ಏರ್ ಇಂಡಿಯಾ ವಿಮಾನ ಪತನಕ್ಕೆ ಇಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್ಗಳನ್ನು ಕಟ್ ಆಫ್ ಮಾಡಿದ್ದೇ ಕಾರಣ ಅನ್ನೋದು ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ ವೆಸ್ಟಿಗೇಷನ್ ಬ್ಯೂರೋ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿತ್ತು. ಈಗ ಈ ಪ್ರಾಥಮಿಕ ವರದಿಯ ಮತ್ತಷ್ಟು ಅಂಶಗಳು ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾಗಿವೆ.

ವಾಲ್ ಸ್ಟ್ರೀಲ್ ಜರ್ನಲ್ ವರದಿಯ ಪ್ರಕಾರ, ವಿಮಾನಕ್ಕೆ ಇಂಧನ ಪೂರೈಸುವ ಸ್ವಿಚ್ ಗಳನ್ನು ಕಟ್ ಆಫ್ ಮಾಡಿದ್ದು ಕ್ಯಾಪ್ಟನ್ ಸುಮಿತ್ ಸಬರವಾಲ್. ಇಬ್ಬರು ಪೈಲಟ್ಗಳ ಪೈಕಿ, ಇಂಧನ ಪೂರೈಸುವ ಸ್ವಿಚ್ ಅನ್ನು ಕಟ್ ಆಫ್ ಮಾಡಿದ್ದು ಯಾರು ಎಂಬುದೇ ಚರ್ಚೆಯಾಗುತ್ತಿತ್ತು. ಈಗ ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಇಂಧನ ಪೂರೈಸುವ ಸ್ವಿಚ್ ಕಟ್ ಆಫ್ ಮಾಡಿದ್ದೇ ಸುಮಿತ್ ಸಬರವಾಲ್ ಎಂದು ಹೇಳಲಾಗುತ್ತಿದೆ.

ವಿಮಾನದ ಫಸ್ಟ್ ಪ್ಲೈಯಿಂಗ್ ಆಫೀಸರ್ ಕ್ಲೈವ್ ಕುಂದರ್, ನೀವು ಏಕೆ ವಿಮಾನದ ಇಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್ಗಳನ್ನು ಕಟ್ ಆಫ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ, ಫಸ್ಟ್ ಫ್ಲೈಯಿಂಗ್ ಆಫೀಸರ್ ಕ್ಲೈವ್ ಕುಂದರ್, ಗಾಬರಿಯಾಗಿದ್ದರು. ಆದ್ರೆ, ವಿಮಾನದ ಕ್ಯಾಪ್ಟನ್ ಸುಮೀತ್ ಸಬರವಾಲ್, ಶಾಂತವಾಗಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ವಿಮಾನ ಟೇಕಾಫ್ ಆದ ತಕ್ಷಣವೇ ಇಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್ಗಳನ್ನು ಕಟ್ ಆಫ್ ಮಾಡಲಾಗಿತ್ತು. ವಿಮಾನದ ಟೇಕಾಫ್ ಮತ್ತು ಪತನದ ಮಧ್ಯೆ ಬರೀ 32 ಸೆಕೆಂಡ್ ಅಂತರ ಮಾತ್ರ ಇದೆ.

ಪ್ರಾಥಮಿಕ ವರದಿಯ ಪ್ರಕಾರ, ವಿಮಾನದ ಕ್ಯಾಪ್ಟನ್ ಸುಮಿತ್ ಸಬರವಾಲ್ ಅವರೇ, ಇಂಧನ ಸ್ವಿಚ್ ಗಳನ್ನು ರನ್ನಿಂದ ಕಟ್ ಆಫ್ ಸ್ಥಿತಿಗೆ ತೆಗೆದುಕೊಂಡು ಹೋಗಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ತನಿಖೆಯ ವಿಷಯದ ಬಗ್ಗೆ ಗೊತ್ತಿರುವವರಿಂದ ಮಾಹಿತಿ ಸಂಗ್ರಹಿಸಿ ಈ ವರದಿ ಮಾಡಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ. ಆದ್ರೆ, ವಿಮಾನದ ಇಂಧನ ಸ್ವಿಚ್ಗಳನ್ನು ಕಟ್ ಆಫ್ ಮಾಡಿದ್ದು, ಆಕಸ್ಮಿಕವೋ ಅಥವಾ ಉದ್ದೇಶ ಪೂರ್ವಕವೋ ಎಂಬ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಏನ್ನನ್ನೂ ಹೇಳಿಲ್ಲ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಗೆ ಭಾರತದ ಪೈಲಟ್ ಅಸೋಸಿಯೇಷನ್ ತೀವ್ರವಾಗಿ ಕಿಡಿಕಾರಿದೆ. ಕ್ಯಾಪ್ಟನ್ ಸುಮಿತ್ ಸಬರವಾಲ್ ಅವರನ್ನ ವಿಮಾನ ಪತನಕ್ಕೆ ಹೊಣೆ ಮಾಡಿದ್ದು ಸರಿಯಲ್ಲ ಎಂದಿದೆ. ತನಿಖೆಯ ಪ್ರಾಥಮಿಕ ವರದಿಯ ಆಧಾರದ ಮೇಲೆ ಪೈಲಟ್ಗಳನ್ನು ವಿಮಾನ ಪತನಕ್ಕೆ ಹೊಣೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ವಾಲ್ ಸ್ಟ್ರೀಟ್ ಜರ್ನಲ್ ವಿರುದ್ಧ ಕೇಸ್ ಹಾಕುತ್ತೇವೆ. ವಾಲ್ ಸ್ಟ್ರೀಟ್ ಜರ್ನಲ್ಗೆ ಲೀಗಲ್ ನೋಟೀಸ್ ನೀಡುತ್ತೇವೆ ಎಂದು ಭಾರತದ ಪೈಲಟ್ ಅಸೋಸಿಯೇಷನ್ ಹೇಳಿದೆ. ಇನ್ನೂ ಭಾರತ ಸರ್ಕಾರವು ಕೂಡ ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ ವರದಿ ಎಂದು ಹೇಳಿದೆ.
https://chat.whatsapp.com/LdH8PReZsDKBwgM9X5XMzp?mode=r_t