
ಆಗಸದಲ್ಲಿ ಹಾಟ್ ಏರ್ ಬಲೂನ್ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು, 8 ಮಂದಿ ಜೀವ ಕಳೆದುಕೊಂಡಿರುವ ಘಟನೆ ಘಟನೆ ಬ್ರೆಜಿನಲ್ನಲ್ಲಿ ನಡೆದಿದೆ. ಏರ್ ಬಲೂನ್ನಲ್ಲಿ 21 ಜನರಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆಗಸಲ್ಲಿ ಹಾಟ್ ಬಲೂನ್ ಹೊತ್ತಿ ಉರಿದಿದ್ದು, ಬಳಿಕ ಕೆಳಗೆ ಬಿದ್ದಿದೆ. ಈ ದೃಶ್ಯ ಭಯಾನಕವಾಗಿದೆ.
ಕಡಲತಡಿಯ ಈ ತವರು ಸಾಂತಾ ಕ್ಯಾಟರಿನಾ.. ಇದು ಬ್ರೆಜಿಲ್ನ ಸುಪ್ರಸಿದ್ಧ ಪ್ರವಾಸಿ ತಾಣ.. ನಿನ್ನೆ ವೀಕೆಂಡ್ ಕಾರಣಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬಂದಿತ್ತು.. ಸಾಂತಾ ಕ್ಯಾಟರಿನಾದಲ್ಲಿ ಬೀಚ್, ಬೋಟಿಂಗ್, ಏರ್ ಬಲೂನ್ ಹೈಲೆಟ್ಸ್.. ಆದ್ರೆ, ನಿನ್ನೆ ಆಗಸದಲ್ಲಿ ಘೋರ ದುರಂತ ನಡೆದು ಹೋಗಿದೆ.
ಹಾಟ್ ಏರ್ ಬಲೂನ್ 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.. ಆದ್ರೆ, ಆಗಸಕ್ಕೆ ಹಾರುತ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿದ್ದು, ಪತನಗೊಂಡಿದೆ.. ಘಟನೆಯಲ್ಲಿ 8 ಮಂದಿ ಪ್ರವಾಸಿಗಳು ಜೀವ ಕಳೆದುಕೊಂಡಿದ್ದಾರೆ. ಬೆಳಗಿನ ಜಾವ ಹಾರಾಟದ ಸಮಯದಲ್ಲಿ ಈ ಘಟನೆ ನಡೆದಿದೆ.. ಅಂದ್ಹಾಗೆ ಇದು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಹಾಟ್ ಬಲೂನ್ ಆಗಿದ್ದು, ಬೆಂಕಿಗೆ ಆಹುತಿಯಾಗಿದೆ.. ಪ್ರಿಯಾ ಗ್ರಾಂಡೆ ನಗರದಲ್ಲಿ ಈ ಘಟನೆ ನಡೆದಿದೆ ಅಂತ ರಾಜ್ಯ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಬದುಕುಳಿದ ಹದಿಮೂರು ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ..
ಒಟ್ಟಾರೆ, ಬೆಳ್ಳಂಬೆಳಗ್ಗೆ ನಡೆದಿರುವ ಘಟನೆ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಆಗಸದಲ್ಲಿ ಹೊತ್ತಿ ಉರಿದ ಏರ್ ಬಲೂನ್ ದೃಶ್ಯಗಳು ದಂಗು ಬಡಿಸುವಂತಿದೆ.