ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಶವಗಳನ್ನು ಹೂತು ಹಾಕಿರುವುದಾಗಿ ಹೇಳಲಾದ ಸ್ಥಳಗಳಲ್ಲಿ ಮಹಜರು ನಡೆಸಲಾಗಿದ್ದು, ಒಟ್ಟು 13 ಜಾಗಗಳನ್ನು ದೂರುದಾರ ತೋರಿಸಿದ್ದಾರೆ.
ಇಂದು ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಗೊಂಡಿದೆ. ದೂರುದಾರನನ್ನೂ ಎಸ್‌ಐಟಿ ಸ್ಥಳಕ್ಕೆ ಕರೆತಂದಿದೆ. ವಿಶೇಷ ತನಿಖಾ ತಂಡ ಸೋಮವಾರ ಸಂಜೆ 6 ಗಂಟೆ ತನಕ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮಹತ್ವದ ಮಹಜರು ಕಾರ್ಯ ನಡೆಸಿತು. ದೂರುದಾರ ಅನಾಮಿಕ ವ್ಯಕ್ತಿಯನ್ನು ಮುಸುಕುಧಾರಿಯಾಗಿ ಕರೆತಂದ ಎಸ್‌ಐಟಿ ತಂಡ ಬೆಳಗ್ಗಿನಿಂದ ಸಂಜೆಯವರೆಗೂ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದ ನಿಗೂಢ ಸ್ಥಳಗಳಿಗೆ ಕರೆದೊಯ್ದು ಮಹಜರು ಕಾರ್ಯ ನಡೆಸಿತು. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ 13 ಜಾಗಗಳನ್ನು ಎಸ್‌ಐಟಿ ಅಧಿಕಾರಿಗಳಿಗೆ ದೂರುದಾರ ತೋರಿಸಿದ್ದಾರೆ.
ಈ ಜಾಗಗಳಲ್ಲಿ ರಾತ್ರಿಯಿಡಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇದೀಗ ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಗೊಂಡಿದೆ.

ಸ್ನಾನಘಟ್ಟದ ಪಕ್ಕದಲ್ಲೇ ಮೊದಲ ಮಾರ್ಕ್
ದೂರುದಾರ ಗುರುತಿಸಿದ ಮೊದಲ ಸಮಾಧಿ ಸ್ಥಳ ನೇತ್ರಾವತಿ ಸ್ನಾನಘಟ್ಟ ಪಕ್ಕದಲ್ಲೇ ಇದೆ. ಮೊದಲ ಸಮಾಧಿ ಸ್ಥಳವನ್ನು ಅಗೆಯಲಾಗಿದೆ. ಭಾರಿ ಮಳೆ ನಡುವೆ ಸಮಾಧಿ ಸ್ಥಳ ಅಗೆಯಲಾಗಿದೆ. 4 ಅಡಿಗಿಂತ ಹೆಚ್ಚು ಸಮಾಧಿ ಸ್ಥಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಕೇಳಬೇರದ ಸುಳಿವು ಸಿಕಿಲ್ಲ. ಭಾರಿ ಮಳೆ ಕಾರಣ ಅಗೆದ ಜಾಗದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಸದ್ಯಕ್ಕೆ ಮೊದಲ ಸಮಾಧಿ ಸ್ಥಳ ಅಗೆತ ನಿಲ್ಲಿಸಲಾಗಿದೆ. ದೂರುದಾರ ಮತ್ತಷ್ಟು ಅಗೆಯಲು ಹೇಳಿದರೆ ಅಗೆಯಲಾಗುತ್ತದೆ. ಮಳೆ ಹಾಗೂ ನೀರಿನ ಒರತೆಯಿಂದ ಸಮಾಧಿ ಅಗೆದ ಸ್ಥಳದಲ್ಲಿ ನೀರು ತುಂಬಿಕೊಂಡಿದೆ.
ಉತ್ಖನನ ನಡೆಯುವ ಸ್ಥಳದಲ್ಲಿ ಡಿಐಜಿ ಅನುಚೇತ್
ಸಮಾಧಿ ಅಗೆಯುತ್ತಿರುವ ನೇತ್ರಾವತಿ ಸ್ನಾನಘಟ್ಟ ಸ್ಥಳಕ್ಕೆ ಡಿಐಜಿ ಅನುಚೇತ್ ಆಗಮಿಸಿದ್ದಾರೆ. ಎರಡು ಗಂಟೆಯಿಂದಲೂ ಹೆಚ್ಚು ಕಾಲ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸಮಾಧಿ ಅಗೆಯುವ ಕಾರ್ಯ ನಡೆಯುತ್ತಿದೆ. ಅನುಚೇತ್ ಈ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
