Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ

    ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ AI.. ಫೋಟೋ ಅಪ್​ಲೋಡ್​ ಮಾಡುವಾಗ ಹುಷಾರ್​!

    ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಕೆಂಪು ಕಲ್ಲು ಬಗ್ಗೆ ನಿಯಮ ಸಡಿಲಿಕೆ, 25 ಗುತ್ತಿಗೆದಾರರಿಗೆ ಪರವಾನಗಿ, ಕಲ್ಲಿನ ದರ ಇಳಿಯಲಿದೆ ; ಯುಟಿ ಖಾದರ್

    ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಯಿಂದ ಬಿಸಿ ರೋಡ್ ನಲ್ಲಿ ತಿರಂಗಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ

    ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ:

    15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳನ್ನ ಗುಜರಿಗೆ ಹಾಕಿ: ಸರ್ಕಾರ ಆದೇಶ

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಕೇರಳದಲ್ಲಿ ಹೊಸ ರೋಗದ ಹಾವಳಿ; 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು, 17 ಜನ ಸಾವು

    ಬಂಟ್ವಾಳ : ತಲ್ವಾರ್ ದಾಳಿ  ಸುಳ್ಳೆಂದು ಆರೋಪಿಸಿ ಬಂಧಿತನಾಗಿದ್ದ ಉಮ್ಮರ್ ಫಾರೂಕ್ ಸಜಿಪರವರಿಗೆ ಜಾಮೀನು ಮಂಜೂರು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ನಕಲಿ ಪೊಲೀಸ್​ ಠಾಣೆ ಸ್ಥಾಪನೆ: 1 ವರ್ಷದಿಂದ ಕಾರ್ಯಾಚರಣೆ, 500 ಜನರಿಗೆ ಮೆಗಾ ವಂಚನೆ!

editor tv by editor tv
June 10, 2025
in ರಾಷ್ಟ್ರೀಯ
0
ನಕಲಿ ಪೊಲೀಸ್​ ಠಾಣೆ ಸ್ಥಾಪನೆ: 1 ವರ್ಷದಿಂದ ಕಾರ್ಯಾಚರಣೆ, 500 ಜನರಿಗೆ ಮೆಗಾ ವಂಚನೆ!
1.9k
VIEWS
Share on FacebookShare on TwitterShare on Whatsapp

ಬಿಹಾರದ ಪೂರ್ಣಿಯಾದಲ್ಲಿ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ನಕಲಿ ಪೊಲೀಸ್ ಠಾಣೆಯೊಂದನ್ನು ಪತ್ತೆ ಹಚ್ಚಲಾಗಿದೆ. ಪೊಲೀಸ್ ಸಮವಸ್ತ್ರದಲ್ಲಿದ್ದ ಇವರು ವಾಹನ ತಪಾಸಣೆ ಮತ್ತು ಅಕ್ರಮ ಸುಲಿಗೆ ಮಾಡಿರುವುದು ಬಯಲಾಗಿದ

ಪೂರ್ಣಿಯಾ, ಬಿಹಾರ: ಪೂರ್ಣಿಯಾ ಜಿಲ್ಲೆಯ ಕಸ್ಬಾ ಪೊಲೀಸ್ ಠಾಣೆ ಪ್ರದೇಶದ ಮೋಹಾನಿ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ನಕಲಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿತ್ತು ಎಂಬ ವಿಚಾರ ಈಗ ಸಂಚಲನ ಸೃಷ್ಟಿಸಿದೆ. ಈ ನಕಲಿ ಪೊಲೀಸ್ ಠಾಣೆಯ ಮೂಲಕ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ರಾಹುಲ್ ಕುಮಾರ್ ಸಾಹ್ ಎಂಬಾತ ಗ್ರಾಮೀಣ ಯುವಕರಿಗೆ ಉದ್ಯೋಗದ ಆಮಿಷ ಒಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್​ ಅಧಿಕಾರಿಯಂತೆ ನಟಿಸಿ ಯುವಕರಿಗೆ ವಂಚನೆ: ಗ್ರಾಮೀಣ ರಕ್ಷಾ ದಳದ ಹೆಸರಿನಲ್ಲಿ ಕಾನ್ಸ್​ಟೇಬಲ್​ ಮತ್ತು ಚೌಕೀದಾರ್ ನೇಮಕಾತಿಗಾಗಿ ಯುವಕರಿಂದ 2500 ರಿಂದ 5000 ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ವಿಷಯ ಬೆಳಕಿಗೆ ಬಂದ ನಂತರ ರಾಹುಲ್ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಿಹಾರ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಮತ್ತು ಅನುಮಾನಾಸ್ಪದ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಕೂಡಾ ಎದ್ದಿವೆ.

ನಕಲಿ ಸಮವಸ್ತ್ರ, ವಾಹನ ತಪಾಸಣೆ, ವಸೂಲಿ; ರಾಹುಲ್ ಕುಮಾರ್ ಸಾಹ್ ಯುವಕರಿಗೆ ಪೊಲೀಸ್ ಸಮವಸ್ತ್ರ, ಲಾಠಿ ಮತ್ತು ನಕಲಿ ಗುರುತಿನ ಚೀಟಿ ನೀಡುವ ಮೂಲಕ ವಾಹನ ತಪಾಸಣೆ ಮತ್ತು ಮದ್ಯ ಕಳ್ಳಸಾಗಣೆ ವಿರುದ್ಧ ದಾಳಿಗಳನ್ನು ಮಾಡಿಸಿದ್ದ. ವಂಚನೆಗೊಳಗಾದ ವಿದ್ಯಾರ್ಥಿಗಳು ರಾಹುಲ್ ಆದೇಶದ ಮೇರೆಗೆ ಗೆರುವಾ ಘಾಟ್ ಮತ್ತು ಗಾಂಧಿ ಘಾಟ್ ಸೇತುವೆಯಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿದ್ದೀರಿ ಎಂದು 400 ರೂ.ಗಳವರೆಗೆ ಚಲನ್ ನೀಡಿ, ಹಣ ವಸೂಲು ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಹೆಲ್ಮೆಟ್ ಅಥವಾ ಚಾಲನಾ ಪರವಾನಗಿ ಇಲ್ಲದವರಿಗೆ 400 ರೂ.ಗಳ ಚಲನ್ ನೀಡಲಾಗುತ್ತಿತ್ತು. ಅದರಲ್ಲಿ 200 ರೂ.ಗಳನ್ನು ಗಸ್ತು ತಂಡಕ್ಕೆ ಕಮಿಷನ್ ಆಗಿ ನೀಡಲಾಗುತ್ತಿತ್ತು. ಉಳಿದ ಮೊತ್ತವನ್ನು ಸರ್ಕಾರಿ ಖಜಾನೆಯಲ್ಲಿ ಠೇವಣಿ ಇಡುವುದಾಗಿ ರಾಹುಲ್ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎಂದು ಈ ಗ್ಯಾಂಗ್​ ನ ಅಕ್ರಮಕ್ಕೆ ಬಲಿಯಾದ ಸಂತ್ರಸ್ತ ಹೇಳಿಕೊಂಡಿದ್ದಾನೆ.

ಮದ್ಯ ಕಳ್ಳಸಾಗಣೆ, ನಕಲಿ ಪೊಲೀಸ್ ಠಾಣೆ: ಈ ಜಾಲದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ರಾಹುಲ್, ಮೋಹನಿ ಪಂಚಾಯತ್‌ನ ಮಧ್ಯ ವಿದ್ಯಾಲಯ ಬೆಟೌನಾವನ್ನು ನಕಲಿ ಪೊಲೀಸ್ ಠಾಣೆಯನ್ನಾಗಿ ಮಾಡಿಕೊಂಡಿದ್ದರು. ಅಲ್ಲಿ ಮದ್ಯ ಕಳ್ಳಸಾಗಣೆದಾರರಿಂದ ಅಕ್ರಮ ವಸೂಲಿ ಮಾಡುತ್ತಿದ್ದ. ವಶಪಡಿಸಿಕೊಂಡ ವಾಹನಗಳು ಮತ್ತು ಮದ್ಯವನ್ನು ಬಿಟ್ಟು ಕಳುಹಿಸಲು ಲಂಚ ತೆಗೆದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಸಿಎನ್‌ಜಿ ಆಟೋವನ್ನು ಗಸ್ತು ತಿರುಗಾಟಕ್ಕೆ ಬಳಕೆ ಮಾಡಲಾಗುತ್ತಿತ್ತು ಎಂದು ಈ ಜಾಲದಲ್ಲಿ ಸಿಲುಕಿದ್ದ ಸಂತ್ರಸ್ತನೊಬ್ಬ ಹೇಳಿಕೊಂಡಿದ್ದಾನೆ.

ಈ ಜಾಲ ಬಹಿರಂಗವಾಗಿದ್ದು ಹೇಗೆ? ; ಕಸ್ಬಾದ ರಾಣಿ ಸತಿ ದೇವಸ್ಥಾನದಲ್ಲಿ ತರಬೇತಿಗಾಗಿ ಅಭ್ಯರ್ಥಿಗಳನ್ನು ಕರೆದಾಗ ಇದು, ನಕಲಿ ಪೊಲೀಸ್ ಠಾಣೆ ಎಂಬ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಕೆಲವು ಹಳೆಯ ಸಂತ್ರಸ್ತರು, ಇದು ನಕಲಿ ಪೊಲೀಸ್​ ಠಾಣೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ಎಲ್ಲಾ ಯುವಕರು ಅನುಮಾನಗೊಂಡು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಆ ಬಳಿಕ ಇವರೆಲ್ಲ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಆ ಬಳಿಕ ಯುವಕರು ತಮ್ಮ ಹಣವನ್ನು ಮರಳಿ ಪಡೆಯಲು ರಾಹುಲ್ ಕುಮಾರ್ ಸಾಹ್ ಅವರ ಮನೆಗೆ ಹೋಗಿದ್ದಾರೆ. ಆದರೆ ಈ ಬಗ್ಗೆ ಸುಳಿವು ಪಡೆದ ಪ್ರಮುಖ ಆರೋಪಿ ಎಸ್ಕೇಪ್​ ಆಗಿದ್ದಾನೆ.

ಕಸ್ಬಾ ಪೊಲೀಸ್​ ಠಾಣೆಗೆ ತೆರಳಿ ದೂರು: ಈ ನಡುವೆ ವಂಚನೆಗೆ ಒಳಗಾದ ಯುವಕರು ಕಸ್ಬಾ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲಿನ ಪೊಲೀಸ್​​​ ಅಧಿಕಾರಿಗಳು ಮೊಹನಿಯಲ್ಲಿ ಯಾವುದೇ ಪೊಲೀಸ್ ಠಾಣೆ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಸ್ಬಾ ಪೊಲೀಸರು, ಪ್ರಮುಖ ಆರೋಪಿ ರಾಹುಲ್​ ಮನೆಗೆ ತೆರಳಿ, ಆತ ಶರಣಾಗುವಂತೆ ಹೇಳಿ ಎರಡು ದಿನಗಳ ಕಾಲಾವಕಾಶ ನೀಡಿದ್ದಾರೆ. ಎರಡು ದಿನಗಳ ಒಳಗಾಗಿ ಆರೋಪಿ ಶರಣಾಗದಿದ್ದರೆ, ಕೋರ್ಟ್​ ಆದೇಶದೊಂದಿಗೆ ಮನೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಆರೋಪಿಯ ಪೋಷಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸೂಕ್ತ ತನಿಖೆಗೆ ಕಸ್ಬಾ ಶಾಸಕರ ಒತ್ತಾಯ: ಬಿಹಾರದ ಮಾಜಿ ಸಚಿವ ಮತ್ತು ಕಸ್ಬಾ ಶಾಸಕ ಮೊಹಮ್ಮದ್ ಅಫಾಕ್ ಆಲಂ, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಯುತ ತನಿಖೆ ನಡೆಸುವಂತೆ ಪೂರ್ಣಿಯಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯ ಕೆ. ಶರ್ಮಾ ಗೆ ಒತ್ತಾಯಿಸಿದ್ದಾರೆ. ಇಷ್ಟು ದೊಡ್ಡ ವಂಚನೆ ನಡೆಯುತ್ತಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರ ನಿರುದ್ಯೋಗವನ್ನು ಉತ್ತೇಜಿಸುತ್ತಿರುವುದರಿಂದ ವಿದ್ಯಾವಂತ ಯುವಕರು ವಂಚಕರ ಬಲೆಗೆ ಬೀಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಸ್ಬಾ ಪೊಲೀಸ್ ಎಸ್‌ಎಚ್‌ಒ ಹೇಳಿದ್ದಿಷ್ಟು: ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣದ ಆರೋಪಿ ರಾಹುಲ್ ಕುಮಾರ್ ಸಾಹ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಹುಲ್ ಕುಮಾರ್ ಬಂಧನಕ್ಕಾಗಿ ಹಲವಾರು ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ. ರಾಹುಲ್ ಕುಟುಂಬಕ್ಕೆ ಎರಡು ದಿನಗಳ ಗಡುವು ನೀಡಲಾಗಿದೆ. ಆತ ಶರಣಾಗದಿದ್ದರೆ ಕಾನೂನಿನ ಪ್ರಕಾರ ಜಪ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಕಸ್ಬಾ ಪೊಲೀಸ್ ಎಸ್‌ಎಚ್‌ಒ ಅಜಯ್ ಕುಮಾರ್ ಅಜ್ನಬಿ ಹೇಳಿದ್ದಾರೆ.

ಈ ಗ್ಯಾಂಗ್‌ನ ಇತರ ಸಹಚರರು ಯಾರು? ಅದರ ಪ್ರಮುಖ ಕಿಂಗ್‌ಪಿನ್ ಯಾರು? ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

Previous Post

ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

Next Post

ನಿಮ್ಮಲ್ಲಿ ತಾಕತ್ತಿದೆ, ನಮ್ಮಲ್ಲಿ ಪೊಟ್ಟು ವಾಟ್ಸಪ್ ಚರ್ಚೆಗಳಿವೆ’: ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಕಾಮೆಂಟ್ ವೈರಲ್

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.