದ್ಯಾ ಕಠೋರ ಸತ್ಯ..?
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದಿದ್ದ ಅನಾಮಧೇಯ ವ್ಯಕ್ತಿ ತೋರಿಸಿದ ಜಾಗದಲ್ಲಿ ತಲಾಷ್ ನಡೀತಿದೆ. ಈಗಾಗಲೇ 10 ಪಾಯಿಂಟ್ಗಳಲ್ಲಿ ಶೋಧ ಮುಗಿದಿದೆ. ನಿನ್ನೆ ಭಾನುವಾರ ಆಗಿದ್ದರಿಂದ ರಿಲ್ಯಾಕ್ಸ್ಗೆ ಜಾರಿದ್ದ ಎಸ್ಐಟಿ ತಂಡ, ಇವತ್ತು ಮತ್ತೆ ಮಹಜರು ಪ್ರಕ್ರಿಯೆ ಶುರು ಮಾಡಲಿದೆ. ಇನ್ನೂ 3 ಪಾಯಿಂಟ್ಗಳಲ್ಲಿ ಇವತ್ತು ಆಪರೇಷನ್ ನಡೆಸಲಿದ್ದು ಎಸ್ಐಟಿ ತಂಡ ಮುಂದೇನು ಮಾಡಲಿದೆ ಅನ್ನೋದು ಕುತೂಹಲ ಮೂಡಿಸಿದೆ
11, 12, 13ರ ಪಾಯಿಂಟ್ನಲ್ಲಿ ಅಡಗಿದ್ಯಾ ಬುರುಡೆ ರಹಸ್ಯ!
ಕಳೆದೆರಡು ವಾರದಿಂದ ಧರ್ಮಸ್ಥಳದ್ದೇ ಸುದ್ದಿ.. ಪಾಯಿಂಟ್ ಒಂದರಿಂದ ಹತ್ತರವರೆಗೆ ಸಸ್ಪೆನ್ಸ್ ಮೇಲೆ ಸಸ್ಪೆನ್ಸ್ ಕೊಟ್ಟ ನೇತ್ರಾವತಿ ನದಿ ತೀರ, ಅದೆಷ್ಟು ರಹಸ್ಯಗಳನ್ನ ಪೋಷಿಸ್ತಿದ್ಯೋ ಬಲ್ಲವಱರು? ಕಳೆದ ಜುಲೈ 29ನೇ ತಾರೀಖಿನಿಂದ ಶುರುವಾದ ಮಹಜರು ಪ್ರಕ್ರಿಯೆ ಕೊನೇ ಹಂತಕ್ಕೆ ಬಂದಂತಿದೆ.. ಈಗ 11, 12, 13ರ ಪಾಯಿಂಟ್ಗಳ ಹತ್ತಿರಕ್ಕೆ ಬಂದಿದ್ದು ಕ್ಲೈಮ್ಯಾಕ್ಸ್ ಹಂತ ತಲುಪಿದೆ.. ಇವತ್ತು 11 ಹಾಗೂ 12ರ ಪಾಯಿಂಟ್ಗಳನ್ನ ಮಹಜರು ಮಾಡುವ ಸಾಧ್ಯತೆ ಇದೆ.
/filters:format(webp)/newsfirstlive-kannada/media/media_files/2025/08/02/dharmasthala-case17-2025-08-02-08-27-04.jpg)
13 ಪಾಯಿಂಟ್ಗಳನ್ನ ಅನಾಮಧೇಯ ವ್ಯಕ್ತಿ ಮುಂದೆ ಬಂದು ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದು ಇಡೀ ರಾಜ್ಯವೇ ಕುತೂಹಲದಿಂದ ಕಣ್ಬಿಟ್ಟು ನೋಡ್ತಿದೆ.. ಮಾರ್ಕಿಂಗ್ನಲ್ಲಿ ಸಿಗುತ್ತೆ.. ಆ ಮಾರ್ಕಿಂಗ್ನಲ್ಲಿ ಅಸ್ಥಿಪಂಜರ ಸಿಗುತ್ತೆ ಅಂತಾನೇ ತೋರಿಸಿದ್ದ..
ಪಾಯಿಂಟ್ 1-10.. ಸಿಕ್ಕಿದ್ದೇನು?
- ಪಾಯಿಂಟ್ 1 : ಪ್ಯಾನ್ ಕಾರ್ಡ್, 1 ಡೆಬಿಟ್ ಕಾರ್ಡ್, ಕೆಂಪು ರವಿಕೆ
- ಪಾಯಿಂಟ್ 2, 3, 4, 5 : ಯಾವುದೇ ಅಸ್ಥಿಪಂಜರ, ವಸ್ತುಗಳು ಸಿಕ್ಕಿಲ್ಲ
- ಪಾಯಿಂಟ್ 6 : 12ಕ್ಕೂ ಹೆಚ್ಚಿನ ಅಸ್ತಿಪಂಜರದ ಅವಶೇಷಗಳು ಪತ್ತೆ
- ಪಾಯಿಂಟ್ 7 : ಕುತೂಹಲ ಹುಟ್ಟಿಸಿದ 5 ಅಡಿ ಆಳದಲ್ಲಿ ಖರ್ಚೀಫ್
- ಪಾಯಿಂಟ್ 8, 9, 10 : ಅಸ್ಥಿಪಂಜರ ಪತ್ತೆಯಾಗಿಲ್ಲ
ಹತ್ತು ಪಾಯಿಂಟ್ಗಳ ಮಹಜರು ಪ್ರಕ್ರಿಯೆ ಮುಗಿದಿದೆ. ಇನ್ನುಳಿದಂತೆ ಮೂರು ಪಾಯಿಂಟ್ಗಳ ನೆಲವನ್ನು ಅಗೆದು ಶೋಧಿಸಬೇಕಿದೆ. 13 ಪಾಯಿಂಟ್ಗಳೆಲ್ಲಾ ಮುಗಿದ ಮೇಲೆ ಎಸ್ಐಟಿ ಅಧಿಕಾರಿಗಳು, ದೂರುದಾರ ಗಂಭೀರವಾಗಿ ಆರೋಪ ಮಾಡಿದ್ದ ಕಲ್ಲೇರಿ ಗ್ರಾಮದ ನೆಲವನ್ನ ಅಗೆಯುತ್ತಾರಾ ಅನ್ನೋ ಕುತೂಹಲ ಶುರುವಾಗಿದೆ. ಬೆಳ್ತಂಗಡಿ ಪ್ರದೇಶದ ಕಲ್ಲೇರಿ ಗ್ರಾಮದಲ್ಲಿ ಶಾಲಾ ಬಾಲಕಿಯರ ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆ ಬಗ್ಗೆ ಇದೇ ಅನಾಮಿಕ ವ್ಯಕ್ತಿ ಪ್ರಸ್ತಾಪ ಮಾಡಿದ್ದ. ದೂರುದಾರ ಹೇಳಿದಂತೆ, 12 ರಿಂದ 15 ವರ್ಷಗಳ ಹದಿಹರೆಯದ ಹುಡುಗಿಯೊಬ್ಬಳು, ಸ್ಕೂಲ್ ಯೂನಿಫಾರ್ಮ್ ಧರಿಸಿದ್ದ ದೇಹ ನೋಡಿದ್ದೆ. ಆಕೆ ಅತ್ಯಾ*ಚಾರಕ್ಕೆ ಒಳಗಾಗಿದ್ದಳು ಅನ್ನೋ ಮಾಹಿತಿ ಕೊಟ್ಟಿದ್ದಾನೆ. ಹೀಗಾಗಿ 13 ಪಾಯಿಂಟ್ಗಳ ಮಹಜರು ಮುಗಿದ್ಮೇಲೆ ಕಲ್ಲೇರಿ ಗ್ರಾಮದ ನೆಲವನ್ನೂ ಅಗೆಯುತ್ತಾರಾ ಅನ್ನೋ ಪ್ರಶ್ನೆ ಶುರುವಾಗಿದೆ
/filters:format(webp)/newsfirstlive-kannada/media/media_files/2025/08/01/dharmasthala-case10-2025-08-01-16-03-49.jpg)
ಒಟ್ಟಾರೆ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಅಗೆಯುವ ಕಾರ್ಯಾಚರಣೆ ನಿನ್ನೆ ಭಾನುವಾರ ಆಗಿದ್ದರಿಂದ ಕೊಂಚ ಬ್ರೇಕ್ ಕೊಡಲಾಗಿತ್ತು. ನಿರಂತರ ಕಾರ್ಯಾಚರಣೆಯಿಂದ ಕಂದಾಯ ಇಲಾಖೆಯ ಅಧಿಕಾರಿಗಳು FSL ತಂಡ ಹಾಗೂ ವೈದ್ಯರು ಸುಸ್ತಾಗಿದ್ದರು. ಇಂದು ಮತ್ತೆ ಪಾಯಿಂಟ್ ನಂಬರ್ 11 ಮತ್ತು 12ರಲ್ಲಿ ಪರಿಶೋಧನೆ ನಡೆಯಲಿದೆ. ಅನಾಮಿಕನ ವಿಚಾರಣೆಯಲ್ಲಿ ಹೇಳಿದ್ದ ಸ್ಥಳಗಳಲ್ಲಿ ಹಿಟಾಚಿ ಹಾಗೂ ಸುಮಾರು 60 ರಿಂದ 70 ಮಂದಿ ಸಿಬ್ಬಂದಿ ಮಹಜರು ಪ್ರಕ್ರಿಯೆ ನಡೆಸಲಿದ್ದು ಏನಾದ್ರೂ ಸಿಗಬಹುದಾ ಎಂಬ ಕುತೂಹಲ ಗರಿಗೆದರಿದೆ