
ಟೈಟಾನಿಕ್ ಸಿನಿಮಾ ಮಾದರಿಯ ದುರಂತವೊಂದು ಇಂಡೋನೇಷಿಯಾದಲ್ಲಿ ನಡೆದಿದೆ. 280 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಹಗಡು ಬೆಂಕಿಗಾಹುತಿ ಆಗಿದೆ. ಇದರಿಂದ ಜೀವ ಉಳಿಸಿಕೊಳ್ಳಲು ಜನರು ಸಮುದ್ರಕ್ಕೆ ಹಾರಿದ್ದು, ಐವರು ಜೀವಬಿಟ್ಟಿದ್ದಾರೆ.

ಉತ್ತರ ಸುಲಾವೇಸಿಯಲ್ಲಿ 280 ಪ್ರಯಾಣಿಕರಿದ್ದ ಕೆಎಂ ಬಾರ್ಸಿಲೋನಾ 5 ಎಂಬ ಹಡಗು, ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬೆಂಕಿ ಕಾಣಿಸಿದ ಹಿನ್ನಲೆ ಹಡಗಿನ ಡೆಕ್‌ಗಳಲ್ಲಿ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡ್ತಿದ್ದಂತೆ ಡಕ್ನ ಮುಂಭಾಗದಲ್ಲಿ ಬೆಂಕಿಯು ಸ್ಫೋಟಗೊಂಡಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ.

ಹಡಗಿನಲ್ಲಿ ಬೆಂಕಿ ಕಾಣಿಸಿಕ್ತೊದ್ದಂತೆ ಭಯಭೀತರಾದ ಜನರು ಲೈಫ್ ಜಾಕೆಟ್ ಹಾಕಿಕೊಡು ಸಮುದ್ರಕ್ಕೆ ನಗೆಯುವ ಮೂಲಕ ಜೀವುಳಿಸಿಕೊಂಡಿದ್ದಾರೆ. 300 ಪ್ರಯಾಣಿಕರಿದ್ದ ಹಡಗಿನಲ್ಲಿ 150 ಜನರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ನಡೀತಿದೆ. ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಇನ್ನು, ಪುಟ್ಟು ಮಗುವನ್ನು ರಕ್ಷಣೆ ಮಾಡುವ ದೃಶ್ಯ ರೋಚಕವಾಗಿದೆ. ನೀರಿನ ಮಧ್ಯೆ ಮಹಿಳೆಯನ್ನ ಹಿಡಿದುಕೊಂಡು ಪುಟ್ಟ ಮಗು ಪರದಾಡ್ತಿದ್ದ ದೃಶ್ಯ ಮನ ಕಲಕುವಂತಿದೆ. ಇನ್ನೂ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 20 ಮಂದಿ ನಾಪತ್ತೆ ಆದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗಿದೆ.