
ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದು ಐವರು ಪ್ರಾಣ ಕಳೆದುಕೊಂಡ ಘಟನೆ ಮುಂಬೈನಲ್ಲಿ ಇಂದು ಬೆಳಗ್ಗೆ ನಡೆದಿದೆ. ದುರ್ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಿವ ಮತ್ತು ಕೊಪರ್ (Diva and Kopar) ರೈಲ್ವೇ ನಿಲ್ದಾಣದ ಮಧ್ಯೆ ಅನಾಹುತ ಸಂಭವಿಸಿದೆ. ಪುಷ್ಪಕ್ ಎಕ್ಸ್ಪ್ರೆಸ್ ರೈಲು (Pushpak express) ಕಾಸರಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಪ್ರಾಥಮಿಕ ವರದಿ ಪ್ರಕಾರ, ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕಿಕ್ಕಿರಿದು ತುಂಬಿತ್ತು. ರೈಲಿನ ಬಾಗಿಲು ಬಳಿ ಪ್ರಯಾಣಿಕರು ಜೋತು ನಿಂತಿದ್ದರು. ಈ ವೇಳೆ ಕೆಲವು ಪ್ರಯಾಣಿಕರು ನೆಲಕ್ಕುರುಳಿ ಬಿದ್ದಿದ್ದಾರೆ. ಇದರಿಂದ ಐದು ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಇನ್ನು, ಗಾಯಗೊಂಡವರನ್ನು ಕಲ್ವಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.