Ashraf Kammaje
Published : Jul 19 2025, 03:37 PM IST
ಪೋರ್ಚುಗಲ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಇದೀಗ ಮತ್ತೊಮ್ಮೆ ಅಲ್ ನಸರ್ ಕ್ಲಬ್ ಜತೆ ಮರು ಒಪ್ಪಂದ ಮಾಡಿಕೊಂಡಿದ್ದಾರೆ. ಇದು ರೊನಾಲ್ಡೋ ಪಾಲಿಗೆ ಹೊಸ ಸಂಪತ್ತಿನ ಮಳೆ ಸುರಿಸುವಂತೆ ಮಾಡಿದೆ.
ದಿಗ್ಗಜ ಪೋರ್ಚುಗೀಸ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಅಲ್ ನಸರ್ ಕ್ಲಬ್ ಜತೆ ಹೊಸ ಮೆಗಾ ಮನಿ ಡೀಲ್‌ಗೆ ಸಹಿಹಾಕಿದ್ದಾರೆ.
40 ವರ್ಷದ ರೊನಾಲ್ಡೋ ಇದೀಗ ತಮ್ಮ ವಾರ್ಷಿಕ ಮೂಲ ವೇತನ 178(GBP) ಗ್ರೇಟ್ ಬ್ರಿಟನ್ ಪೌಂಡ್ ಮಿಲಿಯನ್ ಡಾಲರ್(2000 ಕೋಟಿ ರುಪಾಯಿ) ರುಪಾಯಿ ಪಡೆದುಕೊಳ್ಳಲಿದ್ದಾರೆ. ಇದರ ಜತೆಗೆ ಇನ್ನಷ್ಟು ಅನುಕೂಲಗಳು ರೊನಾಲ್ಡೋಗಿವೆ.
38
Image Credit : ANI
ಇನ್ನು ಇದಷ್ಟೇ ಅಲ್ಲದೇ ರೊನಾಲ್ಡೋ ಬೋನಸ್ ರೂಪದಲ್ಲಿ 24.5 ಮಿಲಿಯನ್ ಡಾಲರ್ ಗ್ರೇಟ್ ಬ್ರಿಟನ್ ಪೌಂಡ್, ಇನ್ನು ಎರಡನೇ ವರ್ಷ 38 ಮಿಲಿಯನ್ GBP ಪಡೆಯಲಿದ್ದಾರೆ
48
Image Credit : Getty
ಒಂದು ವೇಳೆ ರೋನಾಲ್ಡೋ ಗೆಲುವು ದಾಖಲಿಸಿದರೆ,
ಸೌದಿ ಪ್ರೊ ಲೀಗ್ ಗೆದ್ದರೇ: 8 ಮಿಲಿಯನ್
ಎಎಫ್‌ಸಿ ಚಾಂಪಿಯನ್ಸ್ ಲೀಗ್: 5 ಮಿಲಿಯನ್
ಗೋಲ್ಡನ್ ಬೂಟ್: 4 ಮಿಲಿಯನ್ ತಮ್ಮ ಜೇಬಿಗಿಳಿಸಿಕೊಳ್ಳಲಿದ್ದಾರೆ
58
Image Credit : Getty
ಇನ್ನು ರೊನಾಲ್ಡೋ ಪ್ರತಿ ಗೋಲಿಗೆ ಸುಮಾರು 80,000 GBP ಪಡೆಯಲಿದ್ದಾರೆ. 80,000 GBP ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಒಂದು ಕೋಟಿ ರುಪಾಯಿಗಳು. ಗೋಲು ಗಳಿಸಲು ಅಸಿಸ್ಟ್ ಮಾಡಿದರೇ ರೊನಾಲ್ಡೋ 40,000 GBP(50 ಲಕ್ಷ ರುಪಾಯಿ) ಪಡೆಯಲಿದ್ದಾರೆ
68
Image Credit : Instagram/Cristiano Ronaldo
ಇದೆಲ್ಲಕ್ಕಿಂತ ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಕ್ರಿಸ್ಟಿಯಾನೋ ರೊನಾಲ್ಡೋಗೆ ಅಲ್ ನಸರ್ ಕ್ಲಬ್ 15% ಓನರ್‌ಶಿಪ್ ಸ್ಟೇಕ್ ನೀಡಲಿದೆ
ಇನ್ನು ಇದೆಲ್ಲದರ ಜತೆಗೆ ಕ್ರಿಸ್ಟಿಯಾನೋ ರೊನಾಲ್ಡೋ ಸ್ಪಾನ್ಸರ್‌ಶಿಪ್ ಡೀಲ್ ಮೂಲಕವೇ ವಾರ್ಷಿಕ 600 ಕೋಟಿ ರುಪಾಯಿ ಹಣವನ್ನು ತಮ್ಮ ಜೇಬಿಗಿಳಿಸಿಕೊಳ್ಳಲಿದ್ದಾರೆ.
ಅಲ್ ನಸರ್ ಕ್ಲಬ್ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ವಿಮಾನ ಪ್ರಯಾಣದ ವೆಚ್ಚದ ರೂಪದಲ್ಲಿ ಬರೋಬ್ಬರಿ 50 ಕೋಟಿ ರುಪಾಯಿ ನೀಡಲಿದೆ.