ಬೆಂಗಳೂರು : ಕೊಳತ್ತಮಜಲ್ ಮಸೀದಿಯ ಪ್ರಧಾನ ಕಾರ್ಯದರ್ಶಿ ಮತ್ತು SKSSF ಕೊಳತ್ತಮಜಲ್ ಶಾಖೆಯ ಸದಸ್ಯ ಅಬ್ದುಲ್ ರಹಿಮಾನ್ ಕೊಲೆ ಮತ್ತು ಕುಡುಪು ಗುಂಪು ಹತ್ಯೆ ಬಗ್ಗೆ ಉಪ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ ಶಿವಕುಮಾರ್ ರವರ ಜೊತೆ ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷಾದ್ ಉಪಸ್ಥಿತಿಯಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಎಲ್ಲಾ ರೀತಿಯ ಕಾನೂನು ಕ್ರಮವನ್ನು ಯಾವುದೇ ಮುಲಾಜಿಲ್ಲದೆ ಕೈಗೊಳ್ಳುವುದಾಗಿ SKSSF ನಾಯಕರಿಗೆ ಭರವಸೆ ನೀಡಿದರು.
ನಿಯೋಗದಲ್ಲಿ SKSSF ಜಿಲ್ಲಾಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್ ಕಿನ್ಯ ಕಾರ್ಯದರ್ಶಿ ಅರೀಫ್ ಕಮ್ಮಾಜೆ, ಜಿಲ್ಲಾ ವಿಖಾಯ ಚೈರ್ಮೆನ್ ಇಬ್ರಾಹಿಂ ಕುಕ್ಕಟ್ಟೆ, ಜಿಲ್ಲಾ ವಿಖಾಯ ಉಸ್ತುವಾರಿ ಮುಸ್ತಫಾ ಕಟ್ಟದಪಡ್ಪು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಸಾರ್ ಬೆಂಗ್ರೆ, ಜಿಲ್ಲಾ ಉಪಾಧ್ಯಕ್ಷರಾದ ಆಸೀಫ್ ಅಬ್ದುಲ್ಲಾ, ಅಬ್ಬಾಸ್ ನಾಡಜೆ ಉಪಸ್ಥಿತರಿದ್ದರು.