ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಬಂಧಿನಕೊಳ್ಳಲಾಗಿದ್ದರು. 18 ದಿನ ಜೈಲಿನಲ್ಲಿದ್ದರೂ ಬುದ್ಧಿ ಅಧಿಕಾರಿ ನೇರವಾಗಿ ಕಚೇರಿಗೆ ಆಗಮಿಸಿ ಮತ್ತೆ ದರ್ಬಾರ್ ನಡೆಸಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಅಮಾನತುಗೊಳಿಸಲಾಗಿದೆ.
ಮಂಗಳೂರು, ಜೂನ್ 22: ಕಚೇರಿಯಲ್ಲಿ ದರ್ಬಾರ್ ಮಾಡುತ್ತಿದ್ದ ಅಧಿಕಾರಿಯನ್ನು ಕೊನೆಗೂ ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ (Mines dept Deputy Director) ಡಿಡಿ ಕೃಷ್ಣವೇಣಿ ಅನ್ನು ಇಲಾಖೆ ತನಿಖೆ ಬಾಕಿ ಇರಿಸಿ ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಮಂಜುನಾಥ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಜೈಲಿನಿಂದ ನೇರಾವಾಗಿ ಕಚೇರಿಗೆ ಬಂದಿದ್ದ ಅಧಿಕಾರಿಗೆ ಬೊಕ್ಕೆ ಕೊಟ್ಟು ಸ್ವಾಗತಿಸಿದ್ದ ಫೋಟೋ ವೈರಲ್ ಆಗಿದೆ.