
ಉಡುಪಿ: ಮಕ್ಕಳೊಂದಿಗೆ ನೃತ್ಯ ಮಾಡುತ್ತಾ ಆಟದ ಜೊತೆ ಪಾಠ ಮಾಡಿ ರೀಲ್ಸ್ ವೀಡಿಯೋ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ಶಿಕ್ಷಕಿ. ಡ್ಯಾನ್ಸ್ ಟೀಚರ್ ಎಂದೇ ಫೇಮಸ್ ಆಗಿದ್ದ ಕಾರ್ಕಳ ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕಿ ವಂದನಾ ರೈ ಅವರು ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳನ್ನು ಮೊಬೈಲ್ ಗೀಳಿನಿಂದ ಹೇಗಾದರೂ ದೂರ ಮಾಡಬೇಕೆನ್ನುವ ಸದುದ್ದೇಶದಿಂದ ಶಾಲೆಯಲ್ಲಿ ಒಂದು ಸಣ್ಣ ಸ್ಕಿಟ್ ಮಾಡಿದ್ದರು.

ವಿದ್ಯಾರ್ಥಿನಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮೊಬೈಲ್ ನೋಡಿ ನೋಡಿ ಈ ಬಾಲಕಿಯ ಕಣ್ಣು ಹೇಗೆ ಹೋಗಿದೆ ನೋಡಿ ಅಂತ ಉಳಿದ ಮಕ್ಕಳಲ್ಲಿ ಭಯದ ಮೂಲಕವಾದ್ರೂ ಮೊಬೈಲ್ ಎಡಿಕ್ಷನ್ ನಿಂದ ವಿದ್ಯಾರ್ಥಿಗಳನ್ನು ದೂರವಿಡಲು ತರಗತಿಯಲ್ಲಿ ಜಾಗೃತಿ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಇದೇ ವಿಡಿಯೋಗೆ ನೆಟ್ಟಿಗರು ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದ ಬೆನ್ನಲ್ಲೇ ಶಿಕ್ಷಕಿ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ. ಜೊತೆಗೆ ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಶಿಕ್ಷಕಿ ವಂದನಾ ರೈ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ಶಿಕ್ಷಕಿ, ಈ ಆಲೋಚನೆ ಬಂದದ್ದೇ ಪೋಷಕರ ಸಲಹೆ ಮೇಲೆ. ಮೊಬೈಲ್ ಬಳಸದಂತೆ ಜಾಗೃತಿ ಮೂಡಿಸುವಂತೆ ಪೋಷಕರು ಒತ್ತಾಯಿಸಿದ್ದರು. ಅಷ್ಟೆಲ್ಲ ನೃತ್ಯದ ಮೂಲಕ ಪಾಠ ಮಾಡುವ ವೀಡಿಯೋ ಜೊತೆಗೆ ಜಾಗೃತಿ ಕೆಲಸ ಮಾಡಿ ಅಂತ ಹೇಳಿದ್ರು. ಮೊಬೈಲ್ ಅವೇರ್ನೆಸ್ ಯಾಕೆ ಮಾಡಬಾರದು ಅಂತ ಪೋಷಕರು ಸಲಹೆ ನೀಡಿದ್ರು. ಎಲ್‌ಕೆಜಿ ಮಗುವಿನ ತಾಯಿ ನನ್ನ ಮಗಳು ಮೊಬೈಲ್ ಅತೀ ಹೆಚ್ಚು ನೋಡ್ತಾಳೆ. ಒಂದು ಮೊಬೈಲ್ ಅವೇರ್ನೆಸ್ ಚಟುವಟಿಕೆ ಮಾಡಿ ಎಂದು ಮನವಿ ಮಾಡಿದ್ರು. ಮನಸ್ಸಿಗೆ ಮುಟ್ಟುವಂತ ಸ್ಟ್ರಾಂಗ್ ಕಂಟೆಂಟ್ ಇರುವ ವೀಡಿಯೋ ಮಾಡಿ ಎಂದು ಸಲಹೆ ಬಂದಿತ್ತು. ಪೋಷಕರ ಇಂತಹ ಸಲಹೆ ಮೇಲೆ ಮೊಬೈಲ್ ಬಳಸದಂತೆ ಜಾಗೃತಿ ಮೂಡಿಸುವ ಚಟುವಟಿಕೆ ಮಾಡಿದ್ದೇನೆ. ಕಣ್ಣಿಗೆ ಬಟ್ಟೆ ಕಟ್ಟಿ ಆ್ಯಕ್ಟ್ ಮಾಡಿದ ಬಾಲಕಿಯ ತಂದೆಗೆ ಈ ಬಗ್ಗೆ ಮೊದಲೇ ತಿಳಿಸಿದ್ದೆವು. ಮೊಬೈಲ್ ಬಳಸದಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ನಾನು ಓರ್ವ ಶಿಕ್ಷಕಿ ನಾನು ಒಬ್ಬಳು ತಾಯಿ. ಮಗುವಿನ ಮನಸ್ಥಿಗೆ ಭಂಗ-ಆಘಾತ ತರುವ ಉದ್ದೇಶ ಇಲ್ಲವೇ ಇಲ್ಲ ಎಂದರು
ಮತ್ತೆ ಮಾತನ್ನು ಮುಂದುವರೆಸಿದ ಶಿಕ್ಷಕಿ, ಮೊಬೈಲ್.. ಮೊಬೈಲ್ ಎನ್ನುವ ಗೀಳಿಗೆ ಹೋಗಿ ಕೇಳದ ಮಕ್ಕಳಿಗೆ ಈ ಪ್ರಯೋಗ. ಪಾಸಿಟಿವ್ ಹಾಗೂ ನೆಗೆಟಿವ್ ಕಮೆಂಟ್ ಎರಡನ್ನೂ ಸ್ವೀಕರಿಸುತ್ತೇನೆ. ನಮ್ಮ ಮಕ್ಕಳು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೆಲವರು ಕಣ್ಣಿಗೆ ಟೊಮೆಟೊ ಸಾಸ್ ಹಾಕಿದ್ದಾರಾ ಎಂದು ಕೆಲವು ಮಕ್ಕಳು ಕೇಳಿದ್ರೆ, ಕೆಲವು ಮಕ್ಕಳು ಮನೆಗೆ ಹೋದ ಮೇಲೆ ನಮಗೆ ಮೊಬೈಲ್ ಬೇಡ ಎಂದು ಹೇಳಿದ್ದಾರೆ. ಯಾರೋ ಏನೋ ಹೇಳಿದ್ದಾರೆ ಅಂತ ನನ್ನ ಚಟುವಟಿಕೆ, ಜಾಗೃತಿ ಮೂಡಿಸುವುದು ನಿಲ್ಲಿಸುವುದಿಲ್ಲ. ನನ್ನ ತಪ್ಪಿದ್ರೆ ತಿದ್ದಿಕೊಳ್ತೇನೆ. ಕೇರಳ ತಮಿಳುನಾಡು ಭಾಗದಲ್ಲಿ ನನ್ನ ವೀಡಿಯೋ ಪಾಸಿಟಿವ್ ಆಗಿ ವೈರಲ್ ಆಗಿದೆ. ಮಕ್ಕಳು ಮೊಬೈಲ್ ಗೀಳಿಗೆ ಬೀಳಲು ಪೋಷಕರೇ ಮುಖ್ಯ ಕಾರಣ. ಮೊದಲೆಲ್ಲ ಚಂದಮಾಮ ತೋರಿಸುತ್ತಿದ್ರು ಈಗ ಮೊಬೈಲ್ ತೋರಿಸಲಾಗುತ್ತಿದೆ. ನಮ್ಮ ಉದ್ದೇಶ ಮಕ್ಕಳ ಕಣ್ಣಿಗೆ ಹಾನಿಯಾಗಬಾರದು ಎಂಬುದಷ್ಟೇ. ಕೋವಿಡ್ ಮೊದಲು ನಾನು ನೃತ್ಯದ ಮೂಲಕ ಪಾಠವನ್ನ ಮಾಡುತ್ತಿದ್ದೆ. ಕೋವಿಡ್ ಸಮಯದಲ್ಲಿ ನನ್ನ ಪಾಠದ ಶೈಲಿ ಎಲ್ಲರಿಗೂ ಇಷ್ಟವಾಯ್ತು. ಈಗ ಪೋಷಕರು ಹಾಗೂ ಮಕ್ಕಳು ಇಬ್ಬರೂ ನನ್ನಿಂದ ಇದನ್ನೇ ನಿರೀಕ್ಷಿಸುತ್ತಾರೆ. ಆಕ್ಟಿವಿಟಿ ಮೂಲಕ ಮಾಡಿದ್ರೆ ಮಾತ್ರ ಮಕ್ಕಳಿಗೆ ಸುಲಭವಾಗಿ ಪಾಠ ಅರ್ಥವಾಗುತ್ತೆ. ಮೊಬೈಲ್ ಜಾಗೃತಿ ವೀಡಿಯೋವನ್ನ ನಾನು ಮಾಡಿದ್ದು ಒಂದೆರಡು ನಿಮಿಷ ಅಷ್ಟೆ. ಆದ್ರೆ ದಿನದ ಏಳೆಂಟು ಗಂಟೆ ಶಾಲೆಯಲ್ಲಿ ಮಕ್ಕಳೊಂದಿಗೆ ದಿನ ಕಳೆಯುತ್ತೇನೆ. ನಾನೊಬ್ಬಳು ನೃತ್ಯ ಶಿಕ್ಷಕಿ. ಹವ್ಯಾಸ ತರಗತಿಯಲ್ಲಿ ನಾನು ನೃತ್ಯವನ್ನು ಬಿಟ್ಟು ಬೇರೆನೂ ಮಾಡಲು ಆಗಲ್ಲ. ನೃತ್ಯದಲ್ಲಿ ನೃತ್ಯವನ್ನೇ ಮಾಡಬೇಕು ಹೊರತು ಪಾಠವನ್ನಲ್ಲ. ಕೇವಲ ಪಾಠ ಪ್ರವಚನ ಮಾಡೋದಲ್ಲ ದೈಹಿಕ ಚಟುವಟಿಕೆ ಕೂಡ ಬೇಕು. ಈಗಿನ ಮಕ್ಕಳು ಪ್ರ್ಯಾಕ್ಟಿಕಲ್ ಆಗಿ ಕಲಿಯಲು ಇಷ್ಟಪಡುತ್ತಾರೆ ಎಂದಿದ್ದಾರೆ.