ಗೆಳತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ನಾನು ಮನೆಗೆ ಮರಳಿದೆ.ಆದರೆ ನಾನು ಬೆಂಗಳೂರು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದೇನೆ. ಗೆಳತಿ ಆಗಲೇ ದುಬೈ ತಲುಪಿದ್ದಾಳೆ. ಬೆಂಗಳೂರು ಟ್ರಾಫಿಕ್ ಕುರಿತು ಮಾಡಿದ ಪೋಸ್ಟ್ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ.
ಬೆಂಗಳೂರು (ಜು.19) ಬೆಂಗಳೂರು ಟ್ರಾಫಿಕ್ ಕುರಿತು ಹಲವು ಮೀಮ್ಸ್, ಟ್ರೋಲ್ ಹರಿದಾಡುತ್ತಲೇ ಇರುತ್ತದೆ. ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಿದೆ. ಹಾಗಂತ ಬೆಂಗಳೂರು ಟ್ರಾಫಿಕ್‌ನಲ್ಲೇ ಮುಳುಗಿದ ನಗರವಲ್ಲ. ಕೆಲ ಸಂದರ್ಭ, ಕೆಲ ರಸ್ತೆಗಳಲ್ಲಿ ಟ್ರಾಫಿಕ್ ತುಸು ಹೆಚ್ಚಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಇಡೀ ಬೆಂಗಳೂರಿಗೆ ಮಸಿ ಬಳಿಯಲಾಗುತ್ತಿದೆಯಾ? ಇದೀಗ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಕುರಿತು ಮಾಡಿದ ಪೋಸ್ಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಗೆಳತಿಯನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಮರಳಿದ ವ್ಯಕ್ತಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಗೆಳತಿ ದುಬೈ ತಲುಪಿದರೆ ಈತ ಮಾತ್ರ ಇನ್ನು ಬೆಂಗಳೂರು ಟ್ರಾಫಿಕ್‌ನಲ್ಲೇ ಸಿಲುಕಿದ್ದೇನೆ ಅನ್ನೋ ಪೋಸ್ಟ್‌ಗೆ ಹಲವು ಬೆಂಗಳೂರಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
ಗೆಳತಿ ಬೆಂಗಳೂರಿನಿಂದ ದುಬೈಗೆ, ನಾನು ಇನ್ನೂ ಟ್ರಾಫಿಕ್‌ನಲ್ಲಿದ್ದೇನೆ
ಟ್ರಾವಲ್ ಆ್ಯಂಡ್ ಫುಡ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆಂಗಳೂರು ಟ್ರಾಫಿಕ್ ವಿಡಿಯೋ ಹಂಚಿಕೊಂಡು ತನ್ನ ಆಕ್ರೋಶ ಹೊರಹಾಕಿದ್ದಾನೆ. ಗೆಳತಿ ದುಬೈಗೆ ತೆರಳುತ್ತಿದ್ದಳು. ಹೀಗಾಗಿ ಆಕೆಯನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಾನು ಡ್ರಾಪ್ ಮಾಡಿದ್ದೆ. ಆಕೆ ಬೆಂಗಳೂರಿನಿಂದ ದುಬೈಗೆ ತೆರಳಿದರೆ, ಆಕೆಯನ್ನು ಡ್ರಾಪ್ ಮಾಡಿದ ನಾನು ಮರಳಿ ಮನೆಗೆ ಮರಳಿದೆ. ಆದರೆ ಗೆಳತಿ ದುಬೈ ತಲುಪಿದರೂ ನಾನು ಬೆಂಗಳೂರು ಟ್ರಾಫಿಕ್ ಸಿಲುಕಿದ್ದೇನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.
ಬೆಂಗಳೂರು ಟ್ರಾಫಿಕ್ ಪೋಸ್ಟ್‌ಗೆ ವಿರೋಧ
ಬೆಂಗಳೂರು ಟ್ರಾಫಿಕ್ ಕುರಿತು ಮಾಡಿದ ಈ ಪೋಸ್ಟ್‌ಗ ಪರ ವಿರೋಧಗಳು ಕೇಳಿಬರುತ್ತಿದೆ. ಆದರೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ನೋಟಕ್ಕೆ, ನಿಮ್ಮ ಪೋಸ್ಟ್‌ಗೆ ತಕ್ಕಂತೆ ಬೆಂಗಳೂರು ಬಳಸಿಕೊಳ್ಳಬೇಡಿ. ಟ್ರಾಫಿಕ್ ಇಲ್ಲದ ನಗರವಿಲ್ಲ. ಬೆಂಗಳೂರು ಇದಕ್ಕೆ ಹೊರತಲ್ಲ. ಆದರೆ ಅಂತಾರಾಷ್ಟ್ರೀಯ ಪ್ರಯಾಣದ ವೇಳೆ 3 ಗಂಟೆ ಮೊದಲೇ ಮನೆಯಿಂದ ವಿಮಾನ ನಿಲ್ದಾಣದತ್ತ ಹೊರಡಬೇಕು. ಇನ್ನು 3.5 ಗಂಟೆ ಬೆಂಗಳೂರಿನಿಂದ ದುಬೈ ಪ್ರಯಾಣದ ಅವಧಿ. ಹೀಗಾಗಿ ಒಟ್ಟು6 ಗಂಟೆ ಬೇಕು. ಈ 6.5 ಗಂಟೆಯಲ್ಲಿ ಬೆಂಗಳೂರಿನ ಅತೀ ಹೆಚ್ಚು ಟ್ರಾಫಿಕ್ ರಸ್ತೆಗಳು ಹಾಗೂ ಜಂಕ್ಷನಗಳಾದ ಹೆಬ್ಬಾಳ, ಮಾರಥಹಳ್ಳಿ, ಹೆಚ್ಎಸ್ಆರ್, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್‌ಬೋರ್ಡ್, ಸಿಬಿಡಿ ಮೂಲಕ ಮತ್ತೆ ಹೆಬ್ಬಾಳ ತಲುಪಬಹುದು ಎಂದು ಕಮೆಂಟ್ ಮಾಡಿದ್ದಾರೆ.
https://www.instagram.com/reel/DMMuLvMvFFr/?igsh=cTFkeHF5MTVpYWd3
ಇದೇ ಹೆಬ್ಬಾಳ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವ ವ್ಯಕ್ತಿಯೊಬ್ಬರು, ಹೆಬ್ಬಾಳದಲ್ಲಿ ನೀವು ಹೇಳಿದಂತ ಟ್ರಾಫಿಕ್ ಇಲ್ಲ. ನಾನು ಪ್ರತಿ ದಿನ 20 ಕಿಲೋಮೀಟರ್ ಇದೇ ಹೆಬ್ಬಾಳ ಮೂಲಕ ಪ್ರಯಾಣಿಸುತ್ತೇನೆ. 45 ನಿಮಿಷ ತೆಗೆದುಕೊಳ್ಳುತ್ತೇನೆ. ಈ ಪೋಸ್ಟ್ ಬೆಂಗಳೂರನ್ನು ಸುಖಾಸುಮ್ಮನೆ ಟ್ರಾಫಿಕ್ ಸಿಟಿ ಎಂದು ಬಿಂಬಿಸುವ ಪ್ರಯತ್ನ. ಅಸಲಿಗೆ ಈ ರೀತಿಯ ಸಂಕಷ್ಟ ಯಾವುದೇ ಭಾಗದಲ್ಲಿ ಇಲ್ಲ. ಆದರೆ ಕೆಲವು ಸಂದರ್ಭದಲ್ಲಿ ಟ್ರಾಫಿಕ್ ಹೆಚ್ಚಾದ ಉದಾಹರಣೆ ಇದೆ. ಆದರೆ ಪ್ರತಿ ದಿನದ ಸ್ಥಿತಿ ಇದಲ್ಲ ಎಂದು ಅಭಿಪಾಯ ವ್ಯಕ್ತಪಪಡಿಸಿದ್ದಾರೆ.

ಇದೇ ವೇಳೆ ಕೆಲವರು ಅತೀರೇಖದಿಂದ ಬರೆದಿದಿದ್ದಾರೆ. ಆದರೆ ಬೆಂಗಳೂರು ಟ್ರಾಫಿಕ್ ಅಲ್ಲಗೆಳಯುವಂತಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಈ ಪೋಸ್ಟ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಳಲು ಫನ್ನಿಯಾಗಿದೆ. ಆದರೆ ಅಸಲಿ ಸತ್ಯ ಎಂದಿದ್ದಾರೆ.
https://www.instagram.com/reel/DMMuLvMvFFr/?igsh=cTFkeHF5MTVpYWd3